ಇಂದಿನ 5ಜಿ (5G) ಯುಗದಲ್ಲಿ ಸ್ಮಾರ್ಟ್ಫೋನ್ ಬಳಸದಿರುವವರ ಸಂಖ್ಯೆ ತುಂಬಾನೆ ಕಡಿಮೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ಕೈಯಲ್ಲೂ ಇಂದು ಮೊಬೈಲ್ಗಳಿವೆ. ಇದಕ್ಕೆ ಮುಖ್ಯ ಕಾರಣ ಕೈಗೆಟಕುವ ಬೆಲೆಗೆ ಸ್ಮಾರ್ಟ್ಫೋನ್ಗಳು ಮಾರಾಟ ಆಗುತ್ತಿರುವುದು. ಈಗ ಮಾರುಕಟ್ಟೆಯಲ್ಲಿ 7,000 ರೂ. ಯಿಂದಲೇ ಅತ್ಯುತ್ತಮ ಫೀಚರ್ಗಳ ಸ್ಮಾರ್ಟ್ಫೋ (Smartphone)ನ್ ಖರೀದಿಗೆ ಸಿಗುತ್ತದೆ. ಭಾರತದಲ್ಲಿ ಹೆಚ್ಚಾಗಿ ಸೇಲ್ ಕಾಣುವುದು ಈ ಬಜೆಟ್ ಫೋನ್ ಆಗಿರುವುದರಿಂದ ಬಹುತೇಕ ಎಲ್ಲ ಮೊಬೈಲ್ ಕಂಪನಿಗಳು ಕಡಿಮೆ ಬೆಲೆಗೆವೇ ಫೋನ್ಗಳನ್ನು ಅನಾವರಣ ಮಾಡುತ್ತವೆ. ಇಂದು ಪ್ರತಿ ಕೆಲಸವೂ ಫೋನಿನ ಮೂಲಕವೇ ಆಗುವುದರಿಂದ ಎಗ್ಗಿಲ್ಲದೆ ಮೊಬೈಲ್ಗಳು (Mobile) ಮಾರಾಟ ಕೂಡ ಆಗುತ್ತದೆ. ಮುಖ್ಯವಾಗಿ ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್ ಹೊಂದಿರುವ ಸಾಕಷ್ಟು ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯಿದೆ. ಆದರೆ, ಈ ಬ್ರಾಂಡ್‌ಗಳ ಹೆಸರಿನಲ್ಲಿ ದೊಡ್ಡ ವಂಚನೆ ನಡೆಯುತ್ತಿದೆ ಎಂದರೆ ನಂಬುತ್ತೀರಾ?.
ಮಾರ್ಕೆಟ್ನಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡು ಸೇಲ್ ಆಗುತ್ತಿರುವ ಸ್ಮಾರ್ಟ್ಫೋನ್ಗಳನ್ನು ಕೆಲ ಕಿಡಿಗೇಡಿಗಳು ಮೊಬೈಲ್ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಒರಿಜಿನಲ್ ಫೋನ್‌ಗಳ ಬದಲಾಗಿ ಅದೇರೀತಿ ಕಾಣುವ ಡಮ್ಮಿ ಫೋನ್ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಥೇಟ್ ಒರಿಜಿನಲ್ ಫೋನ್ನಂತೆ ಕಾಣುವ ನಕಲಿ ಫೋನ್ಗಳಲ್ಲಿ ಬಿಡಿ ಭಾಗಗಳನ್ನು ತೆಗೆದು ಡಮ್ಮಿ ಭಾಗಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಪ್ರಸಿದ್ಧ ಬ್ರಾಂಡ್ನ ಲೋಗೋ ಹಾಕಿ ಥೇಟ್ ಒರಿಜಿನರ್ ಫೋನ್ನಂತೆ ಕಾಣುವ ರೀತಿ ಮಾಡಿ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಈರೀತಿ ಅನೇಕ ಫೋನ್ಗಳು ಸೇಲ್ ಆಗಿವೆ. ಹಾಗಾದರೆ ನೀವು ಖರೀದಿಸಿದ ಮೊಬೈಲ್ ಅಸಲಿಯೇ? ಅಥವಾ ನಕಲಿಯೇ?. ಹೇಗೆ ತಿಳಿದುಕೊಳ್ಳುವುದು?.
ಮೊಬೈಲ್ ಬಳಕೆದಾರರು ತಮ್ಮಲ್ಲಿರುವ ಫೋನ್‌ಗಳ ಮೂಲಕವೇ ಇದು ಅಸಲಿ ಅಥವಾ ನಕಲು ಎಂಬುದನ್ನು ತಿಳಿಯಬಹುದು. ದೂರಸಂಪರ್ಕ ಇಲಾಖೆಯನ್ನು ಸಂಪರ್ಕಿಸಿ ಪರಶೀಲಿಸಬಹುದು. ನಿಮ್ಮ ಮೊಬೈಲ್ ಫೋನ್‌ನಿಂದ KYM ಎಂದು ಟೈಪ್ ಮಾಡಿ ಮತ್ತು ಸ್ಪೇಸ್ ನೀಡಿ. ನಂತರ 15 ಅಂಕಿಯ IMEI ಸಂಖ್ಯೆಯನ್ನು ನಮೂದಿಸಿ. ಇದನ್ನು 14422 ಗೆ ಮೆಸೇಜ್ ಕಳುಹಿಸಿ. ಸ್ವಲ್ಪ ಸಮಯದ ನಂತರ ನಿಮ್ಮ ಮೊಬೈಲ್ಗೆ ಮತ್ತೊಂದು ಮೆಸೇಜ್ ಬರುತ್ತದೆ. ಈ ಮೆಸೇಜ್ನಲ್ಲಿ ನಿಮ್ಮ ಮೊಬೈಲ್ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವಿವರವಾಗಿ ಇರುತ್ತದೆ.
ಬ್ರ್ಯಾಂಡ್ ಹೆಸರು ಗಮನಿಸಿ:
ಹೆಚ್ಚಿನ ಫೇಕ್ ಮೊಬೈಲ್ಗಳು ಅಥವಾ ನಕಲಿ ಇಯರ್ಫೋನ್, ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ತಪ್ಪಾದ ಅಕ್ಷರವನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಕಿಗೆ ಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉದಾಹರಣೆಯನ್ನು ನೀಡಲಾಗಿದೆ.
Samsung = Sammsung or Samsang or Samsong
iPhone = iPone or iPhoon
Huawei – Hauwei or Huawai
Xiaomi = Xaiomi or Xioami
ಮೊಬೈಲ್ ಕಳವಾದರೆ ಏನು ಮಾಡಬೇಕು?:
ಕಳೆದು ಹೋದ ಮೊಬೈಲ್ ಹುಡುಕಲು ಇಂದು ಅನೇಕ ಮಾರ್ಗಗಳಿವೆ. ಈಗಿನ ಹೊಸ ಮೊಬೈಲ್ ಫೋನ್ಗಳಲ್ಲಿ ‘find my phone’ ಎಂಬ ಆಯ್ಕೆ ಇರುತ್ತದೆ. ಐಫೋನ್ಗಳಲ್ಲಾದರೆ Find my iPhone ಎಂಬ ಆಯ್ಕೆ ಬಳಸಬಹುದು. ಆಡ್ರಾಂಯ್ಡ್ ಫೋನ್ಗಳಾದರೆ Find My Device ಎಂಬ ಆಯ್ಕೆ ಉಪಯೋಗಿಸಬಹುದು. ಏನೇ ಆದರೂ, ಕಳೆದುಹೋದ ಫೋನ್ ನೆಟ್ವರ್ಕ್ ಸಂಪರ್ಕ ಹೊಂದಿದ್ದರೆ ಹಾಗೂ ಲೊಕೇಶನ್ ಆನ್ ಇದ್ದರೆ ಮಾತ್ರ ನಾವು ಫೋನ್ ಟ್ರಾಕ್ ಮಾಡಬಹುದಾಗಿದೆ. ಇಲ್ಲವಾದಲ್ಲಿ ಲಾಸ್ಟ್ ಲೊಕೇಶನ್ ಅನ್ನು ಮಾತ್ರ ತಿಳಿಯಬಹುದು. ಅಥವಾ ಕಾನೂನಾತ್ಮಕವಾಗಿ ದೂರು ನೀಡಿ, ಮೊಬೈಲ್ ಹುಡುಕಲು ಹೊರಡುತ್ತೀರಾದರೆ ನಿಮ್ಮ IMEI ನಂಬರ್ ನೀವು ತಿಳಿದಿರುವುದು ಮುಖ್ಯ.
Published On - 1:55 pm, Sun, 20 November 22