ಸ್ಯಾಮ್‌ಸಂಗ್ (Samsung) ಕಂಪೆನಿ ಕಳೆದ ವರ್ಷ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದ ಗ್ಯಾಲಕ್ಸಿ ಎ21 (Samsung Galaxy A21) ಸ್ಮಾರ್ಟ್ಫೋನ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ. ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್ (Alaska Airlines) ವಿಮಾನದಲ್ಲಿ ಈ ಸ್ಮಾರ್ಟ್ಫೋನ್ಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರಿ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದೆ. ಸಿಯಾಟಲ್-ಟಕೋಮಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ನ್ಯೂ ಓರ್ಲಿಯನ್ಸ್‌ನಿಂದ ಸಿಯಾಟಲ್‌ಗೆ ಹೋಗುವ ಅಲಾಸ್ಕಾ ಏರ್‌ಲೈನ್ಸ್ ವಿಮಾನದ ಕ್ಯಾಬಿನ್‌ನೊಳಗೆ ಪ್ರಯಾಣಿಕನ ಸೆಲ್‌ಫೋನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 21 ಫೋನ್ ಆಗಿದೆ ಎಂದು ಸಿಯಾಟಲ್ ಟೈಮ್ಸ್ ವರದಿ ಮಾಡಿದೆ.
ಅಚ್ಚರಿ ಎಂದರೆ ಈ ಘಟನೆಯ ಬಗ್ಗೆ ಸ್ಯಾಮ್‌ಸಂಗ್ ಕಂಪೆನಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಮಾನದಲ್ಲಿ ಸುಮಾರು 128 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ಘಟನೆ ನಡೆದ ನಂತರ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಬಸ್ ಮೂಲಕ ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ಬೆಂಕಿ ಅವಘಡದಿಂದಾಗಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಘಟನೆ ವೇಳೆ ಪ್ರಯಾಣಿಕರು ಶಾಂತವಾಗಿದ್ದರಿಂದ ನಿಯಂತ್ರಣ ಸುಲಭವಾಯ್ತು ಎಂದು ವಿಮಾನ ನಿಲ್ದಾಣದ ಮೂಲಗಳು ಟ್ವೀಟ್ ಮಾಡಿವೆ.
ಈ ಇಡೀ ಘಟನೆಯನ್ನು ಪ್ರಯಾಣಿಕರೊಬ್ಬರು ಟ್ವೀಟ್ ಮಾಡುವ ಮುಲಕ ತಿಳಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ವಿಮಾನ ಸಿಬ್ಬಂದಿ ಉತ್ತಮ ಕೆಲಸ ಮಾಡಿರುವುದಾಗಿಯೂ ಹೇಳಿದ್ದಾರೆ. ಮತ್ತೊಂದೆಡೆ, ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ವೀಟ್ ಪ್ರಕಾರ, ಪ್ರಯಾಣಿಕರನ್ನು ಬಸ್ ಮೂಲಕ ಟರ್ಮಿನಲ್ ಗೆ ಕರೆದೊಯ್ಯಲಾಯಿತು. POSFD ಅಲಾಸ್ಕಾ ಏರ್ಲೈನ್ಸ್ ಫ್ಲೈಟ್ 751 ರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನಿಯಂತ್ರಣಕ್ಕೆ ತರಲಾಯಿತು ಮತ್ತು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಟ್ವೀಟ್ ನಲ್ಲಿ ತಿಳಿಸಲಾಗಿದೆ.
ಸ್ಯಾಮ್‌ಸಂಗ್ ಮೊಬೈಲ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ಫೋನ್ನಲ್ಲೂ ಬೆಂಕಿ ಕಾಣಿಸಿಕೊಂಡ ಬಗ್ಗೆ ಸುದ್ದಿಯಾಗಿತ್ತು. ಗ್ಯಾಲಕ್ಸಿ A21 ಸ್ಮಾರ್ಟ್‌ಫೋನ್ ಆಕ್ಟಾಕೋರ್ ಮೀಡಿಯಾ ಟೆಕ್ P35 ಪ್ರೊಸೆಸರ್ ಹೊಂದಿದ್ದು, 4000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ.
WhatsApp: ವಾಟ್ಸ್ಆ್ಯಪ್ನಲ್ಲಿ ಆಡಿಯೋ ಅಥವಾ ವಿಡಿಯೋ ಕಾಲ್ ರೆಕಾರ್ಡ್ ಮಾಡುವ ಟ್ರಿಕ್ ನಿಮಗೆ ಗೊತ್ತೇ?
Nokia G50: ನೋಕಿಯಾದ ಹೊಸ 5G ಸ್ಮಾರ್ಟ್ಫೋನ್ನ ಮಾಹಿತಿ ಆನ್ಲೈನ್ನಲ್ಲಿ ಸೋರಿಕೆ
(Samsung Galaxy A21 Catches Fire In Alaska Airlines Flight Passengers evacuated)