ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಂಪನಿ ಸ್ಯಾಮ್ಸಂಗ್ (Samsung) ಜುಲೈ 26ಕ್ಕೆ ತನ್ನ ಅತಿ ದೊಡ್ಡ ಈವೆಂಟ್ ಅನ್ನು ಘೋಷಣೆ ಮಾಡಿದೆ. ಇದರಲ್ಲಿ ಗ್ಯಾಲಕ್ಸಿಯ ನೂತನ ಪ್ರಾಡಕ್ಟ್ಗಳು ಬಿಡುಗಡೆ ಆಗಲಿದೆ. ಮುಖ್ಯವಾಗಿ ಗ್ಯಾಲಕ್ಸಿ Z ಫೋಲ್ಡ್ (Galaxy Z Fold) ಸರಣಿಯ ಸ್ಮಾರ್ಟ್ಫೋನ್ಗಳು ಅನಾವರಣಗೊಳ್ಳಲಿದೆ. ಇದರ ಜೊತೆಗೆ ಗ್ಯಾಲಕ್ಸಿ ಟ್ಯಾಬ್ ಎಸ್ ಸರಣಿ, ಗ್ಯಾಲಕ್ಸಿ ವಾಚ್ 6 (Galaxy Watch 6) ಸರಣಿ ಕೂಡ ಬಿಡುಗಡೆ ಆಗಲಿದೆ. ಸದ್ಯದಲ್ಲೇ ಇದರ ಪ್ರಿ ಬುಕ್ಕಿಂಗ್ ಆರ್ಡರ್ ಕೂಡ ಶುರುವಾಗಲಿದೆ. ಆದರೆ, ಆಗಸ್ಟ್ನಲ್ಲಷ್ಟೆ ಈ ಎಲ್ಲ ಪ್ರಾಡಕ್ಟ್ಗಳು ಖರೀದಿಗೆ ಸಿಗಲಿದೆ ಎಂದು ಹೇಳಲಾಗಿದೆ.
ಸ್ಯಾಮ್ಸಂಗ್ ಅನ್ಪ್ಯಾಕ್ಡ್ ಈವೆಂಟ್ನಲ್ಲಿ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಸ್ಮಾರ್ಟ್ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪನಿ ಈಗಾಗಲೇ ಪೋಸ್ಟರ್ ಬಿಟ್ಟು ಖಚಿತ ಪಡಿಸಿದೆ. ಈ ಪ್ರೀಮಿಯಂ ಫೋನ್ಗಳು ದುಬಾರಿ ಬೆಲೆ ಹೊಂದಿದ್ದು, ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. Z ಫ್ಲಿಪ್ 5 ಡಿಸೈನ್ ವಿಶೇಷವಾಗಿದ್ದು ಇದು ಡಸ್ಟ್ ಪ್ರೊಟೆಕ್ಷನ್ ಮಾಡುತ್ತಂತೆ. ಇದರಲ್ಲಿ ಫಿಂಗರ್ಪ್ರಿಂಟ್ ಆಯ್ಕೆ ನೀಡಲಾಗಿದೆ. ಮೆಟಲ್ ಫ್ರೇಮ್ನಿಂದ ಬರಲಿದೆಯಂತೆ. ಇದು ಕ್ವಾಲ್ಕಂನ ನೂತನ ಸ್ನಾಪ್ಡ್ರಾಗನ್ ಪ್ರೊಸೆಸರ್ ಮೂಲಕ ಬಿಡುಗಡೆ ಆಗಲಿದೆ. ಬಹುಶಃ ಇದು ಸ್ನಾಪ್ಡ್ರಾಗನ್ 8 ಜೆನ್ 2 ಅಥವಾ ಸ್ನಾಪ್ಡ್ರಾಗನ್ 8+ ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಬಹುದು.
ಗ್ಯಾಲಕ್ಸಿ ಫೋಲ್ಡ್ 5 ಫೋನ್ನಲ್ಲಿ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದು 1/1.3 ಇಂಚಿನ Isocell HP2 ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಇದು ಸದ್ಯ ಗ್ಯಾಲಕ್ಸಿ ಎಸ್23 ಆಲ್ಟ್ರಾದಲ್ಲಿ ಈ ಲೆನ್ಸ್ ನೀಡಲಾಗಿದೆ. ಸೂಪರ್ ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿ ಇದರಲ್ಲಿದ್ದು, ಇದು ಫೋಟೋ ಕ್ವಾಲಿಟಿಯಲ್ಲಿ ಕಾಪಾಡುತ್ತಂತೆ.
ಸ್ಯಾಮ್ಸಂಗ್ ವಾಚ್ 6 ಸರಣಿಯು ವಾಚ್ 6 ಮತ್ತು ವಾಚ್ 6 ಕ್ಲಾಸಿಕ್ ಎಂಬ ಸ್ಮಾರ್ಟ್ ವಾಚ್‌ಗಳನ್ನು ಹೊಂದಿರಲಿದೆ. ವಾಚ್ 6 ಮತ್ತು ವಾಚ್ 6 ಕ್ಲಾಸಿಕ್ ಎರಡೂ ಹಿಂದಿನ ವಾಚ್ ಸರಣಿಯಂತೆಯೇ ವಿಭಿನ್ನ ಗಾತ್ರಗಳಲ್ಲಿ ಲಭ್ಯವಿರುತ್ತವೆ. ಗಾತ್ರದಲ್ಲಿ ವ್ಯತ್ಯಾಸಗಳಿದ್ದರೂ, ವೈಶಿಷ್ಟ್ಯಗಳು ಬಹುತೇಕ ಒಂದೇ ಇರಲಿದೆ ಎನ್ನಲಾಗಿದೆ. ಎರಡು ಗ್ಯಾಲಕ್ಸಿ ವಾಚ್ ಮಾದರಿಗಳು Exynos W930 SoC ನಿಂದ ಚಾಲಿತವಾಗಲಿದೆ. WearOS ಅನ್ನು ಹೆಚ್ಚಿಸಲು ಮತ್ತು ಹೊಸ ಆರೋಗ್ಯ-ಕೇಂದ್ರಿತ ವೈಶಿಷ್ಟ್ಯಗಳನ್ನು ಪರಿಚಯಿಸಲು ಸ್ಯಾಮ್ಸಂಗ್ ಗೂಗಲ್ನೊಂದಿಗೆ ಜೊತೆಗೂಡುವ ಸಾಧ್ಯತೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ