WhatsApp Web: ವಾಟ್ಸ್ಆ್ಯಪ್ ವೆಬ್ ಬಳಕೆದಾರರಿಗೆ ಭರ್ಜರಿ ಸುದ್ದಿ: ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ
WhatsApp Web: ಈವರೆಗೆ ವಾಟ್ಸ್ಆ್ಯಪ್ ವೆಬ್ನಲ್ಲಿ ಲಾಗಿನ್ ಆಗಬೇಕು ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕಿತ್ತು. ಆದರೆ, ಇದಕ್ಕೆ ಕ್ಯಾಮೆರಾ ಅವಶ್ಯಕ. ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸದವರು ಲಾಗಿನ್ ಆಗಲು ಕಷ್ಟ ಪಡುತ್ತಿದ್ದರು. ಈ ಬಗ್ಗೆ ಅನೇಕರು ದೂರು ಕೂಡ ನೀಡಿದ್ದರು.
ಈ ಹಿಂದೆ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಹೆಚ್ಚು ನೂತನ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿದ್ದ ವಾಟ್ಸ್ಆ್ಯಪ್ ಇದೀಗ ವೆಬ್ (WhatsApp Web) ಬಳಕೆದಾರರಿಗೆ ಕೂಡ ಹೊಸ ಹೊಸ ಫೀಚರ್ಗಳನ್ನು ನೀಡುತ್ತಿದೆ. ಇದಕ್ಕೆ ಕಾರಣ ವಾಟ್ಸ್ಆ್ಯಪ್ ವೆಬ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆ ಆಗುತ್ತಿರುವುದು. ಇದನ್ನು ಮನಗಂಡು ಮೆಟಾ ಒಡೆತನದ ಪ್ರಸಿದ್ಧ ಮೆಸೀಜಿಂಗ್ ಅಪ್ಲಿಕೇಷನ್ ಇದೀಗ ಹೊಸ ಆಯ್ಕೆಯೊಂದನ್ನು ತರಲು ಸಜ್ಜಾಗಿದೆ. ವಾಟ್ಸ್ಆ್ಯಪ್ ತನ್ನ ಬೀಟಾ ಚಾನಲ್‌ನಲ್ಲಿ ಈ ಕುರಿತ ಫೀಚರ್ ರಿಲೀಸ್ ಮಾಡಿದೆ. ಇದರ ಮೂಲಕ ಬಳಕೆದಾರರು ಇನ್ಮುಂದೆ ವಾಟ್ಸ್ಆ್ಯಪ್ ವೆಬ್ನಲ್ಲಿ ಮೊಬೈಲ್ ನಂಬರ್ (Mobile Number) ನಮೋದಿಸುವ ಮೂಲಕ ಲಾಗಿನ್ ಆಗಬಹುದಾಗಿದೆ.
ಈವರೆಗೆ ವಾಟ್ಸ್ಆ್ಯಪ್ ವೆಬ್ನಲ್ಲಿ ಲಾಗಿನ್ ಆಗಬೇಕು ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕಿತ್ತು. ಆದರೆ, ಇದಕ್ಕೆ ಕ್ಯಾಮೆರಾ ಅವಶ್ಯಕ. ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸದವರು ಲಾಗಿನ್ ಆಗಲು ಕಷ್ಟ ಪಡುತ್ತಿದ್ದರು. ಈ ಬಗ್ಗೆ ಅನೇಕರು ದೂರು ಕೂಡ ನೀಡಿದ್ದರು. ಸದ್ಯ ಈ ಸಮಸ್ಯೆಗಳನ್ನು ಸರಿಪಡಿಸಲು ಕ್ಯೂಆರ್ ಕೋಡ್ ಅಥವಾ ಮೊಬೈಲ್ ನಂಬರ್ ಅನ್ನು ಹಾಕುವ ಮೂಲಕ ಲಾಗಿನ್ ಮಾಡಲು ಅವಕಾಶ ನೀಡುತ್ತಿದೆ.
WABetaInfo ಪ್ರಕಾರ, ಆಂಡ್ರಾಯ್ಡ್ನ ಕೆಲ ಬೀಟಾ ಪರೀಕ್ಷಕರಿಗೆ ಈ ಫೀಚರ್ ಲಭ್ಯವಾಗುತ್ತಿದೆ. ವರದಿಯ ಪ್ರಕಾರ ‘2.23.14.18’ ಆವೃತ್ತಿ ಅಪ್ಡೇಟ್ನಲ್ಲಿ ಈ ಆಯ್ಕೆ ಸಿಗಲಿದೆಯಂತೆ. ಕೆಲ ಅದೃಷ್ಟಶಾಲಿ ಬಳಕೆದಾರರಿಗೆ ಈ ಫೀಚರ್ ಈಗಾಗಲೇ ಲಭ್ಯವಾಗುತ್ತಿದೆ. ನಿಮಗೆ ಈ ಆಯ್ಕೆ ಲಭ್ಯವಿದೆಯೇ ಎಂದು ನೋಡಲು ಗೂಗಲ್ ಪ್ಲೇ ಸ್ಟೋರ್ಗೆ ತೆರಳಿ ಅಪ್ಡೇಟ್ ಮಾಡುವ ಮೂಲಕ ಪರಿಶೀಲಿಸಬಹುದು.
ವಾಟ್ಸ್ಆ್ಯಪ್ ವೆಬ್: ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಹೇಗೆ?:
- ವಾಟ್ಸ್ಆ್ಯಪ್ ವೆಬ್ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- QR ಕೋಡ್‌ನಲ್ಲಿ ಕೆಳಗೆ ಇರಿಸಲಾಗಿರುವ ‘ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ’ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನೀವು ಲಿಂಕ್ ಮಾಡಲು ಬಯಸುವ ಖಾತೆಯ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಮುಂದುವರಿಯಿರಿ
- ಈಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ತೆರೆಯಿರಿ
- ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಐಕಾನ್‌ನಿಂದ ‘ಲಿಂಕ್ ಮಾಡಲಾದ ಸಾಧನಗಳಿಗೆ’ ಹೋಗಿ
- ‘ಲಿಂಕ್ ಎ ಡಿವೈಸ್’ ಮೇಲೆ ಟ್ಯಾಪ್ ಮಾಡಿ ಮತ್ತು ‘ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ’ ಆಯ್ಕೆಯ ಮೇಲೆ ಟ್ಯಾಪ್ ಮಾಡಿ
- ಬ್ರೌಸರ್ ಪರದೆಯಲ್ಲಿ ಪ್ರದರ್ಶಿಸಲಾದ 8-ಅಕ್ಷರಗಳ ಕೋಡ್ ಅನ್ನು ನಮೂದಿಸಿದರೆ ಆಯಿತು
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ