New Year: ಹೊಸ ವರ್ಷಕ್ಕೆ ಜಿಯೋದಿಂದ ಧಮಾಕ ಆಫರ್ ಘೋಷಣೆ: ದಂಗಾದ ಏರ್ಟೆಲ್, ವೊಡಾಫೋನ್ ಐಡಿಯಾ

| Updated By: Vinay Bhat

Updated on: Dec 24, 2022 | 1:49 PM

Jio Happy New Year 2023 plan: 2023ರ ಹೊಸ ವರ್ಷದ ಸಂಭ್ರಮಕ್ಕಾಗಿ ಜಿಯೋ ಪ್ರಕಟಿಸಿರುವುದು 2023 ರೂ. ಬೆಲೆಯ ಹೊಸ ರೀಚಾರ್ಜ್ ಪ್ಲಾನ್. ಈ ಯೋಜನೆಯು 252 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಜಿಯೋ ಗ್ರಾಹಕರು ಪ್ರತಿದಿನ 2.5 GB ಡೇಟಾ ಪ್ರಯೋಜನ ಪಡೆಯಬಹುದು.

New Year: ಹೊಸ ವರ್ಷಕ್ಕೆ ಜಿಯೋದಿಂದ ಧಮಾಕ ಆಫರ್ ಘೋಷಣೆ: ದಂಗಾದ ಏರ್ಟೆಲ್, ವೊಡಾಫೋನ್ ಐಡಿಯಾ
Reliance JIO
Follow us on

ಹೊಸ ವರ್ಷ 2023ಕ್ಕೆ (New Year 2023) ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ. ನ್ಯೂ ಇಯರ್ ಪ್ರಯುಕ್ತ ಈಗಾಗಲೇ ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಮೇಳಗಳು ಶುರುವಾಗಿದ್ದು ಬಂಪರ್ ಆಫರ್​ನಲ್ಲಿ ಸ್ಮಾರ್ಟ್​ಫೋನ್ (Smartphone)​ಗಳು ಸೇರಿದಂತೆ ಎಲ್ಲ ಪ್ರಾಡಕ್ಟ್​ಗಳು ಸೇಲ್ ಆಗುತ್ತಿದೆ. ಇದರ ನಡುವೆ ದೇಶದ ನಂಬರ್ ಟೆಲಿಕಾಂ ಕಂಪನಿ ರಿಲಯನ್ಸ್ ಒಡೆತನದ ಜಿಯೋ (Jio) ಕೂಡ ಹೊಸ ವರ್ಷದ ಪ್ರಯುಕ್ತ ಧಮಾಕ ಆಫರ್​ವೊಂದನ್ನು ಪರಿಚಯಿಸಿದೆ. ಹೊಸ ವರ್ಷ 2023 ಕ್ಕಾಗಿ ಜಿಯೋ ಹೊಸ ಹ್ಯಾಪಿ ನ್ಯೂ ಇಯರ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಗ್ರಾಹಕರು ಬಹಳಷ್ಟು ಆಫರ್ಸ್​ ಅನ್ನು ಪಡೆಯಬಹುದಾಗಿದೆ. 2023 ರಿಂದ ಈ ಯೋಜನೆಗಳು ಜಾರಿಗೆ ಬರಲಿದೆ ಎಂದು ಕಂಪನಿ ತಿಳಿದಿದೆ. ಹಾಗಾದರೆ ಜಿಯೋ ಘೋಷಿಸಿರುವ ಹೊಸ ಯೋಜನೆ ಯಾವುದು?, ಏನೆಲ್ಲಾ ಪ್ರಯೋಜನಗಳನ್ನು ಹೊಂದಿದೆ ಎಂಬುದನ್ನು ನೋಡೋಣ.

2023ರ ಹೊಸ ವರ್ಷದ ಸಂಭ್ರಮಕ್ಕಾಗಿ ಜಿಯೋ ಪ್ರಕಟಿಸಿರುವುದು 2023 ರೂ. ಬೆಲೆಯ ಹೊಸ ರೀಚಾರ್ಜ್ ಪ್ಲಾನ್. ಈ ಯೋಜನೆಯು 252 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಜಿಯೋ ಗ್ರಾಹಕರು ಪ್ರತಿದಿನ 2.5 GB ಡೇಟಾ ಪ್ರಯೋಜನ ಪಡೆಯಬಹುದು. ಜೊತೆಗೆ ಅನಿಯಮಿತ ಉಚಿತ ಕರೆಗಳು ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಉಚಿತ ನೀಡುತ್ತಿದೆ. ಈ ಯೋಜನೆಯು ಗ್ರಾಹಕರಿಗೆ ಒಟ್ಟಾರೆಯಾಗಿ 630 GB ಡೇಟಾವನ್ನು ಒದಗಿಸಲಿದೆ. ಜಿಯೋವಿನ ಇತರೆ ಪ್ರಿಪೇಡ್ ಯೋಜನೆಗಳಂತೆಯೇ ಈ ಯೋಜನೆಯು ಸಹ ಗ್ರಾಹಕರು ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಸೇರಿದಂತೆ ಜಿಯೋ ಸೂಟ್ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ನೀಡುತ್ತದೆ. ಆದರೆ, ಈ ಯೋಜನೆಯು ಯಾವುದೇ ಓಟಿಟಿ ಚಂದಾದಾರಿಕೆಗಳನ್ನು ಪಡೆದುಕೊಂಡಿಲ್ಲ.

Paytm Wallet Transit Card: ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್​ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಇದನ್ನೂ ಓದಿ
Tecno Pova 3: 7000mAh ಬ್ಯಾಟರಿ, 50MP ಕ್ಯಾಮೆರಾ: ಕೇವಲ 9,999 ರೂ. ಗೆ ಖರೀದಿಸಿ ಟೆಕ್ನೋ ಪೊವಾ 3 ಸ್ಮಾರ್ಟ್​ಫೋನ್
Tech Tips: ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ?: ಟೆನ್ಶನ್ ಬೇಡ, ಹೀಗೆ ಮಾಡಿ
Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೈಬರ್ ಕ್ರೈಮ್: 2019 ರಿಂದ ಈವರೆಗೆ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
WhatsApp: ಭಾರತದಲ್ಲಿ 37 ಲಕ್ಷಕ್ಕೂ ಅಧಿಕ ಖಾತೆ ಬ್ಯಾನ್ ಮಾಡಿದ ವಾಟ್ಸ್​ಆ್ಯಪ್: ತಪ್ಪಿಯೂ ಹೇಗೆ ಮಾಡಬೇಡಿ

ಇದರ ಜೊತೆಗೆ ಜಿಯೋದ 2999ರೂ. ಪ್ರಿಪೇಯ್ಡ್‌ ಯೋಜನೆ ಇದು ವಾರ್ಷಿಕ ಅವಧಿಯದ್ದಾಗಿದೆ. 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್​ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಒದಗಿಸುತ್ತದೆ. ಪ್ರತಿದಿನ 100 ಉಚಿತ ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಇತರೆ ಆಪ್‌ಗಳು ಲಭ್ಯವಿದೆ.

ಇನ್ನೂ ಜಿಯೋದ749 ರೂಪಾಯಿಯ ಯೋಜನೆ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆ ಮೂಲಕ 2 GB ದೈನಂದಿನ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಒಟ್ಟಾರೆಯಾಗಿ ಈ ಯೋಜನೆಯಲ್ಲಿ 180 GB ಡೇಟಾ ನೀಡಲಾಗಿದೆ. ಜೊತೆಗೆ ಅನ್ಲಿಮಿಟೆಡ್​ ಕಾಲ್​, ಪ್ರತೀ ದಿನ 100 ಉಚಿತ ಎಸ್​ಎಮ್​ಎಸ್​ ಪ್ರಯೋಜನಗಳು ದೊರೆಯಲಿದೆ. ಈ ಯೋಜನೆಯಲ್ಲಿ ಕೂಡ ಜಿಯೋಟಿವಿ, ಜಿಯೋಸಿನೆಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೀ ಕ್ಲೌಡ್​ ಅಪ್ಲಿಕೇಶನ್​ಗಳಿಗೆ ಉಚಿತ ಪ್ರವೇಶ ಪಡೆಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ