WhatsApp: ಸ್ಮಾರ್ಟ್​​ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಬಹುದು: ಹೇಗೆ ಗೊತ್ತೇ?

WhatsApp Tips and Tricks: ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್​ಗೆ ಲಿಂಕ್ ಮಾಡುವುದು. ಈ ಮೂಲಕ ವಾಟ್ಸ್​ಆ್ಯಪ್ ಅನ್ನು ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾಗಿದೆ.

WhatsApp: ಸ್ಮಾರ್ಟ್​​ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಬಹುದು: ಹೇಗೆ ಗೊತ್ತೇ?
WhatsApp
Follow us
TV9 Web
| Updated By: Vinay Bhat

Updated on: Aug 01, 2022 | 2:36 PM

ಫೋನ್ ಇಲ್ಲದೆಯೇ ಸ್ನೇಹಿತರು, ಕುಟುಂಬದವರು ಅಥವಾ ಯಾರ ಜೊತೆ ಬೇಕಾದರು ಚಾಟ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್​​ಆ್ಯಪ್ ನೀಡಿದೆ. ಅರೇ ಫೋನ್ ಇಲ್ಲದೆ ಇದು ಹೇಗೆ ಅಂತೀರಾ?. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಇತ್ತೀಚೆಗಷ್ಟೆ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಒಂದನ್ನು ಪರಿಚಯಿಸಿತ್ತು. ಅದುವೆ ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್​ಗೆ ಲಿಂಕ್ ಮಾಡುವುದು. ಈ ಮೂಲಕ ವಾಟ್ಸ್​ಆ್ಯಪ್ ಅನ್ನು ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾಗಿದೆ. ಒಂದು ಬಾರಿ ನಿಮ್ಮ ಮೊಬೈಲ್ ಮೂಲಕ ಲಿಂಕ್ ಮಾಡಿದರೆ ನಂತರ ಆ ಮೊಬೈಲ್ ಲಿಂಕ್ ಮಾಡಿದ ಡಿವೈಸ್ ಹತ್ತಿರ ಇರಬೇಕೆಂದಿಲ್ಲ.

ಅಂದರೆ ಈ ಮಲ್ಟಿಡಿವೈಸ್ ಫೀಚರ್‌ ಬಳಸಿಕೊಂಡು ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳು ಮತ್ತು ಒಂದು ಫೋನ್ ಅನ್ನು ಸಂಪರ್ಕಿಸಬಹುದು. ಒಂದೇ ವಾಟ್ಸ್​​​ಆ್ಯಪ್ ಅನ್ನು ಇತರೆ ಮೂರು ಲ್ಯಾಪ್ಟರ್ ಅಥವಾ ಡೆಸ್ಕ್​ಟಾಪ್​ನಲ್ಲಿ ವಾಟ್ಸ್​ಆ್ಯಪ್ ಬಳಸಬಹುದು. ಆದರೆ, ಫೋನ್ 14 ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ ಸಂಪರ್ಕಿತ ಸಾಧನಗಳು ಸಂಪರ್ಕ ಕಡಿತಗೊಳ್ಳುತ್ತವೆ.

  1. ಈ ಫೀಚರ್ ಅನ್ನು ಬಳಸಬೇಕಾದರೆ ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್​​ಆ್ಯಪ್​ ಮೇಲೆ ಕ್ಲಿಕ್ ಮಾಡಿ ಮತ್ತು ಮೂರುಡಾಟ್ ಮೆನು ಮೇಲೆ ಟ್ಯಾಪ್ ಮಾಡಿ.
  2. ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಐಒಎಸ್ ಬಳಕೆದಾರರಿಗೆ, ಸೆಟ್ಟಿಂಗ್‌ಗಳ ಐಕಾನ್ ಟ್ಯಾಪ್ ಮಾಡುವ ಮೂಲಕ ವಾಟ್ಸ್​ಆ್ಯಪ್​​ ಆಯ್ಕೆಮಾಡಿ ಲಿಂಕ್ಡ್ ಸಾಧನಗಳನ್ನು ಕ್ಲಿಕ್ ಮಾಡಿ, ಆಯ್ಕೆಮಾಡಿ.
  3. ಇದನ್ನೂ ಓದಿ
    Image
    WhatsApp: ವಾಟ್ಸ್​ಆ್ಯಪ್​ನಲ್ಲಿದೆ ನಿಮಗೆ ತಿಳಿದಿಲ್ಲದ ಕ್ವಿಕ್ ರಿಪ್ಲೇ ಆಯ್ಕೆ: ಇದನ್ನು ಬಳಸುವುದು ಹೇಗೆ?
    Image
    World Wide Web Day: ಇಂದು ವರ್ಲ್ಡ್ ವೈಡ್ ವೆಬ್‌ ಡೇ: ಇದರ ಇತಿಹಾಸವೇನು?
    Image
    Reliance Jio: ನೆಟ್​ಫ್ಲಿಕ್ಸ್​ ಫ್ರೀ ಆಗಿ ನೋಡಬೇಕಾ?: ರಿಲಯನ್ಸ್ ಜಿಯೋದ ಈ ಯೋಜನೆ ಹಾಕಿಸಿಕೊಳ್ಳಿ
    Image
    WhatsApp: ಇನ್ಮುಂದೆ ವಾಟ್ಸ್​ಆ್ಯಪ್​ನಲ್ಲಿ ಏನೇ ಅಪ್ಡೇಟ್​ ಬಂದರೆ ನಿಮಗೆ ತಿಳಿಯುತ್ತೆ: ಬರುತ್ತಿದೆ ಹೊಸ ಫೀಚರ್
  4. ಬಯೋಮೆಟ್ರಿಕ್ ದೃಢೀಕರಣದೊಂದಿಗೆ ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಿ ಅಥವಾ ಪಿನ್ ನಮೂದಿಸಿ.
  5. web.whatsapp.com ಅಥವಾ WhatsApp ಅನ್ನು ಡೆಸ್ಕ್‌ಟಾಪ್ PC ಅಥವಾ ಲ್ಯಾಪ್‌ಟಾಪ್‌ನಲ್ಲಿ ತೆರೆಯಿರಿ.
  6. ಸೆಲ್ಫೋನ್ ಮೂಲಕ ಪರದೆಯ ಮೇಲೆ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈಗ ಲಿಂಕ್ ಆಗುತ್ತಿದೆ. ಈ ಮೂಲಕ ಉಪಯೋಗಿಸಬಹುದು. ಇಲ್ಲಿ ಸ್ಮಾರ್ಟ್​​ಫೋನ್​ನಲ್ಲಿ ಇಂಟರ್ನೆಟ್ ಆಫ್ ಇದ್ದರೂ, ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಉಪಯೋಗಿಸಬಹುದಾಗಿದೆ.
  7. ಅನ್​ಲಿಂಕ್ ಮಾಡಲು ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ ಅನ್ನು ತೆರೆದು ಮೂರುಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ. ಲಿಂಕ್ ಮಾಡಲಾದ ಸಾಧನಗಳನ್ನು ಆಯ್ಕೆಮಾಡಿ. ಈಗ ನೀವು ಲಿಂಕ್ ಆದ ಡಿವೈಸ್​ಗಳ ಪಟ್ಟಿಯನ್ನು ಕಾಣುತ್ತೀರಿ. ಯಾವ ಡಿವೈಸ್ ಅನ್ನು ಅನ್​ಲಿಂಕ್ ಮಾಡಬೇಕು ಅದರ ಮೇಲೆ ಕ್ಲಿಕ್ ಮಾಡಿ ನಂತರ ಲಾಗೌಟ್ ಆಯ್ಕೆಯನ್ನು ಒತ್ತಿರಿ.

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್