AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyber Crime: ಸೈಬರ್ ಕ್ರೈಮ್ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?: ಇಲ್ಲಿದೆ ಫುಲ್ ಡಿಟೇಲ್ಸ್

ಸೈಬರ್ ವಂಚಕರ ಇಂಥ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡವರ ಸಂಖ್ಯೆಗೆ ಕಡಿಮೆ ಇಲ್ಲ. ನೀವು ಕೂಡ ಈ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ಅದನ್ನು ವಾಪಸು ಪಡೆಯಲು ಸಾಧ್ಯವಿದೆಯೇ?.

Cyber Crime: ಸೈಬರ್ ಕ್ರೈಮ್ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?: ಇಲ್ಲಿದೆ ಫುಲ್ ಡಿಟೇಲ್ಸ್
ಸಾಂದರ್ಭಿಕ ಚಿತ್ರ
TV9 Web
| Updated By: Vinay Bhat|

Updated on:Nov 14, 2022 | 2:26 PM

Share

ದೇಶದಲ್ಲಿ ಇತ್ತೀಚೆಗೆ ಸೈಬರ್ ದರೋಡೆಕೋರರ (Cyber Fraud) ಪ್ರಕರಣಗಳು ಹೆಚ್ಚಾಗಿವೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಅನಾಮಿಕರ ಮಾತು ನಂಬಿ ಒಟಿಪಿ (OTP) ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯವಾದ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇತ್ತೀಚೆಗಷ್ಟೆ ವಿದ್ಯುತ್ ಬಿಲ್ ಹೆಸರಲ್ಲಿ ನಡೆಯುತ್ತಿದ್ದ ಸೈಬರ್ ಕ್ರೈಮ್ (Cyber Crime) ಬೆಳಕಿಗೆ ಬಂದಿತ್ತು. ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಹೊರತೆಗೆಯುವ ಮೂಲಕ ಸೈಬರ್ ಕಳ್ಳರು ಜನರ ಖಾತೆಯಿಂದ ಹಣವನ್ನು ನಿರ್ಭಯವಾಗಿ ಕದಿಯುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಸೈಬರ್ ವಂಚಕರ ಇಂಥ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡವರ ಸಂಖ್ಯೆಗೆ ಕಡಿಮೆ ಇಲ್ಲ. ನೀವು ಕೂಡ ಈ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ಅದನ್ನು ವಾಪಸು ಪಡೆಯಲು ಸಾಧ್ಯವಿದೆಯೇ?.

ಸಾಧ್ಯವಿದೆ. ಬೆಂಗಳೂರು ಪೊಲೀಸರು ಇತ್ತೀಚೆಗಷ್ಟೆ ಪರಿಚಯಿಸಿರುವ “ಗೋಲ್ಡನ್ ಅವರ್” ಎಂಬ ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು. ಈಗಾಗಲೇ ಈ ಗೋಲ್ಡನ್ ಅವರ್ ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ ಹಣವನ್ನು ಮರಳಿ ವಾಪಸು ಪಡೆದಿದ್ದಾರೆ. ಕೊರೊನ ಲಾಕ್‌ಡೌನ್ ಸಮಯದಲ್ಲಿ, ಆನ್‌ಲೈನ್ ವಂಚನೆಯಂತಹ ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿತ್ತು. ಈ ಕಾರಣಕ್ಕಾಗಿ ಗೋಲ್ಡನ್ ಅವರ್ ಸೌಲಭ್ಯ ತರಲಾಗಿದೆ.

ಏನಿದು ಗೋಲ್ಡನ್ ಅವರ್?:

ಇದನ್ನೂ ಓದಿ
Image
Tech Tips: ಎಚ್ಚರ: ಮನೆಯೊಳಗೆ ತಪ್ಪಿಯೂ ಈ ಅಪಾಯಕಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ
Image
WhatsApp Update: ಎರಡು ಮೊಬೈಲ್​ಗಳಲ್ಲಿ ಒಂದೇ ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಊಹಿಸಲಾಗದ ಫೀಚರ್
Image
Best Smartphone: ಇಲ್ಲಿದೆ ನೋಡಿ 20,000 ರೂ. ಒಳಗೆ ಸಿಗುತ್ತಿರುವ 108MP ಕ್ಯಾಮೆರಾದ ಬೆಸ್ಟ್ ಸ್ಮಾರ್ಟ್​​ಫೋನ್ಸ್
Image
Lava Blaze 5G: ವಿದೇಶಿ ಕಂಪನಿಗಳ ಹುಟ್ಟಡಗಿಸಿದ ಭಾರತದ ಲಾವಾ: ಕೇವಲ 9,999ರೂ.ಗೆ 5G ಫೋನ್ ಬಿಡುಗಡೆ

ಹೆಚ್ಚಿನ ಸಮಯದಲ್ಲಿ ಸೈಬರ್ ವಂಚಕರು ಹಣ ಕದಿಯುವ ಉದ್ದೇಶದಿಂದ ಮೆಸೇಜ್ ಕಳುಹಿಸುವುದು, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ ವರ್ಡ್ ಚೇಂಜ್ ಎಂಬ ಆಫರ್ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸುತ್ತಾರೆ. ಆಗ ಆಕಸ್ಮಿಕವಾಗಿ ಗೊತ್ತಿಲ್ಲದೇ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದಕೊಂಡರೆ, ಕಳೆದುಕೊಂಡ ಒಂದು ಗಂಟೆಯ ಒಳಗೆ ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿ. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವ ಪೂರ್ಣ ವಿವರ ನೀಡಬೇಕು. ಇದನ್ನೇ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ.

ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಈ ಮೂಲಕ ಸೈಬರ್ ವಂಚಕರ ಮೋಸದ ಜಾಲ ನಿಯಂತ್ರಣಕ್ಕೆ ಮಹತ್ವದ ಅವಕಾಶ ಕಲ್ಪಿಸಲಾಗಿದೆ.

ಆರ್‌ಬಿಐ ಏನು ಹೇಳುತ್ತದೆ?:

ಆರ್‌ಬಿಐ ಹೇಳುವ ಪ್ರಕಾರ, ನೀವು ಆನ್​ಲೈನ್ ಮೋಸಕ್ಕೆ ಒಳಗಾದರೆ ತಕ್ಷಣ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡಿದರೆ, ನಿಮಗೆ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು. ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹಣಕಾಸು ವಂಚನೆ ವಿಮೆಯನ್ನು ಹೊಂದಿವೆ. ಹಣ ವರ್ಗಾವಣೆಯ ಸಮಯದಲ್ಲಿ ವಂಚನೆಯಾಗಿದ್ದರೆ, ಗ್ರಾಹಕರು ತಕ್ಷಣವೇ ತಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಬ್ಯಾಂಕಿಗೆ ಸೂಚನೆ ನೀಡಿದ ನಂತರ, ವಂಚನೆಯ ಬಗ್ಗೆ ತಕ್ಷಣವೇ ವಿಮಾ ಕಂಪನಿಗೆ ವರದಿ ಮಾಡಲಾಗುತ್ತದೆ. ಈ ರೀತಿಯಾಗಿ ಕೂಡ ನಿಮ್ಮ ಹಣವನ್ನು ಪಡೆಯಬಹುದು.

Published On - 2:26 pm, Mon, 14 November 22

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ