Amazon Prime Day: ಅಮೆಜಾನ್ ಪ್ರೈಮೆ ಡೇ ಸೇಲ್​ನಲ್ಲಿ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ

ನೀವು ಗೇಮಿಂಗ್ ಪ್ರಿಯರಾಗಿದ್ದಲ್ಲಿ ಮೊನ್ನೆಯಷ್ಟೆ ಬಿಡುಗಡೆ ಆದ ಐಕ್ಯೂ ನಿಯೋ 7 ಪ್ರೊ 5G ಖರೀದಿಸಬಹುದು. ಇದು ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಹೊಂದಿದ್ದು, ಗೇಮಿಂಗ್​ಗೆ ಹೇಳಿ ಮಾಡಿಸಿದ್ದಾಗಿದೆ.

Amazon Prime Day: ಅಮೆಜಾನ್ ಪ್ರೈಮೆ ಡೇ ಸೇಲ್​ನಲ್ಲಿ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ
Amazon Prime Day Sale
Follow us
Vinay Bhat
|

Updated on: Jul 09, 2023 | 12:44 PM

ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ (Amazon) ಪ್ರತಿ ವರ್ಷ ನಡೆಸುವ ಅಮೆಜಾನ್ ಪ್ರೈಮ್ ಡೇ ಸೇಲ್​ಗೆ (Prime Day Sale) ದಿನಗಣನೆ ಶುರುವಾಗಿದೆ. ಜುಲೈ 15 ಮತ್ತು ಜುಲೈ 16 ರಂದು ಈ ಮೇಳ ನಡೆಯಲಿದ್ದು, ಗ್ರಾಹಕರು ಕಾದು ಕುಳಿತಿದ್ದಾರೆ. ಈ ಬಾರಿ ಕೂಡ ಹಿಂದಿನಂತೆ ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ. ಕಳೆದ ಎರಡು ವಾರಗಳಿಂದ ಬಿಡುಗಡೆ ಆದ ಅನೇಕ ಮೊಬೈಲ್​ಗಳು ಪ್ರೈಮ್ ಡೇ ಸೇಲ್​ನಲ್ಲಿ ಮಾರಟ ಕಾಣಲಿದೆ. ಹಾಗಾದರೆ, ಈ ಬಾರಿಯ ಮೇಳದಲ್ಲಿ ನೀವು ಹೊಸ ಸ್ಮಾರ್ಟ್​ಫೋನ್ (Smartphone) ಖರೀದಿಸಬೇಕು ಎಂಬ ಪ್ಲಾನ್​ನಲ್ಲಿದ್ದರೆ ಇಲ್ಲಿದೆ ನೋಡಿ ಅತ್ಯುತ್ತಮ ಆಯ್ಕೆ.

ನೀವು ಬಜೆಟ್ ಫೋನ್ ಮೇಲೆ ಕಣ್ಣಿಟ್ಟಿದ್ದರೆ ಐಟೆಲ್ A60s ಉತ್ತಮ ಆಯ್ಕೆ. ಇದು 8GB RAM ಮತ್ತು 64GB ಸ್ಟೋರೇಜ್ ಆಯ್ಕೆ ಹೊಂದಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ನೀವು ಗೇಮಿಂಗ್ ಪ್ರಿಯರಾಗಿದ್ದಲ್ಲಿ ಮೊನ್ನೆಯಷ್ಟೆ ಬಿಡುಗಡೆ ಆದ ಐಕ್ಯೂ ನಿಯೋ 7 ಪ್ರೊ 5G ಖರೀದಿಸಬಹುದು. ಇದು ಸ್ನಾಪ್​ಡ್ರಾಗನ್ 8+ Gen 1 ಪ್ರೊಸೆಸರ್ ಹೊಂದಿದ್ದು, ಗೇಮಿಂಗ್​ಗೆ ಹೇಳಿ ಮಾಡಿಸಿದ್ದಾಗಿದೆ. 120Hz 10-ಬಿಟ್ AMOLED ಡಿಸ್ ಪ್ಲೇ, 120W ಫ್ಲ್ಯಾಶ್ ಚಾರ್ಜ್ ಮತ್ತು 5000mAh ಬ್ಯಾಟರಿ ನೀಡಲಾಗಿದೆ.

Tech Tips: ಶುರುವಾಗಿದೆ ಮಳೆಗಾಲ: 100 ರೂ. ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನನ್ನು ವಾಟರ್​ಪ್ರೂಫ್ ಮಾಡುವುದು ಹೇಗೆ?

ಇದನ್ನೂ ಓದಿ
Image
Nothing Phone 1: ನಥಿಂಗ್ ಫೋನ್ 2 ಬಿಡುಗಡೆಗೆ ಕ್ಷಣಗಣನೆ: ನಥಿಂಗ್ ಫೋನ್ 1 ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್
Image
WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ನಿರೀಕ್ಷೆಗೂ ಮೀರಿದ ಫೀಚರ್: ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ
Image
Jio Bharat 4G: ಕೇವಲ 999 ರೂ. ವಿನ ಜಿಯೋ ಭಾರತ್ 4ಜಿ ಫೋನ್ ಇದೀಗ ಭಾರತದಲ್ಲಿ ಖರೀದಿಗೆ ಲಭ್ಯ
Image
Smartphone Tips: ನಿಮ್ಮ ಸ್ಮಾರ್ಟ್​ಫೋನನ್ನು ಕನಿಷ್ಠ ತಿಂಗಳಿಗೆ ಒಮ್ಮೆಯಾದ್ರೂ ಹೀಗೆ ಮಾಡದಿದ್ದಲ್ಲಿ ಹಾಳಾಗುವುದು ಖಚಿತ

ಪ್ರೀಮಿಯಂ ಅನುಭವವನ್ನು ಬಯಸುವವರಿಗೆ ಮೋಟೋರೊಲಾ ರೇಜರ್ 40 ಆಲ್ಟ್ರಾ 5G ಖರೀದಿಸಬಹುದು. ಇದು ವಿಶ್ವದ ಅತಿ ದೊಡ್ಡ ಡಿಸ್ ಪ್ಲೇ ಹೊಂದಿದ್ದು, 6.9-ಇಂಚಿದೆ. 165Hz ರಿಫ್ರೆಶ್ ದರ ಮತ್ತು ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ನೀಡಲಾಗಿದೆ. ಒನ್​ಪ್ಲಸ್ ನಾರ್ಡ್ 3 5G ಕೂಡ ಉತ್ತಮ ಆಯ್ಕೆ ಆಗಿದೆ. ಇದು 6.74-ಇಂಚಿನ ಸೂಪರ್‌ಫ್ಲೂಯಿಡ್ AMOLED ಡಿಸ್ ಪ್ಲೇ, 120Hz ರಿಫ್ರೆಶ್ ದರ ಮತ್ತು ಧೂಳು ಮತ್ತು ನೀರಿನ ರಕ್ಷಣೆಗಾಗಿ IP54 ಪ್ರಮಾಣೀಕರಣದೊಂದಿಗೆ ಉತ್ತಮ ಅನುಭವವನ್ನು ಒದಗಿಸುತ್ತದೆ.

ರಿಯಲ್ ಮಿ ನಾರ್ಜೊ 60 5G 90Hz ಸೂಪರ್ AMOLED ಡಿಸ್ ಪ್ಲೇ ಮತ್ತು ಸ್ಟ್ರೀಟ್ ಫೋಟೋಗ್ರಫಿಗಾಗಿ 64MP ಕ್ಯಾಮೆರಾದೊಂದಿಗೆ ಬಿಡುಗಡೆ ಆಗಿತ್ತು. ಇದರ ಜೊತೆ ರಿಯಲ್ ಮಿ ನಾರ್ಜೊ 60 ಪ್ರೊ 5G ಕೂಡ ಇದ್ದು, 120Hz ಕರ್ವ್ಡ್ ವಿಷನ್ ಡಿಸ್ ಪ್ಲೇ, ಡೈಮೆನ್ಸಿಟಿ 7050 5G ಚಿಪ್‌ಸೆಟ್, 67W SUPERVOOC ಚಾರ್ಜ್ ಮತ್ತು 5000 mAh ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್ M34 5G ಪೂರ್ಣ HD+ ಸ್ಕ್ರೀನ್ ರೆಸಲ್ಯೂಶನ್ ಮತ್ತು 120Hz ನ ರಿಫ್ರೆಶ್ ದರದೊಂದಿಗೆ 6.5-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ. ಎಕ್ಸಿನೊಸ್ 1280 ಪ್ರೊಸೆಸರ್​ನಿಂದ ಚಾಲಿತವಾಗಿದೆ. OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. ಫೋಟೋ ತೆಗೆಯುವಾಗ ಅಥವಾ ವಿಡಿಯೋ ಮಾಡುವಾಗ ಕೈ ಶೇಕ್ ಆದರೂ ಅದ್ಭುತವಾಗಿ ಸೆರೆ ಹಿಡಿಯುತ್ತಂತೆ. 6,000mAh ಸಾಮರ್ಥ್ಯದ ಬ್ಯಾಟರಿ ಇದೆ. ಇನ್ನು ಟೆಕ್ನೋ ಕ್ಯಾಮನ್ 20 ಪ್ರೀಮಿಯರ್ 5G 108MP ಅಲ್ಟ್ರಾವೈಡ್ ಮ್ಯಾಕ್ರೋ ಲೆನ್ಸ್, ಸೊಗಸಾದ ವಿನ್ಯಾಸ, 6.67-ಇಂಚಿನ FHD+ AMOLED ಡಿಸ್ ಪ್ಲೇ ಹೊಂದಿದ್ದು ಅತ್ಯುತ್ತಮ ಆಯ್ಕೆ ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ