ಟೆಲಿಕಾಂ (Telecom) ಕಂಪನಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಎರಡು ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ ಹೊಸದಾಗಿ 19 ರೂ. ಮತ್ತು 29 ರೂಪಾಯಿಯ ಡೇಟಾ ಬೂಸ್ಟರ್ (Data Booster) ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ರಿಲಯನ್ಸ್ ಜಿಯೋ ಬಳಕೆದಾರರು ಈಗ 7 ಡೇಟಾ ಬೂಸ್ಟರ್ ಯೋಜನೆಗಳನ್ನು ಹೊಂದಿದ್ದಾರೆ. ಹಾಗಾದರೆ ನೂತನವಾದ 19 ರೂ. ಮತ್ತು 29 ರೂ. ವಿನ ಪ್ಲಾನ್ನಲ್ಲಿ ಎಷ್ಟು ಜಿಬಿ ಡೇಟಾ ಸೌಲಭ್ಯವಿದೆ?, ಇಲ್ಲಿದೆ ನೋಡಿ ಎಲ್ಲ ಮಾಹಿತಿ.
19 ರೂ. ಡೇಟಾ ಬೂಸ್ಟರ್ ಯೋಜನೆ ಅಡಿಯಲ್ಲಿ, ರಿಲಯನ್ಸ್ ಜಿಯೋ ಬಳಕೆದಾರರು ಹೈ-ಸ್ಪೀಡ್ 1.5GB ಡೇಟಾವನ್ನು ಪಡೆಯುತ್ತಾರೆ. ಅಂತೆಯೆ 29 ರೂ. ವಿನ ಡೇಟಾ ಬೂಸ್ಟರ್ ಯೋಜನೆಯು 2.5GB ಡೇಟಾ ಆಯ್ಕೆಯನ್ನು ಹೊಂದಿದೆ.
ಈ ಎರಡೂ ಯೋಜನೆಗಳು ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತವೆ. ಆದರೆ ಒಮ್ಮೆ ನಿಗದಿಪಡಿಸಿದ ಡೇಟಾ ಮಿತಿಯನ್ನು ಮೀರಿದರೆ ಈ ಡೇಟಾ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಅಲ್ಲದೆ, ಇವು ಡೇಟಾ ಬೂಸ್ಟರ್ ಯೋಜನೆಗಳಾಗಿರುವ ಕಾರಣ ಬಳಕೆದಾರರು ಡೇಟಾ ಪ್ರಯೋಜನಗಳನ್ನು ಮಾತ್ರ ಪಡೆಯುತ್ತಾರೆ ಯಾವುದೇ ಎಸ್ಎಮ್ಎಸ್ ಅಥವಾ ಅನಿಯಮಿತ ಕರೆ ಸೌಲಭ್ಯವಿಲ್ಲ.
Amazon Prime Day: ಅಮೆಜಾನ್ ಪ್ರೈಮೆ ಡೇ ಸೇಲ್ನಲ್ಲಿ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್ಫೋನ್ಸ್ ಇಲ್ಲಿದೆ ನೋಡಿ
ಇತ್ತೀಚೆಗಷ್ಟೆ ರಿಲಯನ್ಸ್ ಜಿಯೋದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾ ಕೂಡ ಎರಡು ಹೊಸ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ವಿ ತನ್ನ ಬಳಕೆದಾರರಿಗಾಗಿ ಸೂಪರ್ ಡೇ ಮತ್ತು ಸೂಪರ್ ಅವರ್ ಡೇಟಾ ಪ್ಯಾಕ್‌ಗಳನ್ನು ಹೊರತಂದಿದೆ. ಸೂಪರ್ ಅವರ್ ಪ್ಯಾಕ್‌ನ ಬೆಲೆ 24 ರೂ ಆಗಿದೆ. ಇದರ ಮೂಲಕ ಬಳಕೆದಾರರು ಒಂದು ಗಂಟೆಯವರೆಗೆ ಅನಿಯಮಿತ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಇನ್ನು ಸೂಪರ್ ಡೇ ಪ್ಯಾಕ್‌ನ ಬೆಲೆ 49 ರೂ, ಆಗಿದ್ದು ಇದು 24 ಗಂಟೆಗಳ ಮಾನ್ಯತೆಯೊಂದಿಗೆ 6GB ಯ ಡೇಟಾ ಪ್ರಯೋಜನವನ್ನು ನೀಡುತ್ತದೆ.
ಕಳೆದ ವಾರ ರಿಲಯನ್ಸ್ ಜಿಯೋ ಭಾರತದಲ್ಲಿ 4G ಇಂಟರ್ನೆಟ್ ಸಾಮರ್ಥ್ಯಗಳೊಂದಿಗೆ ಕೈಗೆಟುಕುವ ಬೆಲೆಗೆ JioBharat ಫೋನನ್ನು ಅನ್ನು ಪರಿಚಯಿಸಿದೆ. ಕೇವಲ 999 ಬೆಲೆಯ ಈ ಫೋನ್ ಅನ್ನು 2G ಫೋನ್ ಬಳಕೆದಾರರನ್ನು 4G ನೆಟ್‌ವರ್ಕ್‌ಗೆ ಪರಿವರ್ತಿಸಲು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಫೋನ್ ರಿಲಯನ್ಸ್ ಡಿಜಿಟಲ್ ಸ್ಟೋರ್ ಸೇರಿದಂತೆ ರಿಟೇಲ್ ಸ್ಟೋರ್ಗಳನ್ನು ಖರೀದಿಗೆ ಲಭ್ಯವಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ