Tech Tips: LCD ಅಥವಾ AMOLED: ನಿಮ್ಮ ಕಣ್ಣಿಗೆ ಯಾವ ಡಿಸ್ಪ್ಲೇ ಫೋನ್ ಉತ್ತಮ?, ಇಲ್ಲಿದೆ ವಿವರವಾದ ಮಾಹಿತಿ
AMOLED OR LCD: LCD (ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ) ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. LCD ಡಿಸ್ಪ್ಲೇಗಳು ಫುಲ್ ಡಿಸ್ಪ್ಲೇಯನ್ನು ಬೆಳಗಿಸುವ ಬ್ಯಾಕ್‌ಲೈಟ್ ಅನ್ನು ಬಳಸುತ್ತವೆ. ಇದು ಪರದೆಯ ಮೇಲೆ ಬಣ್ಣಗಳ ಹೆಚ್ಚು ನೈಸರ್ಗಿಕ ಮತ್ತು ಸಮತೋಲಿತ ನೋಟವನ್ನು ನೀಡುತ್ತದೆ.

ಬೆಂಗಳೂರು (ಅ. 13): ಇಂದಿನ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ LCD ಮತ್ತು AMOLED ಎರಡು ಪ್ರಮುಖ ಡಿಸ್ಪ್ಲೇ ತಂತ್ರಜ್ಞಾನಗಳಾಗಿವೆ. ನೀವು ಹೊಸ ಫೋನ್ ಖರೀದಿಸುವಾಗ, ಡಿಸ್ಪ್ಲೇ ಗುಣಮಟ್ಟವನ್ನು ಪರಿಗಣಿಸುವುದು ಬಹಳ ಮುಖ್ಯ. ಕಣ್ಣುಗಳ ಮೇಲೆ ಕಡಿಮೆ ಪರಿಣಾಮ ಬೀರುವ ಡಿಸ್ಪ್ಲೇಯನ್ನು ಆಯ್ಕೆ ಮಾಡುವುದು ವಿಶೇಷವಾಗಿ ತಮ್ಮ ಫೋನ್‌ಗಳನ್ನು ದೀರ್ಘಕಾಲದವರೆಗೆ ಬಳಸುವವರಿಗೆ ಮುಖ್ಯವಾಗಿದೆ. ಆದರೆ ಎಲ್ಲರಿಗಿರುವ ಪ್ರಶ್ನೆಯೆಂದರೆ, ಕಣ್ಣುಗಳಿಗೆ ಯಾವ ಡಿಸ್ಪ್ಲೇ ಉತ್ತಮ, LCD ಅಥವಾ AMOLED?, ನೋಡೋಣ.
LCD (ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ) ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. LCD ಡಿಸ್ಪ್ಲೇಗಳು ಫುಲ್ ಡಿಸ್ಪ್ಲೇಯನ್ನು ಬೆಳಗಿಸುವ ಬ್ಯಾಕ್‌ಲೈಟ್ ಅನ್ನು ಬಳಸುತ್ತವೆ. ಇದು ಪರದೆಯ ಮೇಲೆ ಬಣ್ಣಗಳ ಹೆಚ್ಚು ನೈಸರ್ಗಿಕ ಮತ್ತು ಸಮತೋಲಿತ ನೋಟವನ್ನು ನೀಡುತ್ತದೆ.
ಈ ಡಿಸ್ಪ್ಲೇ ಹೊಂದಿರುವ ಫೋನ್‌ಗಳು ಕಣ್ಣುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುವುದಿಲ್ಲ, ವಿಶೇಷವಾಗಿ ದೀರ್ಘಕಾಲದವರೆಗೆ ವೀಡಿಯೊಗಳನ್ನು ವೀಕ್ಷಿಸುವಾಗ ಅಥವಾ ನೋಡುವಾಗ ಹೆಚ್ಚು ತೊಂದರೆ ಕೊಡುವುದಿಲ್ಲ. ಪರದೆಯು ಸೂರ್ಯನ ಬೆಳಕಿನಲ್ಲಿಯೂ ಗೋಚರಿಸುತ್ತದೆ. ಬಣ್ಣ ಸಮತೋಲನವು ಉತ್ತಮವಾಗಿದೆ, ಇದು ಅಧ್ಯಯನ ಅಥವಾ ಕಚೇರಿ ಕೆಲಸಕ್ಕೆ ಸಹಾಯಕವಾಗಿದೆ. ಆದಾಗ್ಯೂ, ಕಪ್ಪು ಬಣ್ಣಗಳು LCD ಡಿಸ್ಪ್ಲೇ ಗಳಂತೆ ಆಳವಾಗಿರುವುದಿಲ್ಲ ಮತ್ತು ಬ್ಯಾಟರಿ ಬಳಕೆ AMOLED ಡಿಸ್ಪ್ಲೇ ಗಳಿಗಿಂತ ಸ್ವಲ್ಪ ಹೆಚ್ಚಾಗಿದೆ.
AMOLED (ಆಕ್ಟಿವ್ ಮ್ಯಾಟ್ರಿಕ್ಸ್ ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್) ಡಿಸ್ಪ್ಲೇ ಯಲ್ಲಿ, ಪ್ರತಿ ಪಿಕ್ಸೆಲ್ ತನ್ನದೇ ಆದ ಬೆಳಕನ್ನು ಉತ್ಪಾದಿಸುತ್ತದೆ, ಆದ್ದರಿಂದ ಅದಕ್ಕೆ ಬ್ಯಾಕ್‌ಲೈಟ್ ಅಗತ್ಯವಿಲ್ಲ. ಇದರರ್ಥ ಕಪ್ಪು ಬಣ್ಣಗಳು ಆಳವಾಗಿ ಕಾಣುತ್ತವೆ ಮತ್ತು ಕಾಂಟ್ರಾಸ್ಟ್ ಉತ್ತಮವಾಗಿರುತ್ತದೆ.
Tech Tips: ನೀವು ಯೂಟ್ಯೂಬ್ ಚಾನೆಲ್ ರಚಿಸಿದರೆ, ಎಷ್ಟು ದಿನಗಳ ನಂತರ ಹಣ ಸಿಗಲು ಪ್ರಾರಂಭವಾಗುತ್ತದೆ?
AMOLED ನ ಅನುಕೂಲಗಳಲ್ಲಿ ಹೆಚ್ಚು ರೋಮಾಂಚಕ ಮತ್ತು ಎದ್ದುಕಾಣುವ ಬಣ್ಣಗಳು ಸೇರಿವೆ. ಪರದೆಯ ಕಪ್ಪು ಮತ್ತು ಕಾಂಟ್ರಾಸ್ಟ್ ಉತ್ತಮವಾಗಿದ್ದು, ಸುಗಮ ವೀಡಿಯೊ ಮತ್ತು ಗೇಮಿಂಗ್ ಅನುಭವವನ್ನು ನೀಡುತ್ತದೆ. ಬ್ಯಾಟರಿ ಬಳಕೆ ಕಡಿಮೆಯಾಗುತ್ತದೆ, ವಿಶೇಷವಾಗಿ ಡಾರ್ಕ್ ಮೋಡ್ ಬಳಸುವಾಗ. ಆದಾಗ್ಯೂ, AMOLED ಡಿಸ್ಪ್ಲೇ ಗಳು ಕೆಲವು ಜನರಿಗೆ ಕಣ್ಣಿನ ಆಯಾಸವನ್ನು ಉಂಟುಮಾಡಬಹುದು, ಡಿಸ್ಪ್ಲೇ ಬ್ರೈಟ್ನೆಸ್ ತುಂಬಾ ಹೆಚ್ಚಿದ್ದರೆ ತಲೆ ನೋವುಬರಬಹುದು. ದೀರ್ಘಾವಧಿಯ ಅಧ್ಯಯನ ಅಥವಾ ಕಚೇರಿ ಕೆಲಸಕ್ಕೆ ಇದು ಸ್ವಲ್ಪ ಒತ್ತಡದಾಯಕವೆಂದು ಪರಿಗಣಿಸಲಾಗುತ್ತದೆ.
ನೀವು ಅಧ್ಯಯನ ಮಾಡುವುದು, ಕಚೇರಿಯಲ್ಲಿ ಕೆಲಸ ಮಾಡುವುದು ಅಥವಾ ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡುವುದು ಮುಂತಾದ ದೀರ್ಘಾವಧಿಯವರೆಗೆ ನಿಮ್ಮ ಫೋನ್ ಅನ್ನು ಬಳಸುತ್ತಿದ್ದರೆ, LCD ಡಿಸ್ಪ್ಲೇ ಸ್ವಲ್ಪ ಉತ್ತಮ ಆಯ್ಕೆಯಾಗಿರಬಹುದು. ಏಕೆಂದರೆ LCD ಪರದೆಗಳ ಹೊಳಪು ಮತ್ತು ಬಣ್ಣ ಸಮತೋಲನವು ಕಣ್ಣುಗಳ ಮೇಲೆ ಕಡಿಮೆ ಒತ್ತಡವನ್ನುಂಟು ಮಾಡುತ್ತದೆ.
ಆದಾಗ್ಯೂ, ನಿಮ್ಮ ಗಮನವು ವೀಡಿಯೊ, ಗೇಮಿಂಗ್ ಮತ್ತು ಉತ್ತಮ-ಗುಣಮಟ್ಟದ ಫೋಟೋಗಳ ಮೇಲೆ ಇದ್ದರೆ, ಮತ್ತು ನೀವು ಹೆಚ್ಚಿನ ಕಾಂಟ್ರಾಸ್ಟ್ ಮತ್ತು ಆಳವಾದ ಕಪ್ಪು ಬಣ್ಣವನ್ನು ಬಯಸಿದರೆ, AMOLED ಡಿಸ್ಪ್ಲೇ ಉತ್ತಮ ಆಯ್ಕೆಯಾಗಿದೆ. ಆದರೆ, ಬ್ರೈಟ್ ನೆಸ್ ಅನ್ನು ಅಡ್ಜಸ್ಟ್ ಮಾಡಲು ಮರೆಯದಿರಿ ಮತ್ತು ದೀರ್ಘಕಾಲದವರೆಗೆ ಡಿಸ್ಪ್ಲೇಯನ್ನು ನೋಡುವುದು ತಪ್ಪಿಸಿ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








