ರಿಲಯನ್ಸ್ ಜಿಯೋ (Reliance Jio), ವಿವಿಧ ಕೊಡುಗೆಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅದರಲ್ಲೂ Jio 5G ಬಂದ ಮೇಲೆ, ಹೆಚ್ಚಿನ ಪ್ರದೇಶಗಳಲ್ಲಿ ಜಿಯೋ ಕವರೇಜ್ ಇದ್ದು, ಆಕರ್ಷಕ ಆಫರ್ ನೀಡುವ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗಿಂತಲೂ ಅಧಿಕ ಸಂಖ್ಯೆಯ ಬಳಕೆದಾರರನ್ನು ಸೆಳೆಯುತ್ತಿದೆ. ಈ ಬಾರಿ ಜಿಯೋ, ಪ್ರಿಪೇಯ್ಡ್ ಹೊಸ ಪ್ಲ್ಯಾನ್ ಪರಿಚಯಿಸಿದೆ. ಜಿಯೋ ₹2,999 ರೀಚಾರ್ಜ್ ಮಾಡಿದರೆ, 1 ವರ್ಷ ವ್ಯಾಲಿಡಿಟಿ ದೊರೆಯುತ್ತದೆ. ಅಲ್ಲದೆ, ಪ್ರತಿದಿನ 2.5 ಜಿಬಿ Jio 5G ಡೇಟಾ ದೊರೆಯಲಿದೆ. ಆಗಾಗ ರೀಚಾರ್ಜ್ ಮಾಡುವ ಬದಲು, ಒಮ್ಮೆಲೆ ವಾರ್ಷಿಕ ಪ್ಲ್ಯಾನ್ ರೀಚಾರ್ಜ್ ಮಾಡಿದರೆ, ಅದರಿಂದ ಉಳಿತಾಯವೂ, ಅನುಕೂಲವೂ ಆಗಲಿದೆ.
ವಾರ್ಷಿಕ ಪ್ಲ್ಯಾನ್ ಬಯಸುವವರನ್ನು ಗಮನದಲ್ಲಿರಿಸಿಕೊಂಡು, ರಿಲಯನ್ಸ್ ಜಿಯೋ ಪರಿಚಯಿಸಿದೆ ಹೊಸ ರಿಚಾರ್ಜ್ ಪ್ಲ್ಯಾನ್. ಭಾರತದಲ್ಲಿನ ಪ್ರಿಪೇಯ್ಡ್ ಗ್ರಾಹಕರು ₹2,999 ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ 1 ವರ್ಷ ವ್ಯಾಲಿಡಿಟಿ ದೊರೆಯಲಿದೆ. ಅಲ್ಲದೆ, ಈ ಪ್ಲ್ಯಾನ್ನಲ್ಲಿ ಪ್ರತಿದಿನ 2.5 ಜಿಬಿ Jio 5G ಡೇಟಾ ಕೊಡುಗೆ ದೊರೆಯಲಿದೆ. ಅಂದರೆ, ಗ್ರಾಹಕರು ಈ ದೀರ್ಘಾವಧಿಯ ಪ್ಲ್ಯಾನ್ ರಿಚಾರ್ಜ್ ಮಾಡಿದರೆ, ವಾರ್ಷಿಕ 912.5GB ಡೇಟಾ ಅಂದರೆ ದಿನಕ್ಕೆ 2.5GB ಡೇಟಾ ಮಿತಿಯಂತೆ ದೊರೆಯಲಿದೆ.
ಜಿಯೋ ₹2,999 ಪ್ಲ್ಯಾನ್ ರಿಚಾರ್ಜ್ ಮಾಡುವ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಸಿನಿಮಾ ಕೊಡುಗೆ ದೊರೆಯಲಿದೆ. ಈ ಬಗ್ಗೆ ಕಂಪನಿ ಪೋರ್ಟಲ್ನಲ್ಲಿ ಹೊಸ ಆಫರ್ ವಿವರವನ್ನು ರಿಲಯನ್ಸ್ ಜಿಯೋ 5G ಪ್ರಕಟಿಸಿದೆ. ರಿಲಯನ್ಸ್ ಜಿಯೋ, ಈಗಾಗಲೇ 335 ನಗರಗಳಲ್ಲಿ ಜಿಯೋ 5G ನೆಟ್ವರ್ಕ್ ಸ್ಥಾಪಿಸಿದೆ. 2023ರ ಕೊನೆಗೆ ದೇಶದ ಎಲ್ಲ ಪ್ರಮುಖ ನಗರಗಳಿಗೆ ಜಿಯೋ 5G ವಿಸ್ತರಣೆ ಮಾಡುವುದಾಗಿ ಕಂಪನಿ ಹೇಳಿದೆ. ಅಲ್ಲದೆ, ವಾರ್ಷಿಕ ಪ್ಲ್ಯಾನ್ ಬೇಡವಾದರೆ ಇತರ ಕಿರು ಅವಧಿಯ ಪ್ಲ್ಯಾನ್ ಲಭ್ಯವಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಿವಿಧ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಲಭ್ಯವಿದೆ.
Published On - 7:02 pm, Thu, 16 March 23