Samsung Event: ಜುಲೈ 26ಕ್ಕೆ ಸ್ಯಾಮ್ಸಂಗ್ನಿಂದ ಅತಿ ದೊಡ್ಡ ಈವೆಂಟ್: ಗ್ಯಾಲಕ್ಸಿ Z ಫೋಲ್ಡ್ ಸರಣಿ ಬಿಡುಗಡೆ
ಸ್ಯಾಮ್ಸಂಗ್ ಅನ್ಪ್ಯಾಕ್ಡ್ ಈವೆಂಟ್ನಲ್ಲಿ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಸ್ಮಾರ್ಟ್ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪನಿ ಈಗಾಗಲೇ ಪೋಸ್ಟರ್ ಬಿಟ್ಟು ಖಚಿತ ಪಡಿಸಿದೆ. ಈ ಪ್ರೀಮಿಯಂ ಫೋನ್ಗಳು ದುಬಾರಿ ಬೆಲೆ ಹೊಂದಿದ್ದು, ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ.
ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್ (Samsung) ಜುಲೈ 26ಕ್ಕೆ ತನ್ನ ಅತಿ ದೊಡ್ಡ ಈವೆಂಟ್ ಅನ್ನು ಘೋಷಣೆ ಮಾಡಿದೆ. ಇದರಲ್ಲಿ ಗ್ಯಾಲಕ್ಸಿಯ ನೂತನ ಪ್ರಾಡಕ್ಟ್ಗಳು ಬಿಡುಗಡೆ ಆಗಲಿದೆ. ಮುಖ್ಯವಾಗಿ ಗ್ಯಾಲಕ್ಸಿ Z ಫೋಲ್ಡ್ (Galaxy Z Fold) ಸರಣಿಯ ಸ್ಮಾರ್ಟ್ಫೋನ್ಗಳು ಅನಾವರಣಗೊಳ್ಳಲಿದೆ. ಇದರ ಜೊತೆಗೆ ಗ್ಯಾಲಕ್ಸಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 (Galaxy Watch 6) ಸರಣಿ ಕೂಡ ಬಿಡುಗಡೆ ಆಗಲಿದೆ. ಸದ್ಯದಲ್ಲೇ ಇದರ ಪ್ರಿ ಬುಕ್ಕಿಂಗ್ ಆರ್ಡರ್ ಕೂಡ ಶುರುವಾಗಲಿದೆ. ಆದರೆ, ಆಗಸ್ಟ್ನಲ್ಲಷ್ಟೆ ಈ ಎಲ್ಲ ಪ್ರಾಡಕ್ಟ್ಗಳು ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ.
ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5
ಸ್ಯಾಮ್ಸಂಗ್ ಅನ್ಪ್ಯಾಕ್ಡ್ ಈವೆಂಟ್ನಲ್ಲಿ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಸ್ಮಾರ್ಟ್ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪನಿ ಈಗಾಗಲೇ ಪೋಸ್ಟರ್ ಬಿಟ್ಟು ಖಚಿತ ಪಡಿಸಿದೆ. ಈ ಪ್ರೀಮಿಯಂ ಫೋನ್ಗಳು ದುಬಾರಿ ಬೆಲೆ ಹೊಂದಿದ್ದು, ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. Z ಫ್ಲಿಪ್ 5 ಡಿಸೈನ್ ವಿಶೇಷವಾಗಿದ್ದು ಇದು ಡಸ್ಟ್ ಪ್ರೊಟೆಕ್ಷನ್ ಮಾಡುತ್ತಂತೆ. ಇದರಲ್ಲಿ ಫಿಂಗರ್ಪ್ರಿಂಟ್ ಆಯ್ಕೆ ನೀಡಲಾಗಿದೆ. ಮೆಟಲ್ ಫ್ರೇಮ್ನಿಂದ ಬರಲಿದೆಯಂತೆ. ಇದು ಕ್ವಾಲ್ಕಂನ ನೂತನ ಸ್ನಾಪ್ಡ್ರಾಗನ್ ಪ್ರೊಸೆಸರ್ ಮೂಲಕ ಬಿಡುಗಡೆ ಆಗಲಿದೆ. ಬಹುಶಃ ಇದು ಸ್ನಾಪ್ಡ್ರಾಗನ್ 8 ಜೆನ್ 2 ಅಥವಾ ಸ್ನಾಪ್ಡ್ರಾಗನ್ 8+ ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಬಹುದು.
ಗ್ಯಾಲಕ್ಸಿ ಫೋಲ್ಡ್ 5 ಫೋನ್ನಲ್ಲಿ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದು 1/1.3 ಇಂಚಿನ Isocell HP2 ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಇದು ಸದ್ಯ ಗ್ಯಾಲಕ್ಸಿ ಎಸ್23 ಆಲ್ಟ್ರಾದಲ್ಲಿ ಈ ಲೆನ್ಸ್ ನೀಡಲಾಗಿದೆ. ಸೂಪರ್ ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿ ಇದರಲ್ಲಿದ್ದು, ಇದು ಫೋಟೋ ಕ್ವಾಲಿಟಿಯಲ್ಲಿ ಕಾಪಾಡುತ್ತಂತೆ.
ಸ್ಯಾಮ್ಸಂಗ್ ವಾಚ್ 6 ಸರಣಿಯು ವಾಚ್ 6 ಮತ್ತು ವಾಚ್ 6 ಕ್ಲಾಸಿಕ್ ಎಂಬ ಸ್ಮಾರ್ಟ್ ವಾಚ್‌ಗಳನ್ನು ಹೊಂದಿರಲಿದೆ. ವಾಚ್ 6 ಮತ್ತು ವಾಚ್ 6 ಕ್ಲಾಸಿಕ್ ಎರಡೂ ಹಿಂದಿನ ವಾಚ್ ಸರಣಿಯಂತೆಯೇ ವಿಭಿನ್ನ ಗಾತ್ರಗಳಲ್ಲಿ ಲಭ್ಯವಿರುತ್ತವೆ. ಗಾತ್ರದಲ್ಲಿ ವ್ಯತ್ಯಾಸಗಳಿದ್ದರೂ, ವೈಶಿಷ್ಟ್ಯಗಳು ಬಹುತೇಕ ಒಂದೇ ಇರಲಿದೆ ಎನ್ನಲಾಗಿದೆ. ಎರಡು ಗ್ಯಾಲಕ್ಸಿ ವಾಚ್ ಮಾದರಿಗಳು Exynos W930 SoC ನಿಂದ ಚಾಲಿತವಾಗಲಿದೆ. WearOS ಅನ್ನು ಹೆಚ್ಚಿಸಲು ಮತ್ತು ಹೊಸ ಆರೋಗ್ಯ-ಕೇಂದ್ರಿತ ವೈಶಿಷ್ಟ್ಯಗಳನ್ನು ಪರಿಚಯಿಸಲು ಸ್ಯಾಮ್ಸಂಗ್ ಗೂಗಲ್ನೊಂದಿಗೆ ಜೊತೆಗೂಡುವ ಸಾಧ್ಯತೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ