JIO Recharge Plan: ಅದ್ಭುತ ವೈಶಿಷ್ಟ್ಯಗಳೊಂದಿಗೆ 2 ಹೊಸ ರೀಚಾರ್ಜ್ ಪ್ಲಾನ್ ತಂದ ಜಿಯೋ

ಕೆಲವು ದಿನಗಳ ಹಿಂದೆ, ಜಿಯೋ ಸೇರಿದಂತೆ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿತು. ಟೆಲಿಕಾಂ ಕಂಪನಿಗಳು ಅನಿರೀಕ್ಷಿತವಾಗಿ ಬೆಲೆಗಳನ್ನು ಹೆಚ್ಚಿಸಿದ್ದರಿಂದ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ.

JIO Recharge Plan: ಅದ್ಭುತ ವೈಶಿಷ್ಟ್ಯಗಳೊಂದಿಗೆ 2 ಹೊಸ ರೀಚಾರ್ಜ್ ಪ್ಲಾನ್ ತಂದ ಜಿಯೋ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 12, 2024 | 11:52 AM

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಮಾಸಿಕ, ತ್ರೈಮಾಸಿಕ, ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. ಹೀಗಿರುವಾಗ ಇದೀಗ ಜಿಯೋ ಎರಡು ಅದ್ಭುತವಾದ ಹೊಸ ರೀಚಾರ್ಜ್ ಯೋಜನೆಗಳನ್ನು ದೀರ್ಘಾವಧಿಯ ಮಾನ್ಯತೆಯೊಂದಿಗೆ ಪರಿಚಯಿಸಿದೆ. ಜಿಯೋ ಪರಿಚಯಿಸಿರುವ ಈ ಪ್ಲಾನ್​ನಿಂದ ಭಾರ್ತಿ ಏರ್ಟೆಲ್​ಗೆ ದೊಡ್ಡ ಹೊಡೆತ ಬೀಳುವುದು ಖಚಿತ. ತಿಂಗಳು-ತಿಂಗಳು ರೀಚಾರ್ಜ್ ಮಾಡುವವರಿಗೆ ಈ ಪ್ಲಾನ್ ಅಷ್ಟೊಂದು ಉಪಯೋಗ ಆಗಲಿಕ್ಕಿಲ್ಲ. ಆದರೆ ದೀರ್ಘಾವಧಿಯ ಮಾನ್ಯತೆ ನೋಡುವವರಿಗೆ ಇದು ಬೆಸ್ಟ್ ಯೋಜನೆ ಆಗಿದೆ.

ಕೆಲವು ದಿನಗಳ ಹಿಂದೆ, ಜಿಯೋ ಸೇರಿದಂತೆ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿತು. ಟೆಲಿಕಾಂ ಕಂಪನಿಗಳು ಅನಿರೀಕ್ಷಿತವಾಗಿ ಬೆಲೆಗಳನ್ನು ಹೆಚ್ಚಿಸಿದ್ದರಿಂದ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ. ಜಿಯೋ ರೀಚಾರ್ಜ್ ಪ್ಲಾನ್‌ಗಳ ಬೆಲೆಗಳನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ 5G ಸೇವೆಯ ಬಳಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇದು ಕಂಪನಿ ಮೇಲೆ ದೊಡ್ಡ ಹೊಡೆತ ಬಿದ್ದಿತು. ಒಂದಿಷ್ಟು ಬಳಕೆದಾರರನ್ನು ಕೂಡ ಕಳೆದುಕೊಂಡಿತು.

ಅನೇಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಬಿಎಸ್​ಎನ್​ಎಲ್​​ಗೆ ಬದಲಾಯಿಸಲು ಪ್ರಾರಂಭಿಸಿದರು. ಇದರಿಂದ ಆಘಾತಕ್ಕೊಳಗಾದ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಜನರಿಗೆ ಅಗತ್ಯವಿರುವ ಅನೇಕ ಪ್ರಯೋಜನಗಳೊಂದಿಗೆ ಹೊಸ ಪ್ಲಾನ್‌ಗಳನ್ನು ಪರಿಚಯಿಸಲು ಪ್ರಾರಂಭಿಸಿದವು. ಆ ಬಳಿಕ ಹಲವು ಆಫರ್‌ಗಳು ಬಂದಿವೆ. ಇದೇ ಸಾಲಿನಲ್ಲಿ ಜಿಯೋ ದೀರ್ಘಾವಧಿಯ ಮಾನ್ಯತೆಯೊಂದಿಗೆ ಎರಡು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ.

ಇದನ್ನೂ ಓದಿ: ನೀವು ನಿಮ್ಮ ಮೊಬೈಲ್ ನಂಬರ್​ಗೆ ರಿಚಾರ್ಜ್ ಮಾಡಿಲ್ಲ ಅಂದ್ರೆ ಏನಾಗುತ್ತೆ?: ಈ ವಿಚಾರ ತಿಳಿದುಕೊಳ್ಳಿ

ಜಿಯೋ 2 ಹೊಸ ಯೋಜನೆಗಳು ಯಾವುವು?:

ರಿಲಯನ್ಸ್ ಜಿಯೋ ರೂ. 1028 ಮತ್ತು ರೂ. 1029 ಎಂಬ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.

1028 ರೂ. ಯೋಜನೆ:

ಜಿಯೋದ ಈ 1028 ರೂ. ಯೋಜನೆಯನ್ನು 84 ದಿನಗಳ ಮಾನ್ಯತೆಯೊಂದಿಗೆ ಪ್ರಾರಂಭಿಸಲಾಗಿದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 100 ಸಂದೇಶಗಳನ್ನು ನೀಡುತ್ತದೆ. ಡೇಟಾಗೆ ಸಂಬಂಧಿಸಿದಂತೆ, ಈ ಯೋಜನೆಯು ಒಟ್ಟು 168GB ಡೇಟಾವನ್ನು ನೀಡುತ್ತದೆ. ಅಂದರೆ ದಿನಕ್ಕೆ 2GB ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೆ, ನೀವು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೇವೆಗಳನ್ನು ಪಡೆಯಬಹುದು.

1029 ರೂ. ಯೋಜನೆ:

ಜಿಯೋದ ಈ 1029 ರೂ. ಯೋಜನೆಯನ್ನು 84 ದಿನಗಳ ಮಾನ್ಯತೆಯೊಂದಿಗೆ ಪ್ರಾರಂಭಿಸಲಾಗಿದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 100 ಸಂದೇಶಗಳನ್ನು ನೀಡುತ್ತದೆ. ಡೇಟಾಗೆ ಸಂಬಂಧಿಸಿದಂತೆ, ಈ ಯೋಜನೆಯು ಒಟ್ಟು 168GB ಡೇಟಾವನ್ನು ನೀಡುತ್ತದೆ. ಅಂದರೆ ದಿನಕ್ಕೆ 2GB ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಗೆ ವಿಶೇಷ ಕೊಡುಗೆಯಾಗಿ ಅಮೆಜಾನ್ ಪ್ರೈಮ್ ಲೈಟ್ ಸದಸ್ಯತ್ವವನ್ನು ನೀಡಲಾಗುತ್ತದೆ. ಇದಲ್ಲದೆ, ನೀವು ಈ ಯೋಜನೆಯನ್ನು ಬಳಸಿಕೊಂಡು ರೀಚಾರ್ಜ್ ಮಾಡಿದರೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೇವೆಗಳನ್ನು ಪಡೆಯಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:51 am, Sat, 12 October 24

ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ವಿಜಯದಶಮಿಯ ದಿನವಾದ ಇಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
Daily Devotional: ವಿಜಯದಶಮಿ ಆಚರಣೆ ವಿಧಾನ ಹಾಗೂ ಮಹತ್ವ ತಿಳಿಯಿರಿ
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಮೈಸೂರು-ದರ್ಭಾಂಗ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ: ಅಪಘಾತದ ಭಯಾನಕ ದೃಶ್ಯಗಳು
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ