Tech Tips: ಶುರುವಾಗಿದೆ ಮಳೆಗಾಲ: 100 ರೂ. ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನನ್ನು ವಾಟರ್​ಪ್ರೂಫ್ ಮಾಡುವುದು ಹೇಗೆ?

Water Proof Smartphone: ನಿಮ್ಮದು ವಾಟರ್​ಪ್ರೂಫ್ ಅಲ್ಲದ ಮೊಬೈಲ್ ಮಳೆಗೆ ಒದ್ದೆ ಆದರೂ ಸರಿಯಾಗಿ ಕೆಲಸ ಮಾಡಬೇಕು ಎಂದರೆ ಇದಕ್ಕೆ ನೀವು ಕೇವಲ 99 ರೂಪಾಯಿ ಖರ್ಚು ಮಾಡಿದರೆ ಸಾಕು. ನಿಮ್ಮ ಸ್ಮಾರ್ಟ್​ಫೋನ್ ವಾಟರ್​ಪ್ರೂಫ್ ಆಗುತ್ತದೆ.

Tech Tips: ಶುರುವಾಗಿದೆ ಮಳೆಗಾಲ: 100 ರೂ. ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನನ್ನು ವಾಟರ್​ಪ್ರೂಫ್ ಮಾಡುವುದು ಹೇಗೆ?
Follow us
|

Updated on: Jul 08, 2023 | 11:33 AM

ಮಳೆಗಾಲದಲ್ಲಿ (Rainy Season) ಹೊರಗೆ ಹೋದಾಗ ಸ್ಮಾರ್ಟ್​ಫೋನ್​ಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳುವುದು ಒಂದು ದೊಡ್ಡ ಸವಾಲು. ಮೊಬೈಲ್ ಎಲ್ಲಿ ಒದ್ದೆ ಆಗಿ ಬಿಡುತ್ತೆ ಎಂಬ ಭಯ ಕಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೋನ್‌ಗಳು ವಾಟರ್ ಪ್ರೂಫ್ (Waterproof) ಆಗಿದ್ದರೂ, ನೀರು ತಾಗಿದರೆ ಹಲವಾರು ಸಮಸ್ಯೆಗಳು ಕಾಡುತ್ತದೆ. ಮಳೆ ನೀರನ್ನು ಬಟ್ಟೆಯಿಂದ ಒರೆಸಿದರೂ ಕೆಲವು ಬಾರಿ ಕೆಲಸ ಮಾಡುವುದಿಲ್ಲ. ನಿಮ್ಮ ಫೋನ್ ವಾಟರ್​ಪ್ರೂಫ್ ಆಗಿದ್ದರೆ ದೊಡ್ಡ ಸಮಸ್ಯೆ ಇಲ್ಲ, ಆದರೆ ವಾಟರ್​ಪ್ರೂಫ್ ಅಲ್ಲದ ಮೊಬೈಲ್ ಆಗಿದ್ದರೆ ತೊಂದರೆ ಆಗುತ್ತದೆ. ನಿಮ್ಮದು ವಾಟರ್​ಪ್ರೂಫ್ ಅಲ್ಲದ ಮೊಬೈಲ್ ಮಳೆಗೆ ಒದ್ದೆ ಆದರೂ ಸರಿಯಾಗಿ ಕೆಲಸ ಮಾಡಬೇಕು ಎಂದರೆ ಇದಕ್ಕೆ ನೀವು ಕೇವಲ 99 ರೂಪಾಯಿ ಖರ್ಚು ಮಾಡಿದರೆ ಸಾಕು. ನಿಮ್ಮ ಸ್ಮಾರ್ಟ್​ಫೋನ್ (Smartphone) ವಾಟರ್​ಪ್ರೂಫ್ ಆಗುತ್ತದೆ.

ಆದರೆ ಇದಕ್ಕೂ ಮುನ್ನ ನಿಮ್ಮ ಸ್ಮಾರ್ಟ್​ಫೋನ್ ವಾಟರ್​ಪ್ರೂಫ್ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಫೋನ್‌ನ ಐಪಿ ರೇಟಿಂಗ್ ಅನ್ನು ಪರಿಶೀಲಿಸಬೇಕು. ಫೋನ್ ಖರೀದಿಸುವಾಗ ನೀವು IP67, IP68, IPX8 ಸೇರಿದಂತೆ ವಿವಿಧ ರೇಟಿಂಗ್‌ಗಳನ್ನು ಕೇಳಿರುತ್ತೀರಿ. ಆದರೆ ಈ ರೇಟಿಂಗ್‌ಗಳ ಅರ್ಥವೇನೆಂದು ಅನೇಕರಿಗೆ ತಿಳಿದಿಲ್ಲ. IP68 ರೇಟಿಂಗ್ ಹೊಂದಿರುವ ಸಾಧನವು 30 ನಿಮಿಷಗಳ ಕಾಲ ನೀರಿನ ಅಡಿಯಲ್ಲಿ ಮುಳುಗಿದ ನಂತರವೂ ಯಾವುದೇ ಹಾನಿ ಆಗುವುದಿಲ್ಲ. ಇದು ವಾಟರ್​ಪ್ರೂಫ್ ಮೊಬೈಲ್ ಆಗಿದೆ.

Power Bank: ಪವರ್ ಬ್ಯಾಂಕ್ ಮೂಲಕ ಪದೇ ಪದೇ ಮೊಬೈಲ್ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?: ಬಂದಿದೆ ಹೊಸ ಮಾಹಿತಿ

ಇದನ್ನೂ ಓದಿ
Image
Boult Striker Plus: ಬಜೆಟ್ ದರಕ್ಕೆ ಸ್ಟೈಲಿಶ್ ಲುಕ್ ನೀಡುವ ಬೋಲ್ಟ್ ಸ್ಮಾರ್ಟ್​ವಾಚ್
Image
Xiaomi Anniversary Sale: ಶಓಮಿ ರೆಡ್ಮಿ ಡಿಸ್ಕೌಂಟ್ ಸೇಲ್ ಭರ್ಜರಿ ಆಫರ್
Image
Galaxy M34 5G: ಫೋಟೋ ತೆಗೆಯುವಾಗ ಶೇಕ್ ಆದ್ರೂ ಏನಾಗಲ್ಲ: ಭಾರತದಲ್ಲಿ ಗ್ಯಾಲಕ್ಸಿ M34 5G ಫೋನ್ ಲಾಂಚ್
Image
Nothing Phone 2: ನಥಿಂಗ್ ಫೋನ್ 2 ಭಾರತದ ಬೆಲೆ ಸೋರಿಕೆ: ಖರೀದಿಗೆ ಕ್ಯೂ ಗ್ಯಾರೆಂಟಿ

ನಿಮ್ಮ ಫೋನ್ ಜಲನಿರೋಧಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಫೋನ್ IP68 ರೇಟಿಂಗ್ ಅನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಫೋನ್ IP68 ರೇಟಿಂಗ್ ಹೊಂದಿಲ್ಲದಿದ್ದರೆ, ಅದನ್ನು ಒದ್ದೆಯಾಗಲು ಬಿಡಬೇಡಿ. ಇದರಿಂದ ಫೋನ್ ಹಾಳಾಗಬಹುದು. ಈ ತೊಂದರೆಯಿಂದ ಪಾರಾಗಲು 99 ರೂ. ಖರ್ಚು ಮಾಡಿ ಸಾಕು.

ವಾಟರ್​​ಪ್ರೂಫ್ ಪೌಚ್ ಖರೀದಿಸಿ:

ನೀವು ಹೊರಗಡೆ ಇದ್ದ ಸಂದರ್ಭ ಮಳೆ ಬಂತು ಎಂದಾದರೆ ಅಥವಾ ನಿಮ್ಮ ಫೋನ್ ಮಳೆಗೆ ಒದ್ದೆ ಆಗುತ್ತದೆ ಎಂದಾದಲ್ಲಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದಕ್ಕಾಗಿ ನೀವು ವಾಟರ್​​ಪ್ರೂಫ್ ಪೌಚ್ ಅನ್ನು ಖರೀದಿಸಬಹುದು. ಜಲನಿರೋಧಕ ಪೌಚ್ ಯಾವುದು ಎಂದರೆ, ಇದು ವಿಶೇಷವಾದ ಪ್ಲಾಸ್ಟಿಕ್ ಕವರ್ ಆಗಿದೆ. ನಿಮ್ಮ ಫೋನ್ ಅನ್ನು ಅದರೊಳಗೆ ಇಟ್ಟರೆ, ಎಷ್ಟು ಬಾರಿ ನೀರು ತಾಗಿದರೂ ಏನೂ ಆಗುವುದಿಲ್ಲ. ಕವರ್ ಮೇಲಿಂದಲೇ ನೀವು ಫೋನ್ ಅನ್ನು ಬಳಸಬಹುದು. ಏಕೆಂದರೆ ವಾಟರ್​​ಪ್ರೂಫ್ ಪೌಚ್​ಗಳು ಟ್ರಾನ್ಪರೆಂಟ್ ಆಗಿರುತ್ತದೆ.

ಎಲ್ಲಿ ಖರೀದಿಸಬಹುದು?:

ನೀವು ಯಾವುದೇ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ವಾಟರ್​​ಪ್ರೂಫ್ ಪೌಚ್ ಖರೀದಿಸಬಹುದು. ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇದು ಮಾರಾಟ ಆಗುತ್ತಿದೆ. ಅವುಗಳ ಬೆಲೆ ರೂ. 99 ರಿಂದ ಆರಂಭವಾಗುತ್ತದೆ. ನೀವು 300 ರೂ. ಖರ್ಚು ಮಾಡಿದರೆ ನಿಮ್ಮ ಫೋನ್ ಅನ್ನು ನೀರಿನಿಂದ ಮಾತ್ರವಲ್ಲದೆ ಧೂಳು, ಮರಳಿನಿಂದ ಕೂಡ ರಕ್ಷಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ