Oppo A17K
ಚೀನಾ (China) ಮೂಲದ ಪ್ರಸಿದ್ಧ ಒಪ್ಪೋ ಸಂಸ್ಥೆ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಹೆಚ್ಚು ಬಜೆಟ್ ಬೆಲೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿಯ ಫೋನನ್ನು ಅನಾವರಣ ಮಾಡುತ್ತಿರುವ ಒಪ್ಪೋ ಕಳೆದ ಅಕ್ಟೋಬರ್ನಲ್ಲಿ ತನ್ನ A ಸರಣಿಯಲ್ಲಿ ಹೊಸ ಒಪ್ಪೋ ಎ17ಕೆ (Oppo A17K) ಫೋನನ್ನು ರಿಲೀಸ್ ಮಾಡಿತ್ತು. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು, ಆಕರ್ಷಕ ವಿನ್ಯಾಸ, ಉತ್ತಮ ಬ್ಯಾಟರಿ, ಕ್ಯಾಮೆರಾಗಳನ್ನು (Camera) ಹೊಂದಿದೆ. ಇದೀಗ ಒಪ್ಪೋ A17K ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ.
- ಒಪ್ಪೋ A17K ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದು ಮಾದರಿಯಲ್ಲಿ ಬಿಡುಗಡೆ ಆಗಿತ್ತು. ಇದರ 3GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 10,499 ರೂ. ನಿಗದಿ ಮಾಡಲಾಗಿತ್ತು.
- ಇದೀಗ ಈ ಫೋನಿನ ಬೆಲೆಯಲ್ಲಿ 500 ರೂ. ಕಡಿಮೆ ಮಾಡಲಾಗಿದೆ. ಒಪ್ಪೋ A17K ಅನ್ನು 9,999 ರೂ. ಗೆ ನೀವು ನಿಮ್ಮದಾಗಿಸಬಹುದು. ಕಪ್ಪು ಮತ್ತು ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
- ಈ ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್ LCD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ನಿಂದ ಕೂಡಿದೆ.
- ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದಿದೆ. ಹಾಗೆಯೇ 6GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.
- ಒಪ್ಪೋ A17 ಸ್ಮಾರ್ಟ್‌ಫೋನ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.
- ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ನೈಟ್ ಮೋಡ್, ಟೈಮ್ ಲಾಪ್ಸ್, ಎಕ್ಸಪರ್ಟ್, ಪನೋರಮಾ ಮತ್ತು ಗೂಗಲ್ ಲೆನ್ಸ್ ಇದೆ.
- ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಮತ್ತು ಸೂಪರ್ ನೈಟ್‌ಟೈಮ್ ಸ್ಟ್ಯಾಂಡ್‌ಬೈ ಅನ್ನು ಪಡೆದುಕೊಂಡದೆ. ಡ್ಯಯೆಲ್ ಸಿಮ್, ವೈ-ಫೈ 5, ಬ್ಲೂಟೂತ್ v5.3, ಮೈಕ್ರೊ ಯುಎಸ್ಬಿ ಪೋರ್ಟ್ ಸಿಯಿಂದ ಕೂಡಿದೆ.