ಸ್ಯಾಮ್​​ಸಂಗ್​ನಿಂದ ಮತ್ತೊಂದು ಭರ್ಜರಿ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಫೋನ್: ಮಾಹಿತಿ ಸೋರಿಕೆ

| Updated By: Vinay Bhat

Updated on: Jul 14, 2021 | 6:40 PM

Samsung Galaxy M32 ಬರೋಬ್ಬರಿ 6,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 64 ಮೆಗಾಫಿಕ್ಸೆಲ್ ನ ಕ್ವಾಡ್ ಕ್ಯಾಮೆರಾ ಅಳವಡಿಸಲಾಗಿದೆಯಂತೆ.

ಸ್ಯಾಮ್​​ಸಂಗ್​ನಿಂದ ಮತ್ತೊಂದು ಭರ್ಜರಿ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಫೋನ್: ಮಾಹಿತಿ ಸೋರಿಕೆ
Samsung Galaxy M32 5G
Follow us on

ಟೆಕ್ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್ (Samsung) ಕಂಪೆನಿಗೆ ಭಾರತ ನೆಚ್ಚಿನ ತಾಣವಾಗಿದೆ. ಇದಕ್ಕಾಗಿಯೆ ದೇಶದಲ್ಲಿ ತಿಂಗಳಿಗೆ ಒಂದು ಅಥವಾ ಎರಡು ಸ್ಮಾರ್ಟ್​​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತಲೇ ಇರುತ್ತದೆ. ಗ್ಯಾಲಕ್ಸಿ ಎಸ್, ಗ್ಯಾಲಕ್ಸಿ ಎ ಮತ್ತು ಗ್ಯಾಲಕ್ಸಿ ಎಂ ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತದೆ. ಸದ್ಯ ತನ್ನ M ಸರಣಿಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಹೊಸ ಫೋನನ್ನು ಲಾಂಚ್ ಮಾಡುವುದು ಖಚಿತವಾಗಿದೆ.

ಸ್ಯಾಮ್​ಸಂಗ್ ಭಾರತದಲ್ಲಿ ಬಿಡುಗಡೆ ಮಾಡಲು ಹೊರಟಿರುವ ಹೊಸ ಫೋನ್ Galaxy M32 ಆಗಿದ್ದು, ಕೆಲವು ಮಾಹಿತಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಇದು 5G ಬೆಂಬಲದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆಯಂತೆ. ಪ್ರಮುಖವಾಗಿ ಗ್ಯಾಲಕ್ಸಿ M32 ಬರೋಬ್ಬರಿ 6,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 64 ಮೆಗಾಫಿಕ್ಸೆಲ್ ನ ಕ್ವಾಡ್ ಕ್ಯಾಮೆರಾ ಅಳವಡಿಸಲಾಗಿದೆಯಂತೆ.

ಸದ್ಯ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ M32 ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸೂಪರ್‌ ಅಮೋಲೆಡ್‌ ಇನ್ಫಿನಿಟಿ-ಒ ಡಿಸ್‌ಪ್ಲೇ ಆಗಿದೆ.

MediaTek Dimensity 720 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಒಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 6GB RAM ಆಯ್ಕೆಯಲ್ಲಿ ಸಿಗಲಿದೆಯಂತೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ನಿಂದ ಒಳಗೊಂಡಿದೆ. ಸೆಲ್ಫಿಗಾಗಿ ಎಷ್ಟು ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ ಎಂಬುದು ಬಹಿರಂಗವಾಗಿಲ್ಲ.

ವಿಶೇಷ ಎಂದರೆ ಗ್ಯಾಲಕ್ಸಿ ಎಮ್32 ಸ್ಮಾರ್ಟ್‌ಫೋನ್‌ ಬರೋಬ್ಬರಿ 6,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿಯನ್ನು ಹೊಂದಿದ್ದು, ಇದು 25W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. ಇದರ ಬೆಲೆ ಎಷ್ಟಿರಬಹುದೆಂದು ತಿಳಿದುಬಂದಿಲ್ಲ.

Airtel ಗ್ರಾಹಕರು ಫುಲ್ ಖುಷ್: ಈ ಪ್ಲಾನ್ ಹಾಕಿಸಿಕೊಂಡರೆ ಒಂದು ವರ್ಷದವರೆಗೆ ನೋ ಟೆನ್ಶನ್

65W ಫಾಸ್ಟ್​ ಚಾರ್ಜಿಂಗ್ ಜೊತೆಗೆ ಆಕರ್ಷಕ ಫೀಚರ್: ಒಪ್ಪೋದಿಂದ ಎರಡು 5G ಸ್ಮಾರ್ಟ್​ಫೋನ್ ರಿಲೀಸ್: ಬೆಲೆ?

(Samsung Galaxy M32 5G Specifications revealed via Geekbench Dimensity 720 SoC 6000mAh battery and more)