Smartphone Tips: ಹೊಸ ಸ್ಮಾರ್ಟ್​​ಫೋನ್ ಖರೀದಿಸುವಾಗ ತಪ್ಪಿಯೂ ಹೀಗೆ ಮಾಡಬೇಡಿ

| Updated By: Vinay Bhat

Updated on: May 09, 2022 | 2:11 PM

ಹೊಸ ಫೋನ್ ಅನ್ನು ಖರೀದಿಸುವ ಮುನ್ನ ನೀವು ಏನೆಲ್ಲ ಮಾಡಬೇಕು?, ಫೋನ್ ಬಗ್ಗೆ ಏನು ಗಮನ ಹರಿಸಬೇಕು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

Smartphone Tips: ಹೊಸ ಸ್ಮಾರ್ಟ್​​ಫೋನ್ ಖರೀದಿಸುವಾಗ ತಪ್ಪಿಯೂ ಹೀಗೆ ಮಾಡಬೇಡಿ
Smartphone Tips
Follow us on

ಇಂದಿನ ಸ್ಮಾರ್ಟ್​ ಯುಗದಲ್ಲಿ ಮೊಬೈಲ್ (Mobile) ಎಂಬುದು ದೊಡ್ಡ ವಿಷಯವೇ ಅಲ್ಲ. ಎಲ್ಲಾದರು ಸ್ಮಾರ್ಟ್​ಫೋನ್ (Smartphone) ಹಾಳಾದಲ್ಲಿ ಅದನ್ನು ಸರಿಪಡಿಸುವುದು ಅಥವಾ ಕಳೆದು ಹೋದಲ್ಲಿ ಅದನ್ನು ಹುಡುಕುವ ಕೆಲಸಕ್ಕೆಲ್ಲ ಯಾರು ಹೋಗುವುದಿಲ್ಲ. ಮತ್ತೊಂದು ಹೊಸ ಫೋನನ್ನು ಖರೀದಿ ಮಾಡುತ್ತಾರೆ. ಯಾಕೆಂದರೆ ಇಂದು ಕೈಗೆಟಕುವ ದರದಲ್ಲಿ ಮೊಬೈಲ್​ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹೀಗೆ ಹೊಸ ಸ್ಮಾರ್ಟ್​​ಫೋನ್ ಖರೀದಿ ಮಾಡಬೇಕೆನ್ನುವ ಹುಮ್ಮಸ್ಸು ನಿಮ್ಮಲ್ಲಿರುವುದು ಸರಿಯಾದರೂ ಖರೀದಿ ಮಾಡಿದ ನಂತರ ಅದರ ಸೂಕ್ತ ಕಾಳಜಿಯನ್ನು ಮಾಡುವುದು ಅಗತ್ಯ. ಹೊಸ ಫೋನ್ ಖರೀದಿಸಿ ಸ್ವಲ್ಪ ಸಮಯದ ನಂತರ ಅದನ್ನು ಮೂಲೆಗೆ ಹಾಕಿದರೆ ನೀವೊಂದು ಅತ್ಯಮೂಲ್ಯ ಆಸ್ತಿಯನ್ನು ಕಳೆದುಕೊಂಡಂತೆ. ಹಾಗಾದರೆ ಹೊಸ ಫೋನ್ ಅನ್ನು ಖರೀದಿಸುವ ಮುನ್ನ ನೀವು ಏನೆಲ್ಲ ಮಾಡಬೇಕು?, ಫೋನ್ ಬಗ್ಗೆ ಏನು ಗಮನ ಹರಿಸಬೇಕು? ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಹಲವು ವರದಿಗಳ ಪ್ರಕಾರ ಹೆಚ್ಚಿನವರು ಯಾವುದೇ ಸ್ಮಾರ್ಟ್‌ಪೋನ್‌ ಖರಿದೀಸುವ ಮುನ್ನ ಆ ಸ್ಮಾರ್ಟ್‌ಪೋನಿನ ಡಿಸ್‌ಪ್ಲೇ ಎಷ್ಟು ಅಗಲ ಮತ್ತು ಉದ್ದ ಇದೆ ಎಂದು ನೋಡಿ ಪೋನ್ ಖರೀದಿಸುತ್ತಾರಂತೆ. ಇನ್ನು ಸ್ವಲ್ಪ ಹೆಚ್ಚು ತಿಳಿದವರಾದರೆ, ಆ ಪೋನಿನ ವೇಗ ಎಷ್ಟು, ಸಾಫ್ಟ್‌ವೇರ್ ಯಾವುದು ಎಂದೆಲ್ಲ ಚೆಕ್ ಮಾಡುತ್ತಾರಂತೆ. ಆದರೆ, ನಿಮಗೆ ಗೊತ್ತಾ? 100 ಜನ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ 90 ಜನರಿಗೆ ತಮ್ಮ ಸ್ಮಾರ್ಟ್‌ಫೋನ್ ಸ್ಕ್ರೀನ್ ಗುಣಮಟ್ಟ ಎಷ್ಟಿದೆ ಎಂಬುದೇ ತಿಳಿದಿರುವುದಿಲ್ಲ.

ಹೌದು, ಇತ್ತೀಚಿನ ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇ.  ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ. ಅಂತೆಯೇ ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ. ಹೀಗಾಗಿ ಇದರ ಬಗ್ಗೆ ಕೂಡ ಗಮನ ಇಟ್ಟುಕೊಳ್ಳಿ. ಇದರಲ್ಲಿ ಪಿಪಿಐ ಎಂದರೆ ಪಿಕ್ಸೆಲ್ಸ್ ಪರ್ ಇಂಚ್. ಇಲೆಕ್ಟ್ರಾನಿಕ್ ಇಮೇಜ್ ಸಾಧನದಲ್ಲಿರುವ ಪಿಕ್ಸೆಲ್ ಡೆನ್ಸಿಟಿಯ ಅಳತೆಯನ್ನು ಇದು ಒಳಗೊಂಡಿದೆ. ಕಂಪ್ಯೂಟರ್ ಮಾನಿಟರ್ ಅಥವಾ ಟಿವಿ ಡಿಸ್‌ಪ್ಲೇ, ಕ್ಯಾಮೆರಾ ಅಥವಾ ಇಮೇಜ್ ಸ್ಕ್ಯಾನರ್‌ನಲ್ಲಿ ಪಿಪಿಐ ಯನ್ನು ಕಂಡುಕೊಳ್ಳಬಹುದು. ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿರುವ ಪಾಯಿಂಟ್‌ಗಳ ತೀಕ್ಷ್ಣತೆಯ ಅಳತೆಯನ್ನು ಪಿಪಿಐ ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ
iQOO Neo 6 SE: 80W ಫ್ಲ್ಯಾಶ್ ಚಾರ್ಜ್: ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಮತ್ತೊಂದು ಪವರ್​ಫುಲ್ ಫೋನ್ ಎಂಟ್ರಿ
Realme GT Neo 3: 5 ನಿಮಿಷದಲ್ಲಿ 50% ಚಾರ್ಜ್ ಆಗುವ ಈ ಫೋನ್ ಹೇಗಿದೆ?, ಖರೀದಿಸಬಹುದೇ?
Smartphone Tips: ನೀವು ಮೊಬೈಲ್ ಅನ್ನು ಸೇಲ್ ಮಾಡುವ ಮುನ್ನ ಹೀಗೆ ಮಾಡಲು ಮರೆಯದಿರಿ
iQOO Z6 5G: ಈ ಆಫರ್ ಮತ್ತೆ ಬರಲ್ಲ: ಕೇವಲ 12,999ಕ್ಕೆ ಖರೀದಿಸಿ ಪವರ್​ಫುಲ್ ಬ್ಯಾಟರಿಯ ಐಕ್ಯೂ Z6 5G ಫೋನ್

ಡಿಪಿಐ ಎಂದರೆ ಡಾಟ್ಸ್ ಪರ್ ಇಂಚ್. ಇದು ಸ್ಕ್ರೀನ್ ಮತ್ತು ಇನ್ ಪ್ರಿಂಟ್‌ ಇವೆರಡರಲ್ಲೂ ಇರುವ ಇಮೇಜ್‌ನ ರೆಸಲ್ಯೂಶನ್ ಅನ್ನು ಅಳತೆ ಮಾಡುತ್ತದೆ. ನೀವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಹೆಚ್ಚಿನ ಎಪಿಕೆ ಫೈಲ್‌ಗಳನ್ನು ಇಂಟರ್ನೆಟ್‌ನಲ್ಲಿ ಕಂಡಿರುತ್ತೀರಿ. ಈ ಎಪಿಕೆ ಫೈಲ್‌ಗಳನ್ನು ಬೇರೆ ಬೇರೆ ಅಂಶಗಳ ಮೂಲಕ ವರ್ಗೀಕರಿಸಲಾಗುತ್ತದೆ ಅಂದರೆ ಪ್ರೊಸೆಸರ್ ಪ್ರಕಾರಗಳು ಮತ್ತು ಡಿಪಿಐ ಮೌಲ್ಯಗಳು ಎಂದಾಗಿದೆ. ಇದು ಡಿವೈಸ್‌ನ ಡಿಸ್‌ಪ್ಲೇ ಡೆನ್ಸಿಟಿಯನ್ನು ಪ್ರತಿನಿಧಿಸುತ್ತಿದ್ದು ಇದರಿಂದ ಬಳಕೆದಾರರು ಸ್ಕ್ರೀನ್ ಮೇಲೆ ಯಾವ ಬಗೆಯ ಅಂಶ ಸರಿಹೊಂದುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಉಳಿದಂತೆ ಬ್ಯಾಟರಿ ವ್ಯವಸ್ಥೆಯನ್ನೂ ಕೂಡ ಮರೆಯದೇ ಗಮನಿಸುವುದು ಒಳಿತು. ಕ್ಯಾಮೆರಾ ವಿಚಾರದಲ್ಲಿ ಎಷ್ಟು ಮೆಗಾಫಿಕ್ಸೆಲ್ ಕ್ಯಾಮೆರಾ ಎನ್ನುವುದಕ್ಕಿಂತ ಆ ಕ್ಯಾಮೆರಾಕ್ಕೆ ಯಾವ ಸೆನ್ಸಾರ್ ಅಳವಡಿಸಲಾಗಿದೆ ಎಂಬುದನ್ನು ಅರಿತುಕೊಳ್ಳಿ. ಅಂತೆಯೆ ಫೋನ್ ಸ್ಟೋರೇಜ್ ವ್ಯವಸ್ಥೆಯನ್ನು ಗಮನಿಸಿ. RAM ವ್ಯವಸ್ಥೆಯ ಬಗ್ಗೆಯೂ ಕೂಡ ಗಮನ ನೀಡುವುದೊಳಿತು. ಕೊನೆಯದಾಗಿ ಡಾಟಾ ಕನೆಕ್ಟಿವಿಟಿ ಸಾಮರ್ಥ್ಯವನ್ನು ತಪ್ಪದೆ ಪರಿಶೀಲಿಸಿರಿ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Mon, 9 May 22