AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸವ ಮಂಟಪ ಕೃತಿ ವಿವಾದ: ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಲೇಖಕ ರವಿ ಹಂಜ್

‘ಬಸವ ಮಂಟಪ’ ಕೃತಿ ವಿವಾದದ ಕುರಿತು ಲೇಖಕ ರವಿ ಹಂಜ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪುಸ್ತಕದಲ್ಲಿ ಯಾವುದೇ ಅವಹೇಳನವಿಲ್ಲ, ಬಸವಪುರಾಣ ಮತ್ತು ಗೆಜೆಟಿಯರ್‌ಗಳನ್ನು ಉಲ್ಲೇಖಿಸಿ ಬರೆಯಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ತನ್ನ ಮೇಲೆ ಕೇಸ್​​ ದಾಖಲಿಸಿ ಮಾನಸಿಕವಾಗಿ ಕುಗ್ಗಿಸುವ ಯತ್ನವನ್ನೂ ನಡೆಸಲಾಗಿದೆ. ಆದರೆ ತಾನೊಬ್ಬ ಸತ್ಯವಂತ ಮತ್ತು ಪ್ರಾಮಾಣಿಕ. ಹೀಗಾಗಿ ಅವರ ಯಾವುದೇ ಆಮಿಷಗಳು ತನಗೆ ತಟ್ಟಲ್ಲ ಎಂದವರು ತಿಳಿಸಿದ್ದಾರೆ.

ಬಸವ ಮಂಟಪ ಕೃತಿ ವಿವಾದ: ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಲೇಖಕ ರವಿ ಹಂಜ್
ಲೇಖಕ ರವಿ ಹಂಜ್
ಶಿವಪ್ರಸಾದ್​ ಬಿ.
| Edited By: |

Updated on:Nov 25, 2026 | 4:41 PM

Share

ಬೆಂಗಳೂರು, ನವೆಂಬರ್​​ 25: ಬಸವ ಮಂಟಪ ಕೃತಿ ತೀವ್ರ ವಿವಾದದ ಸ್ವರೂಪ ಪಡೆದಿರುವ ವಿಚಾರ ಸಂಬಂಧ ಲೇಖಕ ರವಿ ಹಂಜ್ ಹಲವು ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನನ್ನ ಇತ್ತಿಚೀನ ಬಸವ ಮಂಟಪ ಕೃತಿಯಲ್ಲಿ ಏನಿದೆ ಅಂತಾ ಆರೋಪ ಮಾಡ್ತಿದ್ದಾರೋ ಗೊತ್ತಿಲ್ಲ. ಇದು ಬಣವಣ್ಣರಿಗೆ ಮಸಿಬಳಿಯುವ ಕೆಲಸ ಅಂತಿದ್ದಾರೆ. ಆದರೆ ಅದು ಸಲ್ಲದು. ಇವರು ಯಾರೂ ಪುಸ್ತಕ ಓದಿಲ್ಲ. ಬೇಕಿದ್ರೆ ಈ ಬಗ್ಗೆ ಚರ್ಚೆ ಇಟ್ಟುಕೊಳ್ಳೋಣ ಎಂದವರು ಹೇಳಿದ್ದಾರೆ.

ಹೇಳಿಕೆ ಕುರಿತು ಸ್ಪಷ್ಟನೆ

ಕೆಲವೇ ಕೆಲವು ಜನರ ತಂತ್ರಕ್ಕೆ ಮರುಳಾಗಿ ಸರ್ಕಾರ ಹೇಸಿಗೆ ನಿರ್ಧಾರ ತೆಗೆದುಕೊಂಡಿರುವ ಕಾರಣ ತನಗೆ ನಗು ಬರುತ್ತಿದೆ. ಅದೇ ರೀತಿ ಇವರ ಕುತಂತ್ರಕ್ಕೆ ಸಾಕಷ್ಟು ಜನ ಮುಗ್ದರು ತನ್ನ ವಿರುದ್ಧ ಪ್ರತಿಭಟಿಸುತ್ತಿರುವುದಕ್ಕೆ ಮರುಕ ಉಂಟಾಗುತ್ತಿದೆ. ಇನ್ನು ನನ್ನ ತಲೆಗೆ ಫತ್ವಾ ಹೊರಡಿಸದವರ ಬಗ್ಗೆಯಾಗಲಿ, ಕೈ-ಕಾಲು ಮುರಿಸಬೇಕು ಎಂದವರ ಬಗ್ಗೆಯಾಗಲೀ ತನಗೆ ದ್ವೇಷವಿಲ್ಲ. ಅವರ ಬಗ್ಗೆ ವಿಷಾದವಿದೆ. ಯಾಕೆಂದರೆ ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದವರ ಬಗ್ಗೆ ಮರುಕ, ಕರುಣೆ ಉಂಟಾಗುತ್ತಿದೆ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣರ ವಚನವಿದೆ. ಆದರೆ ಇದಕ್ಕೆ ವೈರುಧ್ಯವಾಗಿ ಬಿಜ್ಜಳನ ಖಜಾನೆಯನ್ನು ಬಳಸಿ ಜಂಗಮರಿಗೆ ಬಸವಣ್ಣ ದಾಸೋಹ ಮಾಡಿದ್ದಾರೆ ಮತ್ತು ಬಿಜ್ಜಳನನ್ನು ಕೊಲ್ಲಿಸಿದ್ದಾರೆ ಎಂದು ಹೇಳ್ತಾರೆ ಎಂಬ ಬಗ್ಗೆ ಉಲ್ಲೇಖಿಸಿದ್ದೆ. ಆದರೆ ಅದನ್ನು ಕುತಂತ್ರಿಗಳು ತಮಗೆ ಬೇಕಾದ ಹಾಗೆ ತುಂಡರಿಸಿ ವಿಡಿಯೋ ಹರಿಯಬಿಟ್ಟಿದ್ದಾರೆ ಎಂದು ರವಿ ಹಂಜ್ ಆರೋಪಿಸಿದ್ದಾರೆ.

ಇದನ್ನೂ ಓದಿ:  ‘ಬಸವ ಮಂಟಪ’ಪುಸ್ತಕ ಮುಟ್ಟುಗೋಲಿಗೆ ಸರ್ಕಾರ ಅಧಿಕೃತ ಆದೇಶ, ರವಿ ಹಂಜ್ ಜಾಮೀನು ಏನಾಯ್ತು? ಇಲ್ಲಿದೆ ಅಪ್ಡೇಟ್ಸ್

ತನ್ನ ಮೇಲೆ ಕೇಸ್​​ ದಾಖಲಿಸಿ ಮಾನಸಿಕವಾಗಿ ಕುಗ್ಗಿಸುವ ಯತ್ನವನ್ನೂ ನಡೆಸಲಾಗಿದೆ. ಆದರೆ ತಾನೊಬ್ಬ ಸತ್ಯವಂತ ಮತ್ತು ಪ್ರಾಮಾಣಿಕ. ಹೀಗಾಗಿ ಅವರ ಯಾವುದೇ ಆಮಿಷಗಳು ತನಗೆ ತಟ್ಟಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸ್​​ ಹಾಕುತ್ತೇನೆ. ತನ್ನ ಕೃತಿಯಲ್ಲಿ ಯಾವುದೇ ಅವಹೇಳನವಿಲ್ಲ.  ಬಸವರಾಜದೇವ ರಗಳೆ, ಬಸವಪುರಾಣ ಮತ್ತು ಗೆಜೆಟಿಯರ್​​ಗಳನ್ನು ಉಲ್ಲೇಖಿಸಿ ಪುಸ್ತಕದಲ್ಲಿ ಹೇಳಿದ್ದೇನೆಯೇ ಹೊರತು ತನ್ನ ಸ್ವಂತದ್ದು ಅದರಲ್ಲಿ ಏನೂ ಇಲ್ಲ. ಹೀಗಾಗಿ ಸಮಾಜದ ಸ್ವಾಸ್ಥ್ಯ ಕೆಟ್ಟಿದ್ದು ಸರ್ಕಾರಿ ಪ್ರಾಯೋಜಿತವೇ ಹೊರತು ತಾನಲ್ಲ. ಅರವಿಂದ ಜತ್ತಿ ಅಂತವರು ಹಬ್ಬಿಸಿರುವ ಸುಳ್ಳು ಸುದ್ದಿಗಳು ಇವು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಪುಸ್ತಕದಲ್ಲಿ ಏನಿದೆ ಎಂಬುದನ್ನು ಪರಿವಿಡಿಯಲ್ಲಿಯೇ ತಿಳಿಸಲಾಗಿದ್ದು, ಅದೇನೆಂಬದುದನ್ನೂ ರವಿ ಹಂಜ್ ವಿವರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:38 pm, Wed, 25 November 26

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಫಾಸ್ಟ್‌ಟ್ರ್ಯಾಕ್‌ ನೇಮಕಾತಿ: ಸರ್ಕಾರಿ ಹುದ್ದೆಗಳ ಭರ್ತಿಗೆ ಹೊಸ ದಾರಿ
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!
ಹಾಸನಕ್ಕೆ ಕಾಲಿಟ್ಟ ‘ರಾಪಿಡೋ’; ಆಟೋ ಚಾಲಕರ ಆಕ್ರೋಶ, ಬೈಕ್ ಸವಾರನ ಕಣ್ಣೀರು!