Kannada News Technology Samsung Galaxy A22 5G smartphone has received a price drop in India Check New price
Galaxy A22 5G: ಗ್ಯಾಲಕ್ಸಿ A22 ಖರೀದಿಗೆ ಇದೇ ಬೆಸ್ಟ್ ಟೈಮ್: ಸ್ಯಾಮ್ಸಂಗ್ನ ಮತ್ತೊಂದು ಫೋನ್ ಬೆಲೆಯಲ್ಲಿ ಇಳಿಕೆ
Samsung Galaxy A22 5G Price Cut: ಸ್ಯಾಮ್‌ಸಂಗ್ ಕಂಪನಿ ಈ ವಾರ ಗ್ಯಾಲಕ್ಸಿ A22 5G ಫೋನ್ ಬೆಲೆಯಲ್ಲೂ ಖಡಿತ ಮಾಡಿದೆ. ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿರುವ ಕೆಲವೇ ಕೆಲವು 5G ಸ್ಮಾರ್ಟ್ಫೋನ್ಗಳ ಸಾಲಿನಲ್ಲಿ ಇದುಕೂಡ ಒಂದಾಗಿದೆ.
Samsung Galaxy A22 5G
Follow us on
ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ (Samsung) ಕಂಪನಿ ತನ್ನ ಹೊಸ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಎಂಬೊತ್ತಿಗೆ ತನ್ನ ಹಳೆಯ ಫೋನಿನ ದರವನ್ನು ಕಡಿಮೆ ಮಾಡುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಅಚ್ಚರಿ ಎಂಬಂತೆ ಯಾವುದೇ ಫೋನ್ ರಿಲೀಸ್ ಇಲ್ಲದಿದ್ದರೂ ತಾನು ಇತ್ತೀಚೆಗೆ ರಿಲೀಸ್ ಮಾಡಿದ ಫೋನ್ ಬೆಲೆಯನ್ನು ಇಳಿಕೆ ಮಾಡುತ್ತಿದೆ. ಕಳೆದ ವಾರವಷ್ಟೆ ಮಾರ್ಚ್ನಲ್ಲಿ ಅನಾವರಣಗೊಂಡ ಗ್ಯಾಲಕ್ಸಿ ಎಫ್23 5ಜಿ (Galaxy F23 5G) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದಿಢೀರ್ ಇಳಿಕೆ ಮಾಡಿತ್ತು. ಇದೀಗ ಈ ವಾರ ಗ್ಯಾಲಕ್ಸಿ ಎ22 (Galaxy A22 5G) ಫೋನ್ ಬೆಲೆಯಲ್ಲೂ ಖಡಿತ ಮಾಡಿದೆ. ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿರುವ ಕೆಲವೇ ಕೆಲವು 5G ಸ್ಮಾರ್ಟ್ಫೋನ್ಗಳ ಸಾಲಿನಲ್ಲಿ ಇದುಕೂಡ ಒಂದಾಗಿದೆ. ಇದೀಗ ಈ ಫೋನ್ ಬೆಲೆಯಲ್ಲಿ 2000 ರೂ. ಗಳ ಖಡಿತ ನೀಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A22 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು.ಇದರ 6GB RAM + 128GB ಸ್ಟೋರೇಜ್ ರೂಪಾತಂರಕ್ಕೆ 19,999 ರೂ. ಮತ್ತು 8GB RAM + 128GB ಸ್ಟೋರೇಜ್ ಆಯ್ಕೆಗೆ 21,999 ರೂ. ಇತ್ತು.
ಇದೀಗ ಈ ಎರಡೂ ವೇರಿಯಂಟ್ ಮೇಲೆ 2,000 ರೂ. ಗಳ ಖಡಿತಗೊಳಿಸಲಾಗಿದೆ. 6GB RAM ಆಯ್ಕೆಯು ಕೇವಲ 17,999 ರೂ. ಗೆ ಮಾರಾಟ ಆಗುತ್ತಿದ್ದರೆ, 8GB RAM ಆಯ್ಕೆಯು 19,999 ರೂ. ಗೆ ನಿಮ್ಮದಾಗಿಸಬಹುದು.
ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ರೀಫ್ರೇಶ್ ರೇಟ್ 90Hz ಆಗಿದೆ. ಸೆಲ್ಫಿ ಕ್ಯಾಮೆರಾ ನಾಚ್ ರಚನೆ ಇದೆ.
ಆಕ್ಟಾಕೋರ್ ಮೀಡಿಯಾ ಟೆಕ್ Dimensity 700 ಪ್ರೊಸೆಸರ್ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಬೆಂಬಲದಲ್ಲಿ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ
ಇನ್ನೂ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 2 ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿಗಾಗಿ 8 ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಎಡಿಟಿಂಗ್ ಆಯ್ಕೆಗಳು ಇವೆ.
ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ.
ರಿಯರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 5G, ವೈಫೈ, ಬ್ಲೂಟೂತ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್ ಅನ್ನು ಒಳಗೊಂಡಿದೆ.