iQOO Z6 5G: ಈ ಆಫರ್ ಮತ್ತೆ ಬರಲ್ಲ: ಕೇವಲ 12,999ಕ್ಕೆ ಖರೀದಿಸಿ ಪವರ್​ಫುಲ್ ಬ್ಯಾಟರಿಯ ಐಕ್ಯೂ Z6 5G ಫೋನ್

iQOO Z6 5G Price Cut: ಐಕ್ಯೂ ಕಂಪನಿ ಭಾರತದಲ್ಲಿ ಕಳೆದ ಮಾರ್ಚ್​​ನಲ್ಲಿ ತನ್ನ ಐಕ್ಯೂ ಝಡ್6 5ಜಿ (iQoo Z6 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿತ್ತು. ಈಗಲೂ ಕೂಡ ಭರ್ಜರಿ ಸದ್ದು ಮಾಡುತ್ತಿರುವ ಈ ಜಜೆಟ್ ಬೆಲೆಯ ಪವರ್​ಫುಲ್ ಸ್ಮಾರ್ಟ್​​ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ.

iQOO Z6 5G: ಈ ಆಫರ್ ಮತ್ತೆ ಬರಲ್ಲ: ಕೇವಲ 12,999ಕ್ಕೆ ಖರೀದಿಸಿ ಪವರ್​ಫುಲ್ ಬ್ಯಾಟರಿಯ ಐಕ್ಯೂ Z6 5G ಫೋನ್
iQOO Z6 5G
Follow us
| Updated By: Vinay Bhat

Updated on: May 03, 2022 | 1:50 PM

ಪವರ್ ಫುಲ್ ಸ್ಮಾರ್ಟ್​​ಫೋನ್​ಗಳಿಗೆ (Smartphone) ಹೆಸರುವಾಸಿಯಾಗಿರುವ ಪ್ರಸಿದ್ಧ ಐಕ್ಯೂ ಕಂಪನಿ ಭಾರತದಲ್ಲಿ ಕಳೆದ ಮಾರ್ಚ್​​ನಲ್ಲಿ ತನ್ನ ಐಕ್ಯೂ ಝಡ್6 5ಜಿ (iQoo Z6 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿತ್ತು. ಈಗಲೂ ಕೂಡ ಭರ್ಜರಿ ಸದ್ದು ಮಾಡುತ್ತಿರುವ ಈ ಜಜೆಟ್ ಬೆಲೆಯ ಪವರ್​ಫುಲ್ ಸ್ಮಾರ್ಟ್​​ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌, 5,000mAh ಸಾಮರ್ಥ್ಯದ ಬ್ಯಾಟರಿಗೆ ತಕ್ಕಂತೆ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. ಇದರಲ್ಲಿನ ಕ್ಯಾಮೆರಾ (Camera) ಕೂಡ ಸಖತ್ ಆಗಿದ್ದು ನೈಟ್​ಮೋಡ್ ಸೇರಿದಂತೆ ಅನೇಕ ಆಯ್ಕೆಗಳಿಂದ ಕೂಡಿದೆ. ಇಷ್ಟೆಲ್ಲ ಆಕರ್ಷಕ ಫೀಚರ್​ಗಳಿಂದ ಕೂಡಿರುವ ಐಕ್ಯೂ Z6 5G ಇದೀಗ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

  1. ಭಾರತದಲ್ಲಿ ಐಕ್ಯೂ Z6 5G ಸ್ಮಾರ್ಟ್‌ಫೋನ್‌ ಒಟ್ಟು ಮೂರು ಮಾದರಿಯಲ್ಲಿ ಖರೀದಿಸಬಹುದು. ಇದರ ಮೂಲಬೆಲೆ ಬಗ್ಗೆ ನೋಡುವುದಾದರೆ 4GB RAM ಮತ್ತು 128GB ಸ್ಟೋರೆಜ್ ರೂಪಾಂತರದ ಆಯ್ಕೆಗೆ 15,999 ರೂ. ಬೆಲೆ ಹೊಂದಿದೆ. 6GB RAM ಮತ್ತು 128GB ಸ್ಟೋರೆಜ್ ಮಾದರಿಗೆ 16,999 ರೂ. ಹಾಗೂ 8GB RAM ಮತ್ತು 128GB ಸ್ಟೋರೆಜ್ ಆಯ್ಕೆಯು 17,999 ರೂ. ಇದೆ.
  2. ಇದರಲ್ಲಿ 15,999 ರೂ. ಇರುವ ಫೋನನ್ನು 12,999 ರೂ. ಗೆ ನಿಮ್ಮದಾಗಿಸಬಹುದು. ಇ ಕಾಮರ್ಸ್ ತಾಣವಾದ ಅಮೆಜಾನ್‌ ಐಕ್ಯೂ Z6 5G ಸ್ಮಾರ್ಟ್‌ಫೋನ್‌ ಮೇಲೆ ಆಕರ್ಷಕ ಡಿಸ್ಕೌಂಟ್ ಆಫರ್ ಘೋಷಿಸಿದೆ. ನೀವು ಈ ಫೋನನ್ನು ಚಾರ್ಜರ್ ಇಲ್ಲದೆ ಖರೀದಿಸಿದರೆ 1,500 ರೂ. ಗಳ ರಿಯಾಯಿತಿ ಪಡೆಯುತ್ತೀರಿ. ಹಾಗೆಯೆ  ICICI ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 1,000 ರೂ. ಡಿಸ್ಕೌಂಟ್ ಆಫರ್ ನೀಡಲಾಗಿದೆ.
  3. ಐಕ್ಯೂ Z6 5G ಸ್ಮಾರ್ಟ್‌ಫೋನ್‌ 1,080×2,408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ.
  4. ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 12 ನಲ್ಲಿ ಫನ್‌ಟಚ್‌OS 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
  5. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​ನಿಂದ ಕೂಡಿರುವ ಈ ಸ್ಮಾರ್ಟ್​ಫೋನ್​ನ ಕ್ಯಾಮೆರಾ ಕೂಡ ಅದ್ಭುತವಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ ISOCELL JN1 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ.
  6. ಇದಲ್ಲದೆ 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ 3P9 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕ್ಯಾಮೆರಾದಲ್ಲಿ ವಿಶೇಷವಾದ ಸೂಪರ್ ನೈಟ್ ಮೋಡ್ ಮತ್ತು ಬೊಕೆ ಮೋಡ್ ಸೇರಿದಂತೆ ಹಲವು ಕ್ಯಾಮೆರಾ (Camera) ಮೋಡ್‌ಗಳು ಪ್ರಿಲೋಡ್‌ ಆಗಿವೆ.
  7. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್ v5.1, GPS/ A-GPS, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ