Netflix: ನೆಟ್​​ಫ್ಲಿಕ್ಸ್​ನಿಂದ ಶಾಕ್: ನೀವು ಸ್ನೇಹಿತರಿಗೆ ಪಾಸ್ವರ್ಡ್ ಕೊಟ್ಟಿದ್ದರೆ ತಪ್ಪದೇ ಈ ಸ್ಟೋರಿ ಓದಿ

| Updated By: Vinay Bhat

Updated on: Mar 18, 2022 | 1:19 PM

Netflix Password: ನೆಟ್‌ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್‌ವರ್ಡ್ ಹಂಚಿಕೊಳ್ಳಬಹುದಾದ ಅವಕಾಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ಯೋಚಿಸುತ್ತಿದೆ.

Netflix: ನೆಟ್​​ಫ್ಲಿಕ್ಸ್​ನಿಂದ ಶಾಕ್: ನೀವು ಸ್ನೇಹಿತರಿಗೆ ಪಾಸ್ವರ್ಡ್ ಕೊಟ್ಟಿದ್ದರೆ ತಪ್ಪದೇ ಈ ಸ್ಟೋರಿ ಓದಿ
Netflix
Follow us on

ಇಂದು ಏನಿದ್ದರೂ ಓಟಿಟಿ (OTT) ಪ್ಲ್ಯಾಟ್ ಫಾರಂಗಳದ್ದೇ ಹವಾ. ಕೋವಿಡ್ ಬಂದ ಮೇಲಂತು ಇದರ ಬೇಡಿಕೆ ದುಪ್ಪಟ್ಟಾಗಿದೆ. ಸದ್ಯ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಆನ್​ಲೈನ್ ಮನರಂಜನೆ ತಾಣವೆಂದರೆ ನೆಟ್‌ಫ್ಲಿಕ್ಸ್‌, ಅಮೆಜಾನ್‌ (Amazon). ಇವುಗಳಲ್ಲಿರುವ ಉತ್ತಮ ಬೆನಿಫಿಟ್ ಎಂದರೆ ಅದರ ಚಂದಾದಾರಿಕೆ ತುಸು ದುಬಾರಿಯಾಗಿರುವುದರಿಂದ, ಹಲವರು ತಮ್ಮ ಸ್ನೇಹಿತರ ಖಾತೆ ಮತ್ತು ಪಾಸ್‌ವರ್ಡ್‌ ಬಳಸಿ ವೀಕ್ಷಣೆ ಮಾಡುವ ಆಯ್ಕೆ. ಆದರೀಗ ಇದನ್ನು ತಡೆಯಲು ನೆಟ್‌ಫ್ಲಿಕ್ಸ್‌ (Netflix) ಮುಂದಾಗಿದೆ. ಹೌದು, ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲ್ಯಾಟ್ ಫಾರಂ ನೆಟ್​​ಫ್ಲಿಕ್ಸ್ ಖಾತೆ ಹೊಂದಿರುವವರು ತಮ್ಮ ಖಾತೆಯ ಪಾಸ್ ವರ್ಡ್ ಅನ್ನು ಗೆಳೆಯ/ಗೆಳತಿಯರು ಹಾಗೂ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡು ಉಚಿತವಾಗಿ ವೆಬ್ ಸೀರಿಸ್ , ಸಿನಿಮಾ ವೀಕ್ಷಿಸುತ್ತಿದ್ದರೆ ಇನ್ನು ಮುಂದೆ ಅದಕ್ಕೆ ಕಡಿವಾಣ ಬೀಳಲಿದೆ. ಇದೀಗ ಮಹತ್ವದ ನಿರ್ಧಾರವೊಂದಕ್ಕೆ ನೆಟ್​ಫ್ಲಿಕ್ಸ್ ಮುಂದಾಗಿದೆ.

ನೆಟ್‌ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್‌ವರ್ಡ್ ಹಂಚಿಕೊಳ್ಳಬಹುದಾದ ಅವಕಾಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ಯೋಚಿಸುತ್ತಿದೆ. ಈ ಹಿಂದೆ ನೆಟ್‌ಫ್ಲಿಕ್ಸ್ ಚಂದಾದಾರು ತಮ್ಮ ಪಾಸ್‌ವರ್ಡ್ ಅನ್ನು ಗೆಳೆಯರೊಡನೆ ಹಂಚಿಕೊಳ್ಳುವ ಮೂಲಕ ತಮಗೆ ಸಿಗುತ್ತಿದ್ದ ಮಲ್ಟಿಪಲ್ ಡಿವೈಸ್ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಈ ಅವಕಾಶಕ್ಕೆ ನೆಟ್‌ಫ್ಲಿಕ್ಸ್ ಕಡಿವಾಣ ಹಾಕಲಿದೆ. ಗೆಳೆಯರೊಡನೆ ಪಾಸ್‌ವರ್ಡ್ ಹಂಚಿಕೊಳ್ಳಲು ನೆಟ್‌ಫ್ಲಿಕ್ಸ್ ಹೆಚ್ಚುವರಿ ಶುಲ್ಕ ವಿಧಿಸಲಿದೆ ಎಂದು ತಿಳಿಸಿದೆ.

ಹಂಚಿದ ನೆಟ್‌ಫ್ಲಿಕ್ಸ್ ಖಾತೆಯಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಆಯ್ಕೆ ಮಾಡಿದಾಗ, ಖಾತೆದಾರರಿಗೆ ಕಳುಹಿಸಿದ ಪಠ್ಯ ಅಥವಾ ಇಮೇಲ್‌ನೊಂದಿಗೆ ದೃಢಿಕರಿಸುವ ಮೂಲಕ ಖಾತೆಯನ್ನು ಪರಿಶೀಲಿಸಲು ಪಾಪ್-ಅಪ್ ಮೂಲಕ ಕೇಳುತ್ತದೆ. ಅಂದರೆ ನೆಟ್​​ಫ್ಲಿಕ್ಸ್ ಖಾತೆಯ ಮುಖ್ಯ ಬಳಕೆದಾರರಿಗೆ ಇ-ಮೇಲ್ ಮೂಲಕ ಕೋಡ್ ಕಳುಹಿಸಲಾಗುತ್ತದೆ. ಒಂದು ವೇಳೆ ನೆಟ್​​ಫ್ಲಿಕ್ಸ್ ಖಾತೆಯನ್ನು ಮನೆಯ ಮತ್ತೊಬ್ಬ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಸಂದರ್ಭದಲ್ಲಿ ಬಳಕೆದಾರ ಕಡ್ಡಾಯವಾಗಿ ಕೋಡ್ ಅನ್ನು ವೆರಿಫೈ ಮಾಡಬೇಕಾಗುತ್ತದೆ. ಇದರಿಂದಾಗಿ ನೆಟ್​​ಫ್ಲಿಕ್ಸ್ ಖಾತೆಯ ಒಂದು ಪಾಸ್ ವರ್ಡ್ ಎಷ್ಟು ಮೊಬೈಲ್ ನಲ್ಲಿ ಬಳಕೆಯಾಗುತ್ತಿದೆ ಎಂಬುದು ತಿಳಿಯಲಿದ್ದು, ಈ ಮೂಲಕ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಈಗಾಗಲೇ ಬ್ರಿಟನ್ ಹಾಗೂ ಐರ್ಲೆಂಡಿನಲ್ಲಿ ಈ ಕ್ರಮ ಜಾರಿಯಾಗಿದೆ. ಚಂದಾದಾರರು ತಮ್ಮ ಗೆಳೆಯರೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳಲು ಹೆಚ್ಚುವರಿ 2-3 ಡಾಲರ್ ಭರಿಸಬೇಕು ಎಂದು ಕಂಪನಿ ತಿಳಿಸಿದೆ. ಶೀಘ್ರವೇ ನೆಟ್‌ಫ್ಲಿಕ್ಸ್‌ನ ಹೊಸ ಕ್ರಮ ಜಾಗತಿಕವಾಗಿ ಜಾರಿಯಾಗುವ ಸಾಧ್ಯತೆ ಇದೆ. ನೆಟ್‌ಫ್ಲಿಕ್ಸ್ ತನ್ನ ಹೊಸ ಚಂದಾದಾರಿಗೆ ಈಗಾಗಲೇ ಈ ನಿಯಮವನ್ನು ಜಾರಿಗೊಳಿಸಿದೆ. ಪ್ರಸ್ತುತ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಈ ನಿಯಮ ಅನ್ವಯವಾಗುವುದಕ್ಕೂ 30 ದಿನಗಳ ಮೊದಲು ತಿಳಿಸಲಿದೆ. ನೆಟ್​​ಫ್ಲಿಕ್ಸ್ ಬ್ರಿಟನ್​​ನಲ್ಲಿ 14 ಮಿಲಿಯನ್ ಸಬ್ಸ್ ಕ್ರೈಬರ್ ಅನ್ನು ಹೊಂದಿದ್ದು, ಐರ್ಲೆಂಡ್​​ನಲ್ಲಿ 6,00,000 ಸಬ್ಸ್ ಕ್ರೈಬರ್ ಇದ್ದಾರೆ.

Redmi 10 ಬಿಡುಗಡೆ: ಕೇವಲ 10,000 ರೂ. ಗೆ 50MP ಕ್ಯಾಮೆರಾ, 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ