POCO C50: ಬರೋಬ್ಬರಿ 6000mAh ಬ್ಯಾಟರಿ: ಬಜೆಟ್ ಬೆಲೆಗೆ ಪೋಕೋದಿಂದ ಬಂಪರ್ ಸ್ಮಾರ್ಟ್‌ಫೋನ್
ಪೋಕೋ ಕಂಪನಿಯು ಭಾರತದಲ್ಲಿ ಶೀಘ್ರದಲ್ಲೇ ಪೋಕೋ ಸಿ50 (POCO C50) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವುದಾಗಿ ಘೋಷಿಸಿದೆ. ಈ ಫೋನ್ ರೆಡ್ಮಿ A1+ ನ ಮರುಬ್ಯಾಡ್ಜ್ ಮಾಡಿದ ಆವೃತ್ತಿ ಇರಬಹುದು ಎಂದು ಹೇಳಲಾಗಿದೆ.
ಭಾರತದಲ್ಲಿ ರಿಯಲ್ ಮಿ, ಸ್ಯಾಮ್ಸಂಗ್, ವಿವೋ, ಒಪ್ಪೋ (Oppo) ಜೊತೆಗೆ ಈಗೀಗ ನೋಕಿಯಾ ಕಂಪನಿ ಕೂಡ ಪ್ರತಿ ತಿಂಗಳು ಒಂದಲ್ಲಾ ಒಂದು ಹೊಸ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿವೆ. ಆದರೆ, ಶವೋಮಿ (Xiaomi) ಮಾತ್ರ ಸಮಯ ತೆಗೆದುಕೊಂಡು ತನ್ನ ರೆಡ್ಮಿ, ಪೋಕೋ ಬ್ರ್ಯಾಂಡ್ನಡಿಯಲ್ಲಿ ಅಪರೂಪಕ್ಕೆ ಒಂದೊಂದೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ವಿದೇಶದಲ್ಲಿ ಒಂದು ಫೋನ್ ರಿಲೀಸ್ ಮಾಡಿತು ಎಂದಾದರೆ ಅದು ಭಾರತದಲ್ಲಿ ಬೇರೆಯೇ ಬ್ರ್ಯಾಂಡ್, ಹೆಸರಿನಡಿಯಲ್ಲಿ ಅನಾವರಣ ಆಗುತ್ತಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ಸ್ಮಾರ್ಟ್‌ಫೋನ್ ಸೇರ್ಪಡೆ ಆಗುವುದರಲ್ಲಿದೆ. ಪೋಕೋ ಕಂಪನಿಯು ಭಾರತದಲ್ಲಿ ಶೀಘ್ರದಲ್ಲೇ ಪೋಕೋ ಸಿ50 (POCO C50) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವುದಾಗಿ ಘೋಷಿಸಿದೆ. ಈ ಫೋನ್ ರೆಡ್ಮಿ A1+ ನ ಮರುಬ್ಯಾಡ್ಜ್ ಮಾಡಿದ ಆವೃತ್ತಿ ಇರಬಹುದು ಎಂದು ಹೇಳಲಾಗಿದೆ.
ಹೆಚ್ಚಾಗಿ ಬಜೆಟ್ ಬೆಲೆಗೆ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುವ ಪೋಕೋ ಇದೀಗ ರಿಲೀಸ್ ಮಾಡುತ್ತಿರುವ ಹೊಸ ಫೋನ್ ಕೂಡ ಕಡಿಮೆ ಬೆಲೆಯದ್ದಾಗಿದೆಯಂತೆ. ಪೋಕೋ C50 ನವೆಂಬರ್ ಕೊನೆಯ ವಾರದಲ್ಲಿ ಲಭ್ಯವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಕಂಪನಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಭಾರತದಲ್ಲಿ ಈ ಫೋನಿನ ಅಂದಾಜು 15,000 ರೂ. ಗಿಂತ ಕಡಿಮೆಯಿರಬಹುದು ಎನ್ನಲಾಗಿದೆ.
ಈ ಸ್ಮಾರ್ಟ್ಫೋನ್ನ ಕೆಲ ಫೀಚರ್ಸ್ ಕೂಡ ಸೋರಿಕೆಯಾಗಿದೆ. ಅದರ ಪ್ರಕಾರ ಇದು ವಾಟರ್‌ಡ್ರಾಪ್ ನಾಚ್ ಆಯ್ಕೆಯ ಜೊತೆಗೆ 6.52 ಇಂಚಿನ HD+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಮೀಡಿಯಾ ಟೆಕ್ ಹಿಲಿಯೋ A22 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ಪ್ಯಾಕ್ ಆಗಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 64GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರಲಿದ್ದು, ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಲಿದೆಯಂತೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಪೋಕೋ C50 ಎಂಟು ಮೆಗಾ ಫಿಕ್ಸೆಲ್ನ ರಿಯರ್ ಕ್ಯಾಮೆರಾ, 2 ಮೆಗಾ ಫಿಕ್ಸೆಲ್ನ ಡೆಪ್ತ್ ಸೆನ್ಸರ್ ಆಯ್ಕೆಯ ಸೆಕೆಂಡರಿ ಕ್ಯಾಮೆರಾ ಇರುವ ಸಾಧ್ಯತೆಯಿದೆ. ಹಾಗೆಯೇ ರಿಯರ್ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್ ಅಳವಡಿಸಲಾಗಿದೆಯಂತೆ. 5 ಮೆಗಾ ಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾ ಕೂಡ ನೀಡಲಾಗಿದೆ.
ವಿಶೇಷ ಎಂದರೆ ಇದು ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 18W ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇನ್ನುಳಿದಂತೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದೆ.
Published On - 2:45 pm, Sat, 19 November 22