WhatsApp Update: ಎರಡು ಮೊಬೈಲ್​ಗಳಲ್ಲಿ ಒಂದೇ ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಊಹಿಸಲಾಗದ ಫೀಚರ್

WhatsApp New Feature: ವಾಟ್ಸ್​ಆ್ಯಪ್ ಮತ್ತೊಂದು ಊಹಿಸಲಾಗದ ಫೀಚರ್​ ಅನ್ನು ನೀಡಲು ಮುಂದಾಗಿದೆ. ಅದುವೇ ಕಂಪ್ಯಾನಿಯನ್‌ ಮೋಡ್‌ (Companion Mode). ಈ ಫೀಚರ್ಸ್‌ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಬಳಸಬಹುದು.

WhatsApp Update: ಎರಡು ಮೊಬೈಲ್​ಗಳಲ್ಲಿ ಒಂದೇ ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಊಹಿಸಲಾಗದ ಫೀಚರ್
WhatsApp Companion Mode
Follow us
TV9 Web
| Updated By: Vinay Bhat

Updated on: Nov 14, 2022 | 12:07 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಈ ವರ್ಷ ಸಾಕಷ್ಟು ಬೆಳವಣಿಗೆ ಕಂಡಿದೆ. ಅತಿ ಹೆಚ್ಚು ನೂತನ ಫೀಚರ್​ಗಳನ್ನು 2022 ರಲ್ಲಿ ಬಿಡುಗಡೆ ಮಾಡಿದೆ. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್​​ಆ್ಯಪ್ (WhatsApp) ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಕಳೆದ ವಾರವಷ್ಟೆ ಕಮ್ಯೂನಿಟಿದ ಆಯ್ಕೆಯನ್ನು ನೀಡಿದ್ದ ವಾಟ್ಸ್​ಆ್ಯಪ್​ನಲ್ಲಿ ಇನ್ನೂ ಅನೇಕ ಫೀಚರ್​ಗಳು ಬರುವುದರಲ್ಲಿದೆ. ಕೆಲವೊಂದು ಅಪ್ಡೇಟ್​ಗಳು ಬೀಟಾ ವರ್ಷನ್​ನಲ್ಲಿ ಲಭ್ಯವಾಗುತ್ತಿದೆ. ಹೀಗಿರುವಾಗ ಮತ್ತೊಂದು ಊಹಿಸಲಾಗದ ಫೀಚರ್​ ಅನ್ನು ಕಂಪನಿ ನೀಡಲು ಮುಂದಾಗಿದೆ. ಅದುವೇ ಕಂಪ್ಯಾನಿಯನ್‌ ಮೋಡ್‌ (Companion Mode) ಆಯ್ಕೆ.

ವಾಟ್ಸ್​ಆ್ಯಪ್​ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್‌ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಬಳಸಬಹುದು. ಅಂದರೆ ನಿಮ್ಮ ವಾಟ್ಸ್​ಆ್ಯಪ್​​ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು. ಇದು ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ಕಾರ್ಯನಿರ್ವಹಿಸಲಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್‌ ಲಿಂಕ್‌ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ.

ಕಂಪ್ಯಾನಿಯನ್ ಮೋಡ್ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ v2.22.23.18 ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಆಯ್ಕೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌ ಮೂಲಕ ಕಾರ್ಯನಿರ್ವಹಿಸಲಿದೆ. ಸದ್ಯ ಈ ಹೊಸ ಆಂಡ್ರಾಯ್ಡ್‌ಗಾಗಿ ಬೀಟಾ ಬಿಲ್ಡ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಪರೀಕ್ಷಿಸಲ್ಪಡುವ ನಿರೀಕ್ಷೆಯಿದೆ. ಇದು ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇದನ್ನೂ ಓದಿ
Image
Best Smartphone: ಇಲ್ಲಿದೆ ನೋಡಿ 20,000 ರೂ. ಒಳಗೆ ಸಿಗುತ್ತಿರುವ 108MP ಕ್ಯಾಮೆರಾದ ಬೆಸ್ಟ್ ಸ್ಮಾರ್ಟ್​​ಫೋನ್ಸ್
Image
Lava Blaze 5G: ವಿದೇಶಿ ಕಂಪನಿಗಳ ಹುಟ್ಟಡಗಿಸಿದ ಭಾರತದ ಲಾವಾ: ಕೇವಲ 9,999ರೂ.ಗೆ 5G ಫೋನ್ ಬಿಡುಗಡೆ
Image
Google Pixel 7: ಹೊಚ್ಚ ಹೊಸ ಗೂಗಲ್‌ ಪಿಕ್ಸಲ್‌ 7 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ
Image
Tech Tips: ನೀವು WhatsApp Web ಉಪಯೋಗಿಸುತ್ತೀರಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ ನೋಡಿ

ಕಮ್ಯೂನಿಟಿ ಫೀಚರ್:

ವಾಟ್ಸ್​ಆ್ಯಪ್ ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌ ಪರಿಚಯಿಸಿದೆ. ಆಂಡ್ರಾಯ್ಡ್, ಐಒಎಸ್ ಮತ್ತು ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಈ ನೂತನ ಫೀಚರ್ಸ್ ಲಭ್ಯವಾಗುತ್ತಿದೆ. ಈ ಫೀಚರ್ ಅನ್ನು ಗ್ರೂಪ್‌ಗಳ ಗ್ರೂಪ್‌ ಎಂದು ಹೇಳಬಹುದು. ಅಂದರೆ ವಾಟ್ಸ್​ಆ್ಯಪ್​ನಲ್ಲಿ ಆಡ್ಮಿನ್‌ಗಳು ನಿರ್ದಿಷ್ಟ ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ವಿಚಾರವನ್ನು ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ವಾಟ್ಸ್​ಆ್ಯಪ್​ ಕಮ್ಯೂನಿಟಿಗಳು ಜನರಿಗೆ ಕೆಲಸ ಮಾಡುವ ರಚನೆಯೊಂದಿಗೆ ಪ್ರತ್ಯೇಕ ಗುಂಪುಗಳನ್ನು ಒಂದೇ ಸೂರಿನಡಿಯಲ್ಲಿ ತರಲು ಅನುವು ಮಾಡಿಕೊಡುತ್ತದೆ. ಇದೇ ರೀತಿಯಲ್ಲಿ ಕಮ್ಯೂನಿಟಿ ಕಳುಹಿಸುವ ಕಂಪ್ಲೀಟ್‌ ಅಪ್ಡೇಟ್‌ಗಳನ್ನು ಜನರು ಸ್ವೀಕರಿಸಬಹುದು. ಜೊತೆಗೆ ಕಮ್ಯೂನಿಟಿ ಗ್ರೂಪ್‌ನಲ್ಲಿ ಮುಖ್ಯವಾದವುಗಳ ಕುರಿತು ಸಣ್ಣ ಚರ್ಚಾ ಗುಂಪುಗಳನ್ನು ಸುಲಭವಾಗಿ ಸಂಘಟಿಸಬಹುದು. ಇದರಲ್ಲಿ, ಅನೇಕ ಗುಂಪುಗಳನ್ನು ಏಕಕಾಲದಲ್ಲಿ ಸೇರಿಸಬಹುದು ಮತ್ತು ನೀವು ಎಲ್ಲಾ ಗುಂಪುಗಳ ನವೀಕರಣಗಳನ್ನು ಒಂದೇ ಸ್ಥಳದಲ್ಲಿ ಪಡೆಯುತ್ತೀರಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ