Safer Internet Day 2022: ಇಂದು ವಿಶ್ವ ಸುರಕ್ಷಿತ ಅಂತರ್ಜಾಲ ದಿನ: ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಇಲ್ಲಿದೆ ಟಿಪ್ಸ್

| Updated By: Vinay Bhat

Updated on: Feb 08, 2022 | 12:36 PM

ಯುವಜನತೆಯಂತೂ ಪ್ರತೀಕ್ಷಣವೆಂಬಂತೆ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು. ಇದೊಂದು ರೀತಿಯ ಮಾಯಾಜಾಲ. ಆರೋಗ್ಯಕರ ಮತ್ತು ಹೆಚ್ಚು ಸುರಕ್ಷಿತ ಆನ್‌ಲೈನ್ ಅನುಭವವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, 19 ನೇ ಆವೃತ್ತಿಯ ಸುರಕ್ಷಿತ ಇಂಟರ್ನೆಟ್ ದಿನವನ್ನು ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ಫೆಬ್ರುವರಿ 8ರಂದು ಮಂಗಳವಾರ ಆಚರಿಸಲಾಗುತ್ತಿದೆ.

Safer Internet Day 2022: ಇಂದು ವಿಶ್ವ ಸುರಕ್ಷಿತ ಅಂತರ್ಜಾಲ ದಿನ: ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಇಲ್ಲಿದೆ ಟಿಪ್ಸ್
Safer Internet Day 2022
Follow us on

ಇಂದು ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್‌ (Smartphone) ಹೊಂದಿದ್ದು, ಇಂಟರನೆಟ್ ಕೂಡಾ ಬಳಸುತ್ತಿರುತ್ತಾರೆ. ಆದರೇ ಇಂಟರ್ನೆಟ್ ಬಳಸುವ ಪ್ರತಿಯೊಬ್ಬರಿಗೂ ಸುರಕ್ಷತೆಯ ಅಂತರ್ಜಾಲ ಬಳಕೆಯ ಕುರಿತು ತಿಳಿದಿರುವುದಿಲ್ಲ. ಈ ಪ್ರಭಾವಿ ಅಂತರ್ಜಾಲ ಪ್ರಪಂಚ ಮಕ್ಕಳಿಂದ ಹಿಡಿದು ಹಿರಿಯರವರೆಗೂ ವ್ಯಾಪಿಸಿದೆ. ಯುವಜನತೆಯಂತೂ ಪ್ರತೀಕ್ಷಣವೆಂಬಂತೆ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು. ಇದೊಂದು ರೀತಿಯ ಮಾಯಾಜಾಲ. ಈ ಇಂಟರ್​ನೆಟ್​ (Internet) ಅಂದರೆ ಏನು? ಅದರ ಬಳಕೆಯಿಂದ ಏನು ಸಾಧ್ಯ? ಎಂಬುದು ಬಹುತೇಕರಿಗೆ ತಿಳಿದಿದೆ. ಸದ್ಯ ಕಚೇರಿ ಕೆಲಸಗಳನ್ನು ಕುಳಿತಲ್ಲಿಂದಲೇ ಮಾಡುವ ಪರಿಣತಿಯನ್ನು ಹೊಂದಿದ ಬಳಕೆದಾರರು ಅನೇಕರಿದ್ದಾರೆ. ಅಷ್ಟರ ಮಟ್ಟಿಗೆ ಇಂಟರ್​ನೆಟ್​ ಬಳಕೆ ಮತ್ತು ಅದರ ಉಪಯೋಗವಾಗುತ್ತಿದೆ. ಆದರೆ ಇಷ್ಟೆಲ್ಲಾ ಪ್ರಯೋಜನ ಒದಗಿಸುವ ಇಂಟರ್​ನೆಟ್​ ನಿಂದ ತೊಂದರೆಯೂ ಇದೆ. ಇದಕ್ಕಾಗಿಯೇ ಫೆಬ್ರವರಿ ತಿಂಗಳ ಎರಡನೇ ಮಂಗಳವಾರದಂದು ಸುರಕ್ಷಿತ ಅಂತರ್ಜಾಲ ದಿನವನ್ನು (Safer Internet Day)  ಆಚರಿಸಲಾಗುತ್ತದೆ.

ಹೌದು, ಆರೋಗ್ಯಕರ ಮತ್ತು ಹೆಚ್ಚು ಸುರಕ್ಷಿತ ಆನ್‌ಲೈನ್ ಅನುಭವವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, 19 ನೇ ಆವೃತ್ತಿಯ ಸುರಕ್ಷಿತ ಇಂಟರ್ನೆಟ್ ದಿನವನ್ನು ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ಫೆಬ್ರುವರಿ 8ರಂದು ಮಂಗಳವಾರ ಆಚರಿಸಲಾಗುತ್ತಿದೆ. ಮಕ್ಕಳ ಆನ್‌ಲೈನ್ ಪ್ರಪಂಚವು ಪ್ರತಿಯೊಬ್ಬ ಪೋಷಕರಿಗೆ ಹೊಸ ಸವಾಲುಗಳನ್ನು ಒದಗಿಸುತ್ತದೆ. ಹೀಗಾಗಿ ಇಂದಿನ ಸುರಕ್ಷಿತ ಅಂತರ್ಜಾಲ ದಿನದಂದು ಮಕ್ಕಳು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಕೆಲವು ಟಿಪ್ಸ್​ ನೀಡುತ್ತಿದ್ದೇವೆ.

ವೆಬ್‌ಪೇಜ್‌ಗಳಿಂದ ಯಾವುದೇ ಆ್ಯಪ್‌ಗಳನ್ನು ಡೌನಲೋಡ್ ಮಾಡಿಕೊಳ್ಳದಿರಿ. ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಉತ್ತಮ. ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರೇ ನಿಮ್ಮ ಸ್ಮಾರ್ಟ್‌ಫೋನ್‌ ಕಾರ್ಯ ನಿಧಾನ ಆಗುತ್ತದೆ. ಐಓಎಸ್ ಐಫೋನ್‌ಗಳಿಗೆ ಹೋಲಿಸಿದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆನೆ ಅಸುಕ್ಷಿತ ಆ್ಯಪ್‌ಗಳಿಂದ ಅಪಾಯ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆದ್ದರಿಂದ ಇಂಥ ಅಸುರಕ್ಷಿತ ಆ್ಯಪ್‌ಗಳನ್ನು ದೂರವಿಡಿ.

ಸೈಬರ್‌ ಸುರಕ್ಷತೆಯ ಕುರಿತು ಪೋಷಕರು ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸಿ. ಸೈಬರ್‌ ವಂಚಕರು ತಮ್ಮ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲು ಮಕ್ಕಳನ್ನು ಪ್ರಚೋದಿಸಬಹುದು. ಹುಟ್ಟಿದ ದಿನಾಂಕ ಅಥವಾ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ವಿಶೇಷವಾಗಿ ಅಪರಿಚಿತರಿಗೆ ಬಹಿರಂಗಪಡಿಸದಂತೆ ಮಕ್ಕಳಿಗೆ ತಿಳಿಸಿ. ನಿಮ್ಮ ಮಕ್ಕಳಿಗೆ ಅನುಮಾನಾಸ್ಪದ ಚಟುವಟಿಕೆ ಬಗ್ಗೆ ತಿಳಿದರೆ , ತಕ್ಷಣವೇ ನಿಮಗೆ ಅಥವಾ ವಿಶ್ವಾಸಾರ್ಹ ವಯಸ್ಕರಿಗೆ ಹೇಳಲು ಅವರನ್ನು ಪ್ರೋತ್ಸಾಹಿಸಿ. ನಿಮ್ಮ ಮಗು ಆನ್‌ಲೈನ್ ಚಟುವಟಿಕೆಗಳಿಂದ ಅಸಮಾಧಾನಗೊಂಡಿರುವಂತೆ ಕಂಡುಬಂದರೆ ಅಥವಾ ಸೈಬರ್‌ಬುಲ್ಲಿಂಗ್ ಅನ್ನು ಅನುಭವಿಸಿದರೆ ಎಚ್ಚರದಿಂದಿರಿ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ಪಾಸವರ್ಡ್ ಸ್ಟ್ರಾಂಗ್ ಇರಲಿ, ಗೂಗಲ್ ಅಕೌಂಟ್ ಗೆ ಸೈನಿನ್ ಆಗಿ ಫೈಂಡ್ ಮೈ ಫೋನ್‌ ಫೀಚರ್ ಆಯ್ಕೆಯನ್ನು ಸಕ್ರಿಯಗೊಳಿಸಿ. ಸಕ್ರಿಯ ಮಾಡಿಕೊಂಡರೇ ನೀವು android.com ಗೆ ಭೇಟಿ ನೀಡಿ ಫೈಂಡ್ ಲೋಕೆಟ್, ರಿಂಗ್, ಲಾಕ್ ಮತ್ತು ಇರೆಸ್ ಆಯ್ಕೆಗಳನ್ನು ಬಳಸಬಹುದು. ಇದು ನಿಮ್ಮ ಸ್ಮಾರ್ಟ್‌ಫೋನಿಗೆ ಸುರಕ್ಷತೆಗೆ ಸಹಕಾರಿ.

ನಿಮ್ಮ ಫೇಸ್‌ಬುಕ್, ಯೂಟ್ಯೂಬ್, ಜಿಮೇಲ್, ಗೂಗಲ್ ಮ್ಯಾಪ್ ಮತ್ತು ಗೂಗಲ್ ಅಕೌಂಟ್ ಸೇರಿದಂತೆ ನೀವು ಬಳಸುವ ಎಲ್ಲ ಸಾಮಾಜಿಕ ತಾಣಗಳಲ್ಲಿ ನಿಮ್ಮ ಮಾಹಿತಿ ಇರುತ್ತದೆ. ಹೀಗಾಗಿ ಈ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಕಠಿಣ ಪಾಸ್‌ವರ್ಡ್ ಇಡಬೇಕು. ಇದರಿಂದ ನಿಮ್ಮ ಅಂತರ್ಜಾಲ ಮಾಹಿತಿ ಸೋರಿಕೆ ತಡೆಯಬಹುದು.

ಆನ್‌ಲೈನ್ ಮತ್ತು ವಿಡಿಯೋ ಕರೆಗಳಲ್ಲಿ ಉತ್ತಮ ನಡವಳಿಕೆಯನ್ನು ಪ್ರಚಾರ ಮಾಡಿ ಮತ್ತು ಮೇಲ್ವಿಚಾರಣೆ ಮಾಡಿ. ಪೋಷಕರು ಮಕ್ಕಳ ಸಹಪಾಠಿಗಳಿಗೆ ದಯೆ ಮತ್ತು ಗೌರವಾನ್ವಿತರಾಗಿರಲು ಪ್ರೋತ್ಸಾಹಿಸಿ, ಅವರು ಯಾವ ಬಟ್ಟೆಗಳನ್ನು ಧರಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಹಾಗೆಯೆ ಮಕ್ಕಳು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ, ಅವರು ಅನಾರೋಗ್ಯಕರ ಆಹಾರಗಳು  ಅಥವಾ ವಯಸ್ಸಿಗೆ ಅನುಚಿತವಾದ ವಸ್ತುಗಳನ್ನು ಉತ್ತೇಜಿಸುವ ಹೆಚ್ಚಿನ ಜಾಹೀರಾತಿಗೆ ಒಡ್ಡಿಕೊಳ್ಳಬಹುದು. ಹಾಗಾಗಿ ಸರಿಯಾದ ಆನ್‌ಲೈನ್ ಜಾಹೀರಾತುಗಳನ್ನು ಗುರುತಿಸಲು ಮಕ್ಕಳಿಗೆ ಸಹಾಯ ಮಾಡಿ.

ನೀವು ಯಾವುದಾದರು ಆ್ಯಪ್‌ ಅಥವಾ ವೆಬ್‌ಸೈಟ್‌ ಬಳಸಬೇಕಾದರೇ ಅವರು ನಿಮ್ಮ ಕಡೆಯಿಂದ ನಿಮ್ಮ ಕಾಂಟ್ಯಾಕ್ಟ್ಸ್, ಲೋಕೆಷನ್, ಕ್ಯಾಲೆಂಡರ್, ಕ್ಯಾಮೆರಾ ಹೀಗೆ ಕೇಲವು ಮಾಹಿತಿಗನ್ನು ಹಂಚಿಕೊಳ್ಳಲು ಅನುಮತಿ ಕೋರುತ್ತಾರೆ. ಆಗ ಅನಗತ್ಯವಾಗಿ ಎಲ್ಲ ಡಾಟಾ ಮಾಹಿತಿ ಹಂಚಿಕೆಗೆ ಅನುಮತಿ ನೀಡಬೇಡಿರಿ. ಆ ಆ್ಯಪ್‌ಗೆ ಅಗತ್ಯ ಇರುವ ಡಾಟಾ ಮಾಹಿತಿ ಅಷ್ಟೇ ನೀಡಿದರೆ ಸಾಕು.

WhatsApp: ವಾಟ್ಸ್​ಆ್ಯಪ್​ನಲ್ಲಿ ದೊಡ್ಡ ಗಾತ್ರದ MB, GB ಫೈಲ್​ಗಳನ್ನು ಕ್ಷಣಾರ್ಧದಲ್ಲಿ ಸೆಂಡ್ ಮಾಡುವ ಟ್ರಿಕ್ ಗೊತ್ತಾ?