Galaxy M13: 6000mAh ಬ್ಯಾಟರಿ, 50MP ಕ್ಯಾಮೆರಾ: ಪ್ರೈಮ್ ಡೇ ಸೇಲ್​ನಲ್ಲಿ ಗ್ಯಾಲಕ್ಸಿ M13 ಭರ್ಜರಿ ಮಾರಾಟ

| Updated By: Vinay Bhat

Updated on: Jul 23, 2022 | 3:06 PM

Amazon Prime Day sale: ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ ಎಮ್​13 (Samsung Galaxy M13) ಸ್ಮಾರ್ಟ್​​ಫೋನ್ 4G ಮತ್ತು 5G ಎರಡು ಆವೃತ್ತಿಯಲ್ಲಿ ಕಳೆದ ವಾರ ಅನಾವರಣಗೊಂಡಿತ್ತು. ಈ ಫೋನ್ ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಖರೀದಿಗೆ ಸಿಗುತ್ತಿದೆ.

Galaxy M13: 6000mAh ಬ್ಯಾಟರಿ, 50MP ಕ್ಯಾಮೆರಾ: ಪ್ರೈಮ್ ಡೇ ಸೇಲ್​ನಲ್ಲಿ ಗ್ಯಾಲಕ್ಸಿ M13 ಭರ್ಜರಿ ಮಾರಾಟ
Samsung Galaxy M13
Follow us on

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಪ್ರೈಮ್ ಡೇ ಸೇಲ್ ನಡೆಯುತ್ತಿದೆ. ಇಂದು ಮೊದಲ ದಿನದ ಪ್ರಯುಕ್ತ ಅನೇಕ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳು ಮೊದಲ ಮಾರಾಟ ಕಾಣುತ್ತಿದೆ. ಇದರಲ್ಲಿ ಸ್ಯಾಮ್​ಸಂಗ್ ಕಂಪನಿಯ ಗ್ಯಾಲಕ್ಸಿ ಎಮ್​13 (Samsung Galaxy M13) ಸ್ಮಾರ್ಟ್​​ಫೋನ್ ಕೂಡ ಒಂದು. ವಿಶೇಷ ಎಂದರೆ ಇದು 4G ಮತ್ತು 5G ಎರಡು ಆವೃತ್ತಿಯಲ್ಲಿ ಕಳೆದ ವಾರ ಅನಾವರಣಗೊಂಡಿತ್ತು. ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಇದುಕೂಡ ಬಜೆಟ್ ಫೋನ್ ಆಗಿದ್ದು ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. 4ಜಿ ಆವೃತ್ತಿಯ ಫೋನ್​ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಿಗ್ ಬ್ಯಾಟರಿ ನೀಡಲಾಗಿದೆ. 5ಜಿ ಆವೃತ್ತಿಯಲ್ಲಿ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಅಳವಡಿಸಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಫೀಚರ್ಸ್​ ಏನು?, ಆಫರ್ ಏನಿದೆ? ಎಂಬುದನ್ನು ನೋಡೋಣ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13 4G:

ಸ್ಯಾಮ್​ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ. ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಎಕ್ಸಿನೋಸ್ 850 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಒನ್​ಯುಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್ಆಫ್ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇದನ್ನೂ ಓದಿ
Flipkart: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್: 108MP ಕ್ಯಾಮೆರಾದ ಈ ಫೋನ್​ಗೆ ಬಂಪರ್ ಡಿಸ್ಕೌಂಟ್
Amazon Prime Day Sale: ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್: 30,000 ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್
ಫೋನ್ ಕಳೆದುಕೊಂಡರೆ ಅದರಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಬ್ಲಾಕ್ ಮಾಡುವುದು ಹೇಗೆ?
Redmi k50i 5G: ಭಾರತದಲ್ಲಿ ಇಂದಿನಿಂದ ರೆಡ್ಮಿ K50i ಮಾರಾಟ ಆರಂಭ: ಈ ಫೋನನ್ನು ಖರೀದಿಸಬಹುದೇ?

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಗ್ಯಾಲಕ್ಸಿ M13 4G ಸ್ಮಾರ್ಟ್​​ಫೋನ್ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB + 64GB ಸ್ಟೋರೆಜ್ ಮಾದರಿಗೆ ಕೇವಲ 11,999 ರೂ. ಇದೆ. ಅಂತೆಯೆ 6GB + 128GB ಸ್ಟೋರೆಜ್ ಸಾಮರ್ಥ್ಯಕ್ಕೆ 13,999 ರೂ. ನಿಗದಿ ಮಾಡಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13 5G:

ಗ್ಯಾಲಕ್ಸಿ M13 5G ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್​ ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 480 ನಿಟ್ಸ್​ ಬ್ರೈಟ್​ನೆಸ್​ ಅನ್ನು ನೀಡುತ್ತದೆ. 90Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಕೂಡ ಇದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12.0 ಅನ್ನು ಒನ್​ಯುಐ 4 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಡ್ಯುಯೆಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ. ಅಂತೆಯೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, ಸ್ಯಾಮ್​ಸಂಗ್ ನಾಕ್ಸ್ ಸೆಕ್ಯೂರಿಟಿ ಜೊತೆಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ನೀಡಲಾಗಿದೆ.

ಗ್ಯಾಲಕ್ಸಿ M13 5G ಸ್ಮಾರ್ಟ್​​ಫೋನ್ ಕೂಡ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB + 64GB ಸ್ಟೋರೆಜ್ ಮಾದರಿಗೆ ಕೇವಲ 13,999 ರೂ. ಇದೆ. ಅಂತೆಯೆ 6GB + 128GB ಸ್ಟೋರೆಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿ ಮಾಡಲಾಗಿದೆ. ಮೊದಲ ಸೇಲ್ ಪ್ರಯುಕ್ತ ಆಫರ್ ಕೂಡ ನೀಡಲಾಗಿದ್ದು, ICICI ಬ್ಯಾಂಕ್ ಕಾರ್ಡ್​​ ಮೂಲಕ ಪಡೆದುಕೊಂಡರೆ 1,000 ರೂ. ಗಳ ರಿಯಾಯತಿ ಘೋಷಿಸಲಾಗಿದೆ.

Published On - 3:06 pm, Sat, 23 July 22