Redmi Note 10 Pro Max: 108MP ಕ್ಯಾಮೆರಾದ ರೆಡ್ಮಿ ಸ್ಮಾರ್ಟ್​​ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ

108MP Camera smartphone: ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್‌ ಸ್ಮಾರ್ಟ್​ಫೊನ್ ಸದ್ಯ ಬಂಪರ್ ಆಫರ್​ನಲ್ಲಿ ಲಭ್ಯವಾಗುತ್ತಿದೆ. ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಸ್ನಾಪ್ಡ್ರಾಗನ್ ಪ್ರೊಸೆಸರ್​ನಿಂದ ಈ ಫೋನ್ ಕೂಡಿದೆ.

Redmi Note 10 Pro Max: 108MP ಕ್ಯಾಮೆರಾದ ರೆಡ್ಮಿ ಸ್ಮಾರ್ಟ್​​ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ
Redmi Note 10 Pro Max copy
Follow us
TV9 Web
| Updated By: Vinay Bhat

Updated on: Aug 02, 2022 | 6:48 AM

ಭಾರತದಲ್ಲಿ ಕ್ಯಾಮೆರಾ ಫೋನ್​ಗಳ ಹಾವಳಿ ಹೆಚ್ಚಾಗುತ್ತಿದೆ. ಈಗಂತು ಎಲ್ಲಿ ನೋಡಿದರೂ 108 ಮೆಗಾಫಿಕ್ಸೆಲ್ ಕ್ಯಾಮೆರಾ ಫೋನ್​ಗಳದ್ದೇ (108MP Camera Phone) ಮಾತು. ಯಾಕೆಂದರೆ ಅಷ್ಟೊಂದು ಕಡಿಮೆ ಬೆಲೆಗೆ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೆ ಶವೋಮಿ ಕೂಡ ತನ್ನ ರೆಡ್ಮಿ ನೋಟ್ ಅಡಿಯಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಅನಾವರಣ ಮಾಡಿತ್ತು. ಅದುವೇ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್‌ (Redmi Note 10 Pro Max). ಈ ಸ್ಮಾರ್ಟ್​ಫೊನ್ ಸದ್ಯ ಬಂಪರ್ ಆಫರ್​ನಲ್ಲಿ ಲಭ್ಯವಾಗುತ್ತಿದೆ. ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಸ್ನಾಪ್ಡ್ರಾಗನ್ ಪ್ರೊಸೆಸರ್​ನಿಂದ ಈ ಫೋನ್ ಕೂಡಿದೆ. ಹಾಗಾದ್ರೆ ಈ ಫೋನಿಗೆ ಏನು ಆಫರ್ ಇದೆ?, ಇದರ ಬೆಲೆ, ಫೀಚರ್ಸ್​ ಏನೇನು? ಎಂಬ ಮಾಹಿತಿ ನೋಡೋಣ.

  1. ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್‌ನ 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಫೋನ್ 18,999 ರೂಪಾಯಿಗೆ ಬಿಡುಗಡೆ ಆಗಿತ್ತು. ಇದೀಗ ಈ ಫೋನ್​ಗೆ 1,000 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಇದನ್ನು ನೀವು 17,999 ರೂ. ಗೆ ಖರೀದಿಸಬಹುದು.
  2. ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ.
  3. ಆಕ್ಟಾಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
  4. ಇನ್ನೂ ಈ ಫೋನಿನ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದೆ. ಇದು ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು ಇದರಲ್ಲಿರುವ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸಾಮರ್ಥ್ಯದಿಂದ ಕೂಡಿದೆ. ಅದು ಸ್ಯಾಮ್‌ಸಂಗ್ ಐಸೊಸೆಲ್ GW3 ಸೆನ್ಸಾರ್‌ ಹೊಂದಿದೆ.
  5. ಇದನ್ನೂ ಓದಿ
    Image
    Oppo A77: ಸದ್ದಿಲ್ಲದೆ ಭಾರತದಲ್ಲಿ ಬಿಡುಗಡೆ ಆಗಿದೆ ಒಪ್ಪೋ A77: ಬೆಲೆ?, ಏನು ಫೀಚರ್ಸ್?
    Image
    WhatsApp: ಸ್ಮಾರ್ಟ್​​ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಬಹುದು: ಹೇಗೆ ಗೊತ್ತೇ?
    Image
    WhatsApp: ವಾಟ್ಸ್​ಆ್ಯಪ್​ನಲ್ಲಿದೆ ನಿಮಗೆ ತಿಳಿದಿಲ್ಲದ ಕ್ವಿಕ್ ರಿಪ್ಲೇ ಆಯ್ಕೆ: ಇದನ್ನು ಬಳಸುವುದು ಹೇಗೆ?
    Image
    World Wide Web Day: ಇಂದು ವರ್ಲ್ಡ್ ವೈಡ್ ವೆಬ್‌ ಡೇ: ಇದರ ಇತಿಹಾಸವೇನು?
  6. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೂಪರ್ ಮ್ಯಾಕ್ರೋ ಶೂಟರ್ ಜೊತೆಗೆ 2x ಜೂಮ್, ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ಆಂಗಲ್ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
  7. 5,020mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈಫೈ, ಬ್ಲೂಟೂತ್, ಇನ್ಫ್ರಾರೆಡ್ (IR), USB ಟೈಪ್ಸಿ, ಮತ್ತು 3.5mm ಹೆಡ್‌ಫೋನ್‌ ಜ್ಯಾಕ್ ಸೇರಿದಂತೆ ಪ್ರಮುಖ ಆಯ್ಕೆಗಳಿವೆ.