Galaxy M04: ಇಂದು ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಮಾರಾಟ: ಇದರ ಬೆಲೆ ಕೇವಲ 9,499 ರೂ.

ಸ್ಯಾಮ್​ಸಂಗ್ ಕಂಪನಿ ಕಳೆದ ವಾರವಷ್ಟೆ ದೇಶದಲ್ಲಿ ಹೊಸ ಗ್ಯಾಲಕ್ಸಿ ಎಮ್​04 (Samsung Galaxy M04) ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿತ್ತು. ಇದೀಗ ಇಂದಿನಿಂದ ಈ ಫೋನ್ ಅಮೆಜಾನ್​ನಲ್ಲಿ ಖರೀದಿಗೆ ಸಿಗುತ್ತಿದೆ.

Galaxy M04: ಇಂದು ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಮಾರಾಟ: ಇದರ ಬೆಲೆ ಕೇವಲ 9,499 ರೂ.
Samsung Galaxy M04
Updated By: Vinay Bhat

Updated on: Dec 16, 2022 | 2:29 PM

ಭಾರತದಲ್ಲಿ ಸ್ಯಾಮ್​ಸಂಗ್ (Samsung) ಕಂಪನಿಯ ಮೊಬೈಲ್​ಗಳಿಗೆ ವಿಶೇಷ ಬೇಡಿಕೆ ಇದೆ. ಯಾಕೆಂದರೆ ಸ್ಯಾಮ್​ಸಂಗ್ ಬಜೆಟ್ ಬೆಲೆಯಿಂದ ಹಿಡಿದು ಮಧ್ಯಮ ಹಾಗೂ ಹೈ ರೇಂಜ್ ಮಾದರಿಯ ವರೆಗೆ ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕಡಿಮೆ ಬೆಲೆಯ ಸ್ಯಾಮ್​ಸಂಗ್ ಫೋನುಗಳು ದೇಶದಲ್ಲಿ ಭರ್ಜರಿ ಸೇಲ್ ಆಗುತ್ತದೆ. ಇದಕ್ಕಾಗಿ ಭಾರತದಲ್ಲಿ ಹೆಚ್ಚು ಬಜೆಟ್ ಬೆಲೆಗೆವೇ ಫೋನ್ ಅನಾವರಣ ಮಾಡುತ್ತಿದೆ. ಅದರಲ್ಲೂ ತನ್ನ M ಸರಣಿಯ ಫೋನ್​ಗೆ ಅತ್ಯುತ್ತಮ ಪ್ರತಿಕ್ರಿಯೆ ಕೇಳಿಬರುತ್ತದೆ. ಇದಕ್ಕಾಗಿ ಇದೀಗ ಸ್ಯಾಮ್​ಸಂಗ್ ಕಂಪನಿ ಕಳೆದ ವಾರವಷ್ಟೆ ದೇಶದಲ್ಲಿ ಹೊಸ ಗ್ಯಾಲಕ್ಸಿ ಎಮ್​04 (Samsung Galaxy M04) ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿತ್ತು. ಇದೀಗ ಇಂದಿನಿಂದ ಈ ಫೋನ್ ಅಮೆಜಾನ್​ನಲ್ಲಿ ಖರೀದಿಗೆ ಸಿಗುತ್ತಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಎರಡು ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 9,499ರೂ. ಬೆಲೆ ನಿಗದಿ ಮಾಡಲಾಗಿದೆ. ಅಂತೆಯೆ 4GB RAM + 128GB ಸ್ಟೋರೇಜ್ ಆಯ್ಕೆಗೆ 10,499 ರೂ. ಇದೆ. ಈ ಫೋನ್ ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಸ್ಯಾಮ್​ಸಂಗ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಸೇಲ್ ಕಾಣುತ್ತಿದೆ.

ಇದನ್ನೂ ಓದಿ
Nokia C31: ವಿದೇಶದಲ್ಲಿ ಧೂಳೆಬ್ಬಿಸಿದ ನೋಕಿಯಾ C31 ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?
iPhone 14: ದಂಪತಿಯ ಪ್ರಾಣ ಉಳಿಸಿದ ಐಫೋನ್​ನಲ್ಲಿನ ಆ ಒಂದು ಆಯ್ಕೆ: ಇದು ಹೇಗೆ ಸಾಧ್ಯವಾಯಿತು ನೋಡಿ
Tech Tips: ವಾಟ್ಸ್​ಆ್ಯಪ್​ನಲ್ಲಿ ಟೈಪ್ ಮಾಡದೇ ಟೆಕ್ಸ್ಟ್​​​ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
Realme 10 Pro+: 108MP ಕ್ಯಾಮೆರಾದ ರಿಯಲ್ ಮಿ 10 ಪ್ರೊ+ 5G ಸ್ಮಾರ್ಟ್‌ಫೋನ್‌ ಈಗ ಖರೀದಿಗೆ ಲಭ್ಯ: ಬೆಲೆ ಎಷ್ಟು?

Twitter Gold Checkmark: ಟ್ವಿಟರ್​ನಲ್ಲಿ ಬ್ಲೂ ಜತೆಗೆ ಗ್ರೇ, ಗೋಲ್ಡ್ ಟಿಕ್; ಏನಿದರ ಒಳಮರ್ಮ? ಇಲ್ಲಿದೆ ನೋಡಿ

ಏನು ಫೀಚರ್ಸ್?:

ಈ ಸ್ಮಾರ್ಟ್‌ಫೋನ್​ನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ಅನುಪಾತದಲ್ಲಿದ್ದು ವಾಟರ್‌ ಡ್ರಾಪ್‌ ಶೈಲಿಯ ನಾಚ್‌ ಅನ್ನು ಪಡೆದುಕೊಂಡಿದೆ. ಮೀಡಿಯಾಟೆಕ್‌ ಹಿಲಿಯೋ P35 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್‌ 12 ನಲ್ಲಿ ಒಂದು UI 4.1 ಸ್ಕಿನ್ ಜೊತೆಗೆ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಕೂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್‌ ಎಷ್ಟು ವೋಲ್ಟ್​ನ ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ ಎಂಬುದು ತಿಳಿದುಬಂದಿಲ್ಲ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಬೆಂಬಲವನ್ನು ಪಡೆದಿದೆ. ಈ ಫೋನ್ ಮಿಂಟ್ ಗ್ರೀನ್, ಗೋಲ್ಡ್, ವೈಟ್ ಮತ್ತು ನೀಲಿ ಕಲರ್​ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದೆ.

ಇನ್ನಷ್ಟು ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ