AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್ ಆರಂಭ: ಅತಿ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ಸ್, ಫ್ರಿಡ್ಜ್, ಎಸಿ ಮಾರಾಟ

ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ, ಬಳಕೆದಾರರು ಸ್ಯಾಮ್‌ಸಂಗ್, ಎಲ್‌ಜಿ, ಡೈಕಿನ್, ವೋಲ್ಟಾಸ್, ಬ್ಲೂಸ್ಟಾರ್‌ನಂತಹ ಬ್ರಾಂಡ್‌ಗಳ ವಿಂಡೋ ಮತ್ತು ಸ್ಪ್ಲಿಟ್ ಎಸಿಗಳ ಖರೀದಿಯ ಮೇಲೆ ಉತ್ತಮ ಕೊಡುಗೆಗಳನ್ನು ಪಡೆಯಬಹುದು. ಪ್ರತಿಯೊಂದು ಬ್ರಾಂಡ್‌ನ 1 ಟನ್, 1.5 ಟನ್ ಅಥವಾ 2 ಟನ್ ಎಸಿಗಳನ್ನು ಅಗ್ಗವಾಗಿ ಖರೀದಿಸಬಹುದು.

Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್ ಆರಂಭ: ಅತಿ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ಸ್, ಫ್ರಿಡ್ಜ್, ಎಸಿ ಮಾರಾಟ
Amazon Prime Day Sale (1)
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 16, 2025 | 6:39 PM

Share

ಬೆಂಗಳೂರು (ಜು. 12): ಅಮೆಜಾನ್ ಪ್ರೈಮ್ ಡೇ (Amazon Prime Day) ಸೇಲ್ ಮಧ್ಯರಾತ್ರಿ 12 ಗಂಟೆಯಿಂದ ಆರಂಭವಾಗಿದೆ. ಜುಲೈ 12 ರಿಂದ ಜುಲೈ 14 ರವರೆಗೆ ನಡೆಯುವ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಎಸಿಗಳು, ಫ್ರಿಡ್ಜ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳು ಅರ್ಧದಷ್ಟು ಬೆಲೆಗೆ ಲಭ್ಯವಿರುತ್ತವೆ. ಇ-ಕಾಮರ್ಸ್ ವೆಬ್‌ಸೈಟ್ ಈ ಸೇಲ್‌ನಲ್ಲಿ ಲಭ್ಯವಿರುವ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಒನ್‌ಪ್ಲಸ್, ಸ್ಯಾಮ್‌ಸಂಗ್, ಐಕ್ಯೂ, ಆಪಲ್‌ನಂತಹ ಬ್ರಾಂಡ್‌ಗಳ ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು. ಸೇಲ್‌ನಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ನೋಡೋಣ…

ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು

ಈ ಸೇಲ್ ನಲ್ಲಿ, ಈ ವರ್ಷ ಮತ್ತು ಕಳೆದ ವರ್ಷ ಬಿಡುಗಡೆಯಾದ OnePlus 13s, OnePlus 13, OnePlus 13R, OnePlus Nord 5, OnePlus Nord 5 CE, Samsung Galaxy M36, Samsung Galaxy S24, Galaxy S24 Plus, Galaxy S24 Ultra, iQOO 13, iQOO Z10, iQOO Z10 Lite, Redmi Note 14, Redmi Note 14 Pro ಸೇರಿದಂತೆ ಹಲವು ಫೋನ್ ಗಳ ಖರೀದಿಯಲ್ಲಿ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. ಸ್ಮಾರ್ಟ್ ಫೋನ್ ಗಳ ಜೊತೆಗೆ, ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ನೀವು ಟ್ಯಾಬ್ಲೆಟ್ ಗಳು ಮತ್ತು ಲ್ಯಾಪ್ ಟಾಪ್ ಪಿಸಿಗಳನ್ನು ಅಗ್ಗವಾಗಿ ಮನೆಗೆ ತರಬಹುದು. Lenovo, Dell, HP, Acer ನಂತಹ ಬ್ರಾಂಡ್ ಗಳ ಲ್ಯಾಪ್ ಟಾಪ್ ಗಳ ಮೇಲೆ ನಿಮಗೆ ಉತ್ತಮ ರಿಯಾಯಿತಿಗಳು ಸಿಗುತ್ತವೆ.

ಇದನ್ನೂ ಓದಿ
Image
ಫೋನ್‌ಗೆ ಯಾವ ರೀತಿಯ ಕವರ್ ಹಾಕಬೇಕು, ಅಗ್ಗವೋ ಅಥವಾ ದುಬಾರಿಯೋ?
Image
ನೆಟ್​ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದಾದ ಫೋನ್ ಭಾರತದಲ್ಲಿ ಬಿಡುಗಡೆ
Image
ಗೂಗಲ್ ಸರ್ಚ್​ನಲ್ಲಿ ಬಂತು ಎಐ ಮೋಡ್ ಫೀಚರ್: ಹೇಗೆ ಬಳಸುವುದು?
Image
ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಬೆಲೆ ಎಷ್ಟು?

ಕಡಿಮೆ ದರದಲ್ಲಿ ಲಭ್ಯವಾಗಲಿದೆ ಎಸಿ ಮತ್ತು ಫ್ರಿಡ್ಜ್

ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ, ಬಳಕೆದಾರರು ಸ್ಯಾಮ್‌ಸಂಗ್, ಎಲ್‌ಜಿ, ಡೈಕಿನ್, ವೋಲ್ಟಾಸ್, ಬ್ಲೂಸ್ಟಾರ್‌ನಂತಹ ಬ್ರಾಂಡ್‌ಗಳ ವಿಂಡೋ ಮತ್ತು ಸ್ಪ್ಲಿಟ್ ಎಸಿಗಳ ಖರೀದಿಯ ಮೇಲೆ ಉತ್ತಮ ಕೊಡುಗೆಗಳನ್ನು ಪಡೆಯಬಹುದು. ಪ್ರತಿಯೊಂದು ಬ್ರಾಂಡ್‌ನ 1 ಟನ್, 1.5 ಟನ್ ಅಥವಾ 2 ಟನ್ ಎಸಿಗಳನ್ನು ಅಗ್ಗವಾಗಿ ಖರೀದಿಸಬಹುದು. ಈ ಎಸಿಗಳನ್ನು ಎಂಆರ್‌ಪಿಯ ಅರ್ಧದಷ್ಟು ಬೆಲೆಯಲ್ಲಿ ಕಾಣಬಹುದು. ಇದಲ್ಲದೆ, ಈ ಸೇಲ್‌ನಲ್ಲಿ ನೀವು ಮನೆಗೆ ಫ್ರಿಡ್ಜ್‌ಗಳು, ವಾಷಿಂಗ್ ಮೆಷಿನ್‌ಗಳು ಇತ್ಯಾದಿಗಳನ್ನು ಉತ್ತಮ ರಿಯಾಯಿತಿಯಲ್ಲಿ ತರಬಹುದು. ಇವುಗಳ ಮೇಲೆ ಶೇಕಡಾ 70 ರಿಂದ 80 ರಷ್ಟು ರಿಯಾಯಿತಿ ನೀಡಲಾಗಿದೆ.

Tech Tips: ಫೋನ್‌ಗೆ ಯಾವ ರೀತಿಯ ಕವರ್ ಹಾಕಬೇಕು, ಅಗ್ಗವೋ ಅಥವಾ ದುಬಾರಿಯೋ?

ಹೆಸರೇ ಸೂಚಿಸುವಂತೆ, ಈ ಮಾರಾಟವು ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಮಾತ್ರ. ಅಮೆಜಾನ್ ಪ್ರೈಮ್ ಸದಸ್ಯತ್ವದ ಬಗ್ಗೆ ಹೇಳುವುದಾದರೆ, ಇದರ ಶಾಪಿಂಗ್ ಆವೃತ್ತಿಯ ಯೋಜನೆಯು ರೂ. 399 ರಿಂದ ಪ್ರಾರಂಭವಾಗುತ್ತದೆ. ಈ ರೂ. 399 ಯೋಜನೆಯಲ್ಲಿ, ಬಳಕೆದಾರರು 12 ತಿಂಗಳವರೆಗೆ ಅಂದರೆ ಪೂರ್ಣ ವರ್ಷಕ್ಕೆ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಅಮೆಜಾನ್ ಪ್ರೈಮ್ ಲೈಟ್‌ಗೆ ವಾರ್ಷಿಕವಾಗಿ ರೂ. 799 ಪಾವತಿಸಬೇಕಾಗುತ್ತದೆ. ಸ್ಟ್ಯಾಂಡರ್ಡ್ ಪ್ರೈಮ್ ಸದಸ್ಯತ್ವದ ವಾರ್ಷಿಕ ಯೋಜನೆ ರೂ 1,499 ಗೆ ಬರುತ್ತದೆ. ಮಾಸಿಕ ಯೋಜನೆಯ ಬಗ್ಗೆ ಹೇಳುವುದಾದರೆ, ಸ್ಟ್ಯಾಂಡರ್ಡ್ ಯೋಜನೆ ತಿಂಗಳಿಗೆ ರೂ 299 ರಿಂದ ಪ್ರಾರಂಭವಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Sat, 12 July 25

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ