ಭಾರತಕ್ಕೆ ಬಂತು ಸ್ಯಾಮ್​ಸಂಗ್​ನ ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

Samsung Galaxy A05: ಭಾರತದಲ್ಲಿ ಗ್ಯಾಲಕ್ಸಿ A05 ಸ್ಮಾರ್ಟ್​ಫೋನ್ ಅನಾವರಣಗೊಂಡಿದೆ. ಈ ಸ್ಮಾರ್ಟ್​ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ ಬೇಸ್ ಮಾಡೆಲ್ 4GB + 64GB ಆಯ್ಕೆಗೆ ರೂ. 9,999 ಇದೆ. ಅಂತೆಯೆ 6GB + 128GB ಮಾದರಿಯ ಬೆಲೆ ರೂ. 12,999 ಆಗಿದೆ.

ಭಾರತಕ್ಕೆ ಬಂತು ಸ್ಯಾಮ್​ಸಂಗ್​ನ ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?
Samsung Galaxy A05

Updated on: Nov 25, 2023 | 11:48 AM

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ ಕಂಪನಿ ಎರಡು ತಿಂಗಳ ಹಿಂದೆ ಗ್ಯಾಲಕ್ಸಿ A05 ಮತ್ತು A05s ಎಂಬ ಫೋನುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಪೈಕಿ ಇದೀಗ ಕಂಪನಿ ಭಾರತದಲ್ಲಿ ಗ್ಯಾಲಕ್ಸಿ A05 (Samsung Galaxy A05) ಅನ್ನು ಪರಿಚಯಿಸಿದೆ. ಬಜೆಟ್ ಪ್ರಿಯರಿಗೆ ಈ ಸ್ಮಾರ್ಟ್​ಫೋನ್ ಹೇಳಿ ಮಾಡಿಸಿದಂತಿದೆ. ಕಡಿಮೆ ಬೆಲೆಯಾಗಿದ್ದರೂ ಆಕರ್ಷಕ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಆಯ್ಕೆ ನೀಡಲಾಗಿದೆ. ಹಾಗಾದರೆ ಸ್ಯಾಮ್​ಸಂಗ್ ಗ್ಯಾಲಕ್ಸಿ A05 ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಗ್ಯಾಲಕ್ಸಿ A05 ಬೆಲೆ ಎಷ್ಟು?:

ಸ್ಯಾಮ್​ಸಂಗ್ ಗ್ಯಾಲಕ್ಸಿ A05 ಫೋನ್ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ ಬೇಸ್ ಮಾಡೆಲ್ 4GB + 64GB ಆಯ್ಕೆಗೆ ರೂ. 9,999 ಇದೆ. ಅಂತೆಯೆ 6GB + 128GB ಮಾದರಿಯ ಬೆಲೆ ರೂ. 12,999 ಆಗಿದೆ. ಇದನ್ನು ತಿಳಿ ಹಸಿರು, ಕಪ್ಪು ಮತ್ತು ಬೆಳ್ಳಿ ಬಣ್ಣಗಳಲ್ಲಿ ನೀಡಲಾಗುತ್ತದೆ. ಈ ಸ್ಮಾರ್ಟ್‌ಫೋನ್ ಕಂಪನಿಯ ಅಧಿಕೃತ ವೆಬ್​ಸೈಟ್, ಇ ಕಾಮರ್ಸ್ ತಾಣ ಸೇರಿದಂತೆ ಚಿಲ್ಲರೆ ವ್ಯಾಪಾರಿಗಳ ಮೂಲಕ ಶೀಘ್ರದಲ್ಲೇ ಖರೀದಿಗೆ ಸಿಗಲಿದೆ.

OpenAI ಸಿಇಒ ಆಗಿ ಮರಳಿ ಬರಲಿದ್ದಾರೆ ಸ್ಯಾಮ್ ಆಲ್ಟ್‌ಮನ್

ಇದನ್ನೂ ಓದಿ
AI ಅನ್ನು ಅಭಿವೃದ್ಧಿಪಡಿಸಲು ಭಾರತೀಯ ಸರ್ಕಾರಕ್ಕೆ ಸಹಾಯ ಮಾಡಲಿರುವ ಗೂಗಲ್
ವಾರದಲ್ಲಿ 3 ದಿನ ಕೆಲಸ ಸಾಧ್ಯ, ಉದ್ಯೋಗವೇ ಜೀವನದ ಉದ್ದೇಶವಲ್ಲ: ಬಿಲ್ ಗೇಟ್ಸ್
ಅದ್ಭುತ ಕ್ಯಾಮೆರಾ, ಫಾಸ್ಟ್ ಚಾರ್ಜರ್: ಒಪ್ಪೋ ರೆನೋ 11 ಸರಣಿ ಫೋನ್ ಬಿಡುಗಡೆ
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್​ಲೈನ್ ವಂಚನೆ: ಎಚ್ಚರದಿಂದಿರಿ

ಗ್ಯಾಲಕ್ಸಿ A05 ಫೀಚರ್ಸ್ ಏನಿದೆ?:

ಗ್ಯಾಲಕ್ಸಿ A05 ಸ್ಮಾರ್ಟ್​ಫೋನ್ 6.7 ಇಂಚಿನ Infinity-U ಡಿಸ್ ಪ್ಲೇ ಮತ್ತು HD+ ರೆಸಲ್ಯೂಶನ್ ಹೊಂದಿದೆ. ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿಲ್ಲ ಮತ್ತು ಬದಲಿಗೆ ಮುಂಭಾಗದಲ್ಲಿ 8MP ಸೆಲ್ಫಿ ಸ್ನ್ಯಾಪರ್ ಮೂಲಕ ಫೇಸ್ ಅನ್‌ಲಾಕ್ ಅನ್ನು ಅವಲಂಬಿಸುತ್ತದೆ. ಈ ಫೋನ್ 50MP ಮುಖ್ಯ ಸಂವೇದಕ ಮತ್ತು 2MP ಡೆಪ್ತ್ ಲೆನ್ಸ್‌ನ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ಅನ್ನು ಹೊಂದಿದೆ. ಇದು 6GB RAM ಮತ್ತು 128GB ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ. ಹೆಚ್ಚುವರಿ ಶೇಖರಣಾ ಅಗತ್ಯಗಳಿಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಇದೆ. 25W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ. ಆಂಡ್ರಾಯ್ಡ್ 13-ಆಧಾರಿತ OneUI 5.1 ಕೋರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.3, ಮತ್ತು USB-C ಪೋರ್ಟ್ ಸೇರಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Sat, 25 November 23