AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನೀವು WhatsApp Web ಉಪಯೋಗಿಸುತ್ತೀರಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ ನೋಡಿ

WhatsApp Tips and Tricks: ವಾಟ್ಸ್​ಆ್ಯಪ್​ ಅನ್ನು ಕೇವಲ ಮೊಬೈಲ್​ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್​ನಲ್ಲೂ ಬಳಸಬಹುದಾಗಿದೆ. ಇದಕ್ಕಾಗಿ ವಾಟ್ಸ್​ಆ್ಯಪ್ ವೆಬ್ ಎಂಬ ಅಪ್ಲಿಕೇಶನ್ ಇದೆ. ಇದರಲ್ಲಿ ಅನೇಕ ಟ್ರಿಕ್​ಗಳು ಕೂಡ ಇದೆ.

Tech Tips: ನೀವು WhatsApp Web ಉಪಯೋಗಿಸುತ್ತೀರಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ ನೋಡಿ
whatsapp web
TV9 Web
| Edited By: |

Updated on: Nov 13, 2022 | 6:45 AM

Share

ಮೆಟಾ (Meta) ಮಾಲೀಕತ್ವದ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಇಂದು ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಬೆಳಗ್ಗೆ ಬೆಡ್​ನಿಂದ ಎಂದ ತಕ್ಷಣ ಇದರಲ್ಲಿ ಏನು ಬಂದಿದೆ ಎಂದು ನೋಡಿಯೋ ಮುಂದಿನ ಕೆಲಸಕ್ಕೆ ಹೋಗುವುದು. ಅಷ್ಟರ ಮಟ್ಟಿಗೆ ವಾಟ್ಸ್​ಆ್ಯಪ್ (WhatsApp) ಬಳಕೆದಾರರ ನೆಚ್ಚಿನ ಅಪ್ಲಿಕೇಶನ್ ಆಗಿ ಬಿಟ್ಟಿದೆ. ಇದಕ್ಕೆ ತಕ್ಕಂತೆ ಸಂಸ್ಥೆ ಕೂಡ ಬಳಕೆದಾರರಿಗೆ ಅನುಕೂಲಕರವಾಗುವಂತೆ ಹೊಸ ಹೊಸ ಫೀಚರ್​ಗಳುಳ್ಳ ಅಪ್ಡೇಟ್ ಅನ್ನು ನೀಡುತ್ತಿದೆ. ಇದಕ್ಕಾಗಿಯೆ​ ವಾಟ್ಸ್​ಆ್ಯಪ್ ವಿಶ್ವದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಏಕೈಕ ಮೆಸೇಜಿಂಗ್ ಆ್ಯಪ್ (App) ಆಗಿದೆ.

ವಾಟ್ಸ್​ಆ್ಯಪ್​ ಅನ್ನು ಕೇವಲ ಮೊಬೈಲ್​ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್​ನಲ್ಲೂ ಬಳಸಬಹುದಾಗಿದೆ. ಇದಕ್ಕಾಗಿ ವಾಟ್ಸ್​ಆ್ಯಪ್ ವೆಬ್ ಎಂಬ ಅಪ್ಲಿಕೇಶನ್ ಇದೆ. ದಿನನಿತ್ಯ ಲ್ಯಾಪ್​ಟಾಪ್ ಅಥವಾ ಡೆಸ್ಕ್​ಟಾಪ್​ನಲ್ಲಿ ಕೆಲಸ ಮಾಡುವ ಅನೇಕರು ವಾಟ್ಸ್​ಆ್ಯಪ್ ವೆಬ್ ಅನ್ನು ಉಪಯೋಗಿಸಿಯೇ ಇರುತ್ತಾರೆ. ಆದರೆ, ಹೆಚ್ಚಿನವರಿಗೆ ವಾಟ್ಸ್​ಆ್ಯಪ್ ಅನ್ನು ವೆಬ್​ನಲ್ಲಿ ಬಳಕೆ ಮಾಡುವಾಗ ಅದರಲ್ಲಿರುವ ಶಾರ್ಟ್​ಕಟ್ ಕೀ ಬಗ್ಗೆ ತಿಳಿದಿರುವುದಿಲ್ಲ. ಅದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ವಾಟ್ಸ್ಆ್ಯಪ್ ವೆಬ್ ಆವೃತ್ತಿಯಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಪ್ರಮುಖವಾಗಿ ವಾಟ್ಸ್​​ಆ್ಯಪ್ ವೆಬ್​ನಲ್ಲಿ ಶಾರ್ಟ್‌ಕಟ್‌ ಕೀ ಬಳಸಿ ಉಪಯೋಗಿಸುವುದು ತುಂಬಾನೆ ಸುಲಭ. ಈ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ಬಳಕೆದಾರರು ತಮ್ಮ ಫಾಂಟ್ ಸೈಜ್‌ ಅನ್ನು ಎಡಿಟ್‌ ಮಾಡಬಹುದು. ಸ್ಟಿಕ್ಕರ್‌ಗಳು, ಜಿಐಎಫ್‌ಗಳು ಮತ್ತು ಎಮೋಜಿ ಸೇರದಂತೆ ಅನೇಕ ಪ್ರಯೋಜನ ವೇಗವಾಗಿ ಪಡೆಯಬಹುದು.

ಇದನ್ನೂ ಓದಿ
Image
Cyber Fraud: ವಿದ್ಯುತ್ ಬಿಲ್ ಬಾಕಿ ಹೆಸರಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ನಿಮಗೂ ಕರೆ ಬರಬಹುದು ಎಚ್ಚರ
Image
WhatsApp Community: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಬಹುನಿರೀಕ್ಷಿತ ಕಮ್ಯೂನಿಟಿ ಫೀಚರ್ಸ್‌: ಏನಿದರ ಪ್ರಯೋಜನ?
Image
Twitter Verification: ನಕಲಿ ಖಾತೆಗಳ ಹಾವಳಿ ಬೆನ್ನಲ್ಲೇ 8 ಡಾಲರ್ ಯೋಜನೆ ಅಮಾನತಿನಲ್ಲಿಟ್ಟ ಟ್ವಿಟರ್
Image
Twitter: ನಿಮ್ಮ ಟ್ವಿಟರ್ ಅಕೌಂಟ್​ಗೆ ಬ್ಲೂಟಿಕ್ ಬೇಕಾದರೆ ಎಷ್ಟು ರೂ. ಪಾವತಿಸಬೇಕು?: ಇಲ್ಲಿದೆ ನೋಡಿ

ವಾಟ್ಸ್ಆ್ಯಪ್ ವೆಬ್ ನಲ್ಲಿ ಬಳಸಬಹುದಾದ ಶಾರ್ಟ್ ಕಟ್ ಕೀಗಳು:

ಪದ ಅಥವಾ ಪದಗುಚ್ಚವನ್ನು ಸರ್ಚ್ ಮಾಡಲು Ctrl + F ಒತ್ತಿರಿ

ಹೊಸ ಚಾಟ್ ಪ್ರಾರಂಭಿಸಲು, Ctrl + N ಒತ್ತಿರಿ

ಶಿಫ್ಟ್ + ಟ್ಯಾಬ್ ಬಟನ್ ಎಮೋಜಿಗಳನ್ನು ಫೋಕಸ್ ಮಾಡಲಿದೆ.

ಹೊಸ ಗುಂಪನ್ನು ಪ್ರಾರಂಭಿಸಲು, Ctrl + Shift + N ಒತ್ತಿರಿ

ನಿಮ್ಮ ಹಿಂದಿನ ಚಾಟ್​ಗೆ ಹೋಗಲು, Ctrl + Shift + ಅನ್ನು ಒತ್ತಿರಿ

ಮುಂದಿನ ಚಾಟ್​​ಗೆ ಹೋಗಲು, Ctrl + Shift + ಒತ್ತಿರಿ

ಚಾಟ್ ಅನ್ನು ಆರ್ಕೈವ್ ಮಾಡಲು, Ctrl + E ಒತ್ತಿರಿ

ಚಾಟ್ ಅನ್ನು ಮ್ಯೂಟ್ ಮಾಡಲು, Ctrl + Shift + M

ಓದುವ ಸ್ಥಿತಿಯನ್ನು ಬದಲಾಯಿಸಲು, Ctrl + Shift + U

ಚಾಟ್ ಅಳಿಸಲು, Ctrl + Del

ಪ್ರೊಫೈಲ್ ತೆರೆಯಲು, Ctrl + P

ಫಾಂಟ್ ಗಾತ್ರವನ್ನು ಹೆಚ್ಚಿಸಲು, Ctrl + = ಒತ್ತಿರಿ

ಫಾಂಟ್ ಗಾತ್ರವನ್ನು ಕಡಿಮೆ ಮಾಡಲು, Ctrl + ಒತ್ತಿರಿ

ಡೀಫಾಲ್ಟ್ ಗಾತ್ರಕ್ಕೆ ಹಿಂತಿರುಗಲು, Ctrl + 0

ಪಠ್ಯವನ್ನು ದಪ್ಪವಾಗಿಸಲು * text * ಬಳಸಿ

ಪಠ್ಯವನ್ನು ಇಟಲೈಸ್ ಮಾಡಲು _text_ ಬಳಸಿ

ಪಠ್ಯವನ್ನು ಹೊಡೆಯಲು ~ text ~

ಮೊನೊಸ್ಪೇಸ್ಡ್ ಫಾಂಟ್​ಗೆ ‘‘ ‘text’ ‘‘ ಬಳಸಿ

ಎಮೋಜಿಯನ್ನು ಸೇರಿಸಲು, ಕೊಲೊನ್ ಒತ್ತಿರಿ.

Follow Us
ಆಕಾಶದಿಂದ ಬಿದ್ದ ಕ್ಷಿಪಣಿ, ಕತಾರ್‌ನಲ್ಲಿ ಬೆಂಕಿಯ ಜ್ವಾಲೆ
ಆಕಾಶದಿಂದ ಬಿದ್ದ ಕ್ಷಿಪಣಿ, ಕತಾರ್‌ನಲ್ಲಿ ಬೆಂಕಿಯ ಜ್ವಾಲೆ
11 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ರಾಹುಲ್; ವಿಕೆಟ್ ಜಸ್ಟ್ ಮಿಸ್
11 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ರಾಹುಲ್; ವಿಕೆಟ್ ಜಸ್ಟ್ ಮಿಸ್
ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್
ಇರಾನ್ ಮೇಲಿನ ದಾಳಿಯ ಮೊದಲ ವಿಡಿಯೋ ರಿಲೀಸ್ ಮಾಡಿದ ಇಸ್ರೇಲ್
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಯುದ್ಧ: ದುಬೈ ಏರ್​ಪೋರ್ಟ್​​​ನಲ್ಲಿ ಕುಟುಂಬ ಸಮೇತ ಸಿಲುಕಿದ ​​ಭೋಜೇಗೌಡ
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಮಾ.3 ಸಂಪೂರ್ಣ ಚಂದ್ರಗ್ರಹಣ;ಕರ್ನಾಟಕದಲ್ಲಿ ಎಷ್ಟು ನಿಮಿಷ ಗೋಚರಿಸಲಿದೆ?
ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್
ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ?
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ
ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ