ಸಾಮಾನ್ಯವಾಗಿ ಸ್ಮಾರ್ಟ್ಫೋನಿನಲ್ಲಿ (Smartphone) ನಮ್ಮ ವೈಯಕ್ತಿಕ ಡಾಟಾ ಪ್ರೊಟೆಕ್ಟ್ ಮಾಡಿಕೊಳ್ಳುವ ಉದ್ದೇಶದಿಂದ ಯಾವಾಗಲೂ ಪಿನ್, ಪಾಸ್ ವರ್ಡ್ ಇಲ್ಲವೇ ಸ್ಕ್ರೀನ್ ಲಾಕ್ ಪ್ಯಾಟರ್ನ್ ಅನ್ನು ಬಳಕೆ ಮಾಡುವುದು ವಾಡಿಕೆ. ಪ್ರತಿಯೊಬ್ಬರೂ ಕೂಡ ತಮ್ಮ ಫೋನಿಗೆ ಇದನ್ನು ಬಳಸಿಯೇ ಬಳಸುತ್ತಾರೆ. ಮೊಬೈಲ್ (Mobile) ಯಾರದ್ದೋ ಕೈ ಸೇರಿದಾಗ ಯಾವುದೇ ಅಚಾತುರ್ಯಗಳು ನಡೆಯಬಾರದು ಎಂಬುದು ಇದರ ಹಿಂದಿನ ಉದ್ದೇಶ. ಆದರೆ, ಸದ್ಯ ಹೊರಬಿದ್ದಿರುವ ಮಾಹಿತಿಯೊಂದು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ನೀವು ನಿಮ್ಮ ಸ್ಮಾರ್ಟ್ಫೋನ್ಗೆ ಯಾವುದೇ ರೀತಿಯ ಲಾಕ್ (Lock) ಹಾಕಿದ್ದರೂ ಕ್ಷಣಾರ್ಧದಲ್ಲಿ ಅದನ್ನು ಅನ್‌ಲಾಕ್ ಮಾಡಬಹುದಾಗಿದೆ.
ಈರೀತಿಯ ಲೋಪವೊಂದು ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ನಲ್ಲಿ ಕಂಡುಬಂದಿದೆ. ಡೇವಿಡ್ ಶುಟ್ಜ್ ಎಂಬವರು ಈ ಸಮಸ್ಯೆಯ ಬಗ್ಗೆ ವರದಿ ಮಾಡಿದ್ದಾರೆ. ಅವರು ಲಾಕ್ ಆಗಿರುವ ಡಿಸ್ ಪ್ಲೇಯನ್ನು ಬಳಸಿಕೊಂಡು ಫೋನ್ ಅನ್ನು ಹೇಗೆ ಅನ್‌ಲಾಕ್ ಮಾಡಬಹುದು ಮತ್ತು ಇದು ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಈಗ ನಿಮ್ಮ ಫೋನ್ ಲಾಕ್ ಆಗಿದ್ದು ತಪ್ಪು ಪಾಸ್ವರ್ಡ್ ಹಾಕಿ ಓಪನ್ ಆಗದೆ ಇದ್ದಾಗ ಪಾಸ್ವರ್ಡ್ ಹಾಕಿರುವ ಸಿಮ್ ಅನ್ನು ಸಿಮ್ ಸ್ಲಾಟ್ ಒಳಗಡೆ ಹಾಕಬೇಕು. ನಂತರ ಅನ್‌ಲಾಕ್ ಮಾಡಲು ಪ್ರಯತ್ನಿಸಿ ತಪ್ಪಾದ ಕೋಡ್ ಅನ್ನು ಮೂರು ಬಾರಿ ಒತ್ತಬೇಕು. ಆಗ ಸಿಮ್ ಕಾರ್ಡ್‌ನಲ್ಲಿ ಲಭ್ಯವಿರುವ PUK ಕೋಡ್ ಕೇಳುತುತ್ತದೆ. ಪಿಯುಕೆ ಕೋಡ್ ಅನ್ನು ನಮೂದಿಸಿದ ತಕ್ಷಣ ಅಟೋಮೆಟಿಕ್ ಆಗಿ ನಿಮ್ಮ ಸ್ಮಾರ್ಟ್ಫೋನ್ ಲಾಕ್ ತೆರೆದುಕೊಳ್ಳುತ್ತಿದೆ. ಈ ಸಮಸ್ಯೆಯನ್ನು ತೋರಿಸಲು ಡೇವಿಡ್ ಶುಟ್ಜ್ ವಿಡಿಯೋವನ್ನು ಕೂಡ ಮಾಡಿದ್ದಾರೆ.
ಈ ಟ್ರಿಕ್ ಹ್ಯಾಕರ್ಗಳಿಗೆ ತಿಳಿದರೆ ಮುಗಿಯಿತು. ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್ಫೋನನ್ನು ಈರೀತಿಯಾಗಿ ಮಾಡಿ ಸುಲಭವಾಗಿ ಅನ್‌ಲಾಕ್ ಮಾಡಬಹುದು. ಸದ್ಯ ಗೂಗಲ್ ಈ ಸಮಸ್ಯೆಯನ್ನು ಸಾಫ್ಟ್‌ವೇರ್ ಅಪ್ಡೇಟ್ ಮಾಡುವ ಮೂಲಕ ಸರಿಪಡಿಸಿದೆ. ಬಗ್ ಬೌಂಟಿ ಕಾರ್ಯಕ್ರಮದ ಭಾಗವಾಗಿ ಡೇವಿಡ್ ಈ ಸಮಸ್ಯೆಯನ್ನು ಗೂಗಲ್ಗೆ ವರದಿ ಮಾಡಿದರು. ಇದಕ್ಕಾಗಿ ಗೂಗಲ್ ಇವರಿಗೆ $70,000 (ಅಂದಾಜು ರೂ. 5,60,000) ಬಹುಮಾನವನ್ನು ನೀಡಲಾಯಿತು.
ನಿಮ್ಮ ಸ್ಮಾರ್ಟ್ಫೋನ್ ಲಾಕ್ ಆಗಿದ್ದರೆ ಫ್ಯಾಕ್ಟರಿ ರೀಸೆಟ್ ಮಾಡುವ ಮೂಲಕ ಪ್ಯಾಟರ್ನ್ ಲಾಕ್ ಅನ್‌ಲಾಕ್ ಮಾಡಬಹುದು. ಈ ಟ್ರಿಕ್ ಬಳಸಿದಲ್ಲಿ, ನಿಮ್ಮ ಫೋನ್‌ನಲ್ಲಿ ಸೇವ್ ಆಗಿರುವ ಎಲ್ಲಾ ಡಾಟಾ ಡಿಲೀಟ್ ಆಗುತ್ತದೆ. ಈ ಟ್ರಿಕ್ ಬಳಸಲು ಕೆಳಗಿನ ಹಂತಗಳನ್ನು ಫಾಲೋ ಮಾಡಿ.
Published On - 12:24 pm, Tue, 15 November 22