Oppo A77: ಸದ್ದಿಲ್ಲದೆ ಭಾರತದಲ್ಲಿ ಬಿಡುಗಡೆ ಆಗಿದೆ ಒಪ್ಪೋ A77: ಬೆಲೆ?, ಏನು ಫೀಚರ್ಸ್?
ಒಪ್ಪೋ ಕಂಪನಿ ಸದ್ದಿಲ್ಲದೆ ದೇಶದಲ್ಲಿ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಯಾವುದೇ ಪ್ರಚಾರ, ಯಾವುದೇ ಸೂಚನೆ ಇಲ್ಲಿದೆ ಭಾರತದಲ್ಲಿ ಒಪ್ಪೋ ಎ77 (Oppo A77) ಸ್ಮಾರ್ಟ್‌ಫೋನ್ (Smartphone) ರಿಲೀಸ್ ಆಗಿದೆ.

Oppo A77
ಚೀನಾ ಮೂಲದ ಪ್ರಸಿದ್ಧ ಒಪ್ಪೋ (Oppo) ಕಂಪನಿ ಕೆಲ ವಾರಗಳ ಹಿಂದೆಯಷ್ಟೆ ಭಾರತದಲ್ಲಿ ತನ್ನ ರೆನೋ ಸರಣಿ ಫೋನನ್ನು ಬಿಡುಗಡೆ ಮಾಡಿ ಭರ್ಜರಿ ಸದ್ದು ಮಾಡಿತ್ತು. ರೆನೋ 7 ಸರಣಿಯ ಸ್ಮಾರ್ಟ್‌ಫೋನ್ ದೇಶದಲ್ಲಿ ಉತ್ತಮ ಸೇಲ್ ಕೂಡ ಕಾಣುತ್ತಿದೆ. ಹೀಗಿರುವಾಗ ಒಪ್ಪೋ ಕಂಪನಿ ಸದ್ದಿಲ್ಲದೆ ದೇಶದಲ್ಲಿ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಯಾವುದೇ ಪ್ರಚಾರ, ಯಾವುದೇ ಸೂಚನೆ ಇಲ್ಲಿದೆ ಭಾರತದಲ್ಲಿ ಒಪ್ಪೋ ಎ77 (Oppo A77) ಸ್ಮಾರ್ಟ್‌ಫೋನ್ (Smartphone) ರಿಲೀಸ್ ಆಗಿದೆ. ಅತ್ಯುತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿ, ಫಾಸ್ಟ್ ಚಾರ್ಜರ್ನಿಂದ ಕೂಡಿರುವ ಈ ಫೋನ್ ಬಜೆಟ್ ಬೆಲೆಗೆ ಲಭ್ಯವಿರುವುದು ವಿಶೇಷ. ಹಾಗಾದ್ರೆ ಒಪ್ಪೋ A77 ಫೋನಿನ ಫೀಚರ್ಸ್ನಲ್ಲಿ ಏನೇನಿದೆ?, ಬೆಲೆ ಎಷ್ಟು? ಎಂಬುದನ್ನು ನೋಡೋಣ.
- ಭಾರತದಲ್ಲಿ ಒಪ್ಪೋ A77 ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ ಕೇವಲ 15,499 ರೂ. ನಿಗದಿ ಮಾಡಲಾಗಿದೆ.
- 5G ಬೆಂಬಲ ಪಡೆದುಕೊಂಡಿರುವ ಈ ಸ್ಮಾರ್ಟ್‌ಫೋನ್ ಸದ್ಯಕ್ಕೆ ಎಲ್ಲ ಆಫ್ಲೈನ್ ಸ್ಟೋರ್ಗಳಲ್ಲಿ ಲಭ್ಯವಾಗುತ್ತಿದೆಯಂತೆ. ಮಿಡ್ನೈಟ್ ಬ್ಲಾಕ್ ಮತ್ತು ಓಶಿಯನ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.
- ಒಪ್ಪೋ A77 5G ಸ್ಮಾರ್ಟ್‌ಫೋನ್ 720*1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.56 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ರೇಟ್ನಿಂದ ಕೂಡಿದೆ.
- ಇದು ಆಕ್ಟಾಕೋರ್ ಮೀಡಿಯಾಟೆಕ್ 810 ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು ವಿಸ್ತರಿಸಬಹುದು.
- ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 45 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಜೊತೆಗೆ 8 ಮೆಗಾಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ.
- ಒಪ್ಪೋ A77 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಸದ್ಯಕ್ಕೆ ಅಂಗಡಿಗಳಲ್ಲಿ ಮಾತ್ರ ಖರೀದಿಗ ಲಭ್ಯವಿರುವ ಈ ಫೋನ್ ನಂತರದಲ್ಲಿ ಇ ಕಾಮರ್ಸ್ ತಾಣದ ಮೂಲಕವೂ ಖರೀದಿಸಬಹುದು.
ಇದನ್ನೂ ಓದಿ
WhatsApp: ಸ್ಮಾರ್ಟ್‌ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡಬಹುದು: ಹೇಗೆ ಗೊತ್ತೇ?
WhatsApp: ವಾಟ್ಸ್ಆ್ಯಪ್ನಲ್ಲಿದೆ ನಿಮಗೆ ತಿಳಿದಿಲ್ಲದ ಕ್ವಿಕ್ ರಿಪ್ಲೇ ಆಯ್ಕೆ: ಇದನ್ನು ಬಳಸುವುದು ಹೇಗೆ?
World Wide Web Day: ಇಂದು ವರ್ಲ್ಡ್ ವೈಡ್ ವೆಬ್ ಡೇ: ಇದರ ಇತಿಹಾಸವೇನು?
Reliance Jio: ನೆಟ್ಫ್ಲಿಕ್ಸ್ ಫ್ರೀ ಆಗಿ ನೋಡಬೇಕಾ?: ರಿಲಯನ್ಸ್ ಜಿಯೋದ ಈ ಯೋಜನೆ ಹಾಕಿಸಿಕೊಳ್ಳಿ
Published On - 3:24 pm, Mon, 1 August 22