ಸ್ಯಾಮ್ಸಂಗ್ (Samsung) ಕಂಪನಿ ಇತ್ತೀಚೆಗಷ್ಟೆ ತನ್ನ ಅತಿ ದೊಡ್ಡ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ ದಿನಾಂಕವನ್ನು ಘೋಷಿಸಿದೆ. ಇದು ಆಗಸ್ಟ್ 10 ರಂದು ನಡೆಯಲಿದೆ. ಇದರಲ್ಲಿ ಕಂಪನಿ ತನ್ನ ಮುಂದಿನ ವರ್ಷನ್ನ ಫೋಲ್ಡೆಬಲ್ ಸ್ಮಾರ್ಟ್ಫೋನನ್ನು (Smartphone) ಅನಾವರಣ ಮಾಡುವ ಸಂಭವವಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ಯಾಮ್ಸಂಗ್ ಒಂದು ಹಿಂಟ್ ಕೊಟ್ಟಿದ್ದು ಕಳೆದ ವರ್ಷ ಬಿಡುಗಡೆ ಆದ ದುಬಾರಿ ಬೆಲೆಯ ಗ್ಯಾಲಕ್ಸಿ ಝಡ್ ಫೋಲ್ಡ್ 3 5ಜಿ (Galaxy Z Fold 3 5G) ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಿದೆ. ಈ ಸ್ಮಾರ್ಟ್ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿತ್ತು. ಇದೀಗ ಈ ಎರಡೂ ಆವೃತ್ತಿ ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡದೆ. ಹಾಗಾದ್ರೆ ಗ್ಯಾಲಕ್ಸಿ Z ಫೋಲ್ಡ್ 3 ಈಗ ಎಷ್ಟು ರೂಪಾಯಿಗೆ ದೊರೆಯುತ್ತಿದೆ?, ಇದರ ವಿಶೇಷತೆ ಏನೇನು? ಎಂಬುದನ್ನು ನೋಡೋಣ.
ಗ್ಯಾಲಕ್ಸಿ Z ಫೋಲ್ಡ್ 3 5G ಸ್ಮಾರ್ಟ್ಫೋನ್ ಕಳೆದ ವರ್ಷ ಆಗಸ್ಟ್ನಲ್ಲಿ ದೇಶದಲ್ಲಿ ರಿಲೀಸ್ ಆಗಿತ್ತು. ಇದರ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 1,49,999 ರೂ. ಇತ್ತು. ಅಂತೆಯೆ 12GB RAM ಮತ್ತು 512GB ಸ್ಟೋರೇಜ್ ರೂಪಾಂತರಕ್ಕೆ 1,57,999 ರೂ. ಇತ್ತು. ಇದೀಗ ಈ ಎರಡೂ ವೇರಿಯಂಟ್ನಲ್ಲಿ 10,000 ರೂ. ಗಳ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಸದ್ಯ ಈ ಫೋನಿನ 12GB RAM ಮತ್ತು 256GB ಸ್ಟೋರೇಜ್ 1,39,999 ರೂ. ಗೆ ಮಾರಾಟ ಕಾಣುತ್ತಿದೆ. ಅಂತೆಯೆ 12GB RAM ಮತ್ತು 512GB ಸ್ಟೋರೇಜ್ ರೂಪಾಂತವು 1,47,999 ರೂ. ಗೆ ಸಿಗುತ್ತಿದೆ.
ಗ್ರಾಹಕರು ಈ ಫೋನನ್ನು ಪ್ಯಾಂಥಮ್ ಬ್ಲಾಕ್, ಪ್ಯಾಂಥಮ್ ಗ್ರೀನ್ ಮತ್ತು ಪ್ಯಾಂಥಮ್ ಸಿಲ್ವರ್ ಕಲರ್ನಲ್ಲಿ ಖರೀದಿಸಬಹುದು. ಸ್ಯಾಮ್ಸಂಗ್ ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲೂ ಈ ಆಫರ್ ನೀಡಲಾಗಿದೆ. ಜೊತೆಗೆ ನೋ ಕಾಸ್ಟ್ ಇಎಮ್ಐ ಆಯ್ಕೆ ಇದೆ. ಇದರ ಜೊತೆಗೆ ಗ್ಯಾಲಕ್ಸಿ ವಾಚ್ ಅನ್ನು ಕೇವಲ 2,999 ರೂ. ಗೆ ನಿಮ್ಮದಾಗಿಸಬಹುದು.
ಗ್ಯಾಲಕ್ಸಿ ಫೋಲ್ಡ್ 3 ಸ್ಮಾರ್ಟ್ಫೋನ್ 7.6 ಇಂಚಿನ ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡ್ಯುಯಲ್ ಡಿಸ್ಪ್ಲೇ ರಚನೆಯನ್ನು ಹೊಂದಿದೆ. ಡಿಸ್ಪ್ಲೇ ಅನುಪಾತವು 22.5:18 ಆಗಿದೆ. ಹಾಗೆಯೇ ಫೋನಿನ ಕವರ್ ಸ್ಕ್ರೀನ್ 6.2-ಇಂಚಿನ HD+ (832×2,268 ಪಿಕ್ಸೆಲ್ಗಳು) ಡೈನಾಮಿಕ್ AMOLED 2X ಡಿಸ್ಪ್ಲೇ 120Hz ರಿಫ್ರೆಶ್ ದರದಲ್ಲಿದೆ.
ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 888 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI ಬೆಂಬಲಿತ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇದೆ. ಹಿಂಬದಿಯಲ್ಲಿ ಒಟ್ಟು ಮೂರು ರಿಯರ್ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿನ ಮೂರು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾ 10 ಎಂಪಿ ಸೆನ್ಸಾರ್ನಲ್ಲಿದೆ. 4,400mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲೂ ಈ ಸ್ಮಾರ್ಟ್ಫೋನ್ ಮಾರಾಟ ಕಾಣುತ್ತಿದೆ.
Published On - 2:22 pm, Tue, 26 July 22