Tech Tips: ನೀವು ಉಪಯೋಗಿಸುತ್ತಿರುವ ಸ್ಮಾರ್ಟ್​ಫೋನ್ ನಕಲಿ ಆಗಿರಬಹುದು: ಹೇಗೆ ಕಂಡುಹಿಡಿಯುವುದು?, ಇಲ್ಲಿದೆ ಟ್ರಿಕ್

Duplicate Smartphone: ಮಾರ್ಕೆಟ್​​ನಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡು ಸೇಲ್ ಆಗುತ್ತಿರುವ ಸ್ಮಾರ್ಟ್​ಫೋನ್​ಗಳನ್ನು ಕೆಲ ಕಿಡಿಗೇಡಿಗಳು ಮೊಬೈಲ್ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಹಾಗಾದರೆ ನೀವು ಖರೀದಿಸಿದ ಮೊಬೈಲ್ ಅಸಲಿಯೇ? ಅಥವಾ ನಕಲಿಯೇ?. ಹೇಗೆ ತಿಳಿದುಕೊಳ್ಳುವುದು?.

Tech Tips: ನೀವು ಉಪಯೋಗಿಸುತ್ತಿರುವ ಸ್ಮಾರ್ಟ್​ಫೋನ್ ನಕಲಿ ಆಗಿರಬಹುದು: ಹೇಗೆ ಕಂಡುಹಿಡಿಯುವುದು?, ಇಲ್ಲಿದೆ ಟ್ರಿಕ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on:Nov 20, 2022 | 1:55 PM

ಇಂದಿನ 5ಜಿ (5G) ಯುಗದಲ್ಲಿ ಸ್ಮಾರ್ಟ್​ಫೋನ್ ಬಳಸದಿರುವವರ ಸಂಖ್ಯೆ ತುಂಬಾನೆ ಕಡಿಮೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ಕೈಯಲ್ಲೂ ಇಂದು ಮೊಬೈಲ್​ಗಳಿವೆ. ಇದಕ್ಕೆ ಮುಖ್ಯ ಕಾರಣ ಕೈಗೆಟಕುವ ಬೆಲೆಗೆ ಸ್ಮಾರ್ಟ್​ಫೋನ್​ಗಳು ಮಾರಾಟ ಆಗುತ್ತಿರುವುದು. ಈಗ ಮಾರುಕಟ್ಟೆಯಲ್ಲಿ 7,000 ರೂ. ಯಿಂದಲೇ ಅತ್ಯುತ್ತಮ ಫೀಚರ್​ಗಳ ಸ್ಮಾರ್ಟ್​ಫೋ (Smartphone)ನ್ ಖರೀದಿಗೆ ಸಿಗುತ್ತದೆ. ಭಾರತದಲ್ಲಿ ಹೆಚ್ಚಾಗಿ ಸೇಲ್ ಕಾಣುವುದು ಈ ಬಜೆಟ್ ಫೋನ್ ಆಗಿರುವುದರಿಂದ ಬಹುತೇಕ ಎಲ್ಲ ಮೊಬೈಲ್ ಕಂಪನಿಗಳು ಕಡಿಮೆ ಬೆಲೆಗೆವೇ ಫೋನ್​ಗಳನ್ನು ಅನಾವರಣ ಮಾಡುತ್ತವೆ. ಇಂದು ಪ್ರತಿ ಕೆಲಸವೂ ಫೋನಿನ ಮೂಲಕವೇ ಆಗುವುದರಿಂದ ಎಗ್ಗಿಲ್ಲದೆ ಮೊಬೈಲ್​ಗಳು (Mobile) ಮಾರಾಟ ಕೂಡ ಆಗುತ್ತದೆ. ಮುಖ್ಯವಾಗಿ ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್ ಹೊಂದಿರುವ ಸಾಕಷ್ಟು ಫೋನ್​ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯಿದೆ. ಆದರೆ, ಈ ಬ್ರಾಂಡ್‌ಗಳ ಹೆಸರಿನಲ್ಲಿ ದೊಡ್ಡ ವಂಚನೆ ನಡೆಯುತ್ತಿದೆ ಎಂದರೆ ನಂಬುತ್ತೀರಾ?.

ಮಾರ್ಕೆಟ್​​ನಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡು ಸೇಲ್ ಆಗುತ್ತಿರುವ ಸ್ಮಾರ್ಟ್​ಫೋನ್​ಗಳನ್ನು ಕೆಲ ಕಿಡಿಗೇಡಿಗಳು ಮೊಬೈಲ್ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಒರಿಜಿನಲ್ ಫೋನ್​ಗಳ ಬದಲಾಗಿ ಅದೇರೀತಿ ಕಾಣುವ ಡಮ್ಮಿ ಫೋನ್​​ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಥೇಟ್ ಒರಿಜಿನಲ್ ಫೋನ್​ನಂತೆ ಕಾಣುವ ನಕಲಿ ಫೋನ್​ಗಳಲ್ಲಿ ಬಿಡಿ ಭಾಗಗಳನ್ನು ತೆಗೆದು ಡಮ್ಮಿ ಭಾಗಗಳನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಪ್ರಸಿದ್ಧ ಬ್ರಾಂಡ್​ನ ಲೋಗೋ ಹಾಕಿ ಥೇಟ್ ಒರಿಜಿನರ್ ಫೋನ್​ನಂತೆ ಕಾಣುವ ರೀತಿ ಮಾಡಿ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಈರೀತಿ ಅನೇಕ ಫೋನ್​ಗಳು ಸೇಲ್ ಆಗಿವೆ. ಹಾಗಾದರೆ ನೀವು ಖರೀದಿಸಿದ ಮೊಬೈಲ್ ಅಸಲಿಯೇ? ಅಥವಾ ನಕಲಿಯೇ?. ಹೇಗೆ ತಿಳಿದುಕೊಳ್ಳುವುದು?.

ಮೊಬೈಲ್ ಬಳಕೆದಾರರು ತಮ್ಮಲ್ಲಿರುವ ಫೋನ್‌ಗಳ ಮೂಲಕವೇ ಇದು ಅಸಲಿ ಅಥವಾ ನಕಲು ಎಂಬುದನ್ನು ತಿಳಿಯಬಹುದು. ದೂರಸಂಪರ್ಕ ಇಲಾಖೆಯನ್ನು ಸಂಪರ್ಕಿಸಿ ಪರಶೀಲಿಸಬಹುದು. ನಿಮ್ಮ ಮೊಬೈಲ್ ಫೋನ್‌ನಿಂದ KYM ಎಂದು ಟೈಪ್ ಮಾಡಿ ಮತ್ತು ಸ್ಪೇಸ್ ನೀಡಿ. ನಂತರ 15 ಅಂಕಿಯ IMEI ಸಂಖ್ಯೆಯನ್ನು ನಮೂದಿಸಿ. ಇದನ್ನು 14422 ಗೆ ಮೆಸೇಜ್ ಕಳುಹಿಸಿ. ಸ್ವಲ್ಪ ಸಮಯದ ನಂತರ ನಿಮ್ಮ ಮೊಬೈಲ್​ಗೆ ಮತ್ತೊಂದು ಮೆಸೇಜ್ ಬರುತ್ತದೆ. ಈ ಮೆಸೇಜ್​ನಲ್ಲಿ ನಿಮ್ಮ ಮೊಬೈಲ್​ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವಿವರವಾಗಿ ಇರುತ್ತದೆ.

ಇದನ್ನೂ ಓದಿ
Image
FIFA World Cup 2022: ಇಂದಿನಿಂದ ಫಿಫಾ ವಿಶ್ವಕಪ್ ಫೀವರ್ ಶುರು: ಗೂಗಲ್ ಡೂಡಲ್​ನಿಂದ ವಿಶೇಷ ಸಂಭ್ರಮಾಚರಣೆ
Image
ಟ್ರಂಪ್​ಗೆ ಟ್ವಿಟರ್ ಬಳಕೆ ಹಕ್ಕು ಮರುನೀಡಬೇಕೇ? ಸಮೀಕ್ಷೆ ಆರಂಭಿಸಿದ ಎಲಾನ್ ಮಸ್ಕ್
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಹೈ ಸ್ಪೀಡ್​ನಲ್ಲಿ ಚಾರ್ಜ್ ಆಗಬೇಕಾ?: ಈ ಟ್ರಿಕ್ ಫಾಲೋ ಮಾಡಿ
Image
POCO C50: ಬರೋಬ್ಬರಿ 6000mAh ಬ್ಯಾಟರಿ: ಬಜೆಟ್ ಬೆಲೆಗೆ ಪೋಕೋದಿಂದ ಬಂಪರ್ ಸ್ಮಾರ್ಟ್​ಫೋನ್

ಬ್ರ್ಯಾಂಡ್ ಹೆಸರು ಗಮನಿಸಿ:

ಹೆಚ್ಚಿನ ಫೇಕ್ ಮೊಬೈಲ್​ಗಳು ಅಥವಾ ನಕಲಿ ಇಯರ್​ಫೋನ್, ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ತಪ್ಪಾದ ಅಕ್ಷರವನ್ನು ಹೊಂದಿರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಕಿಗೆ ಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉದಾಹರಣೆಯನ್ನು ನೀಡಲಾಗಿದೆ.

Samsung = Sammsung or Samsang or Samsong iPhone = iPone or iPhoon Huawei – Hauwei or Huawai Xiaomi = Xaiomi or Xioami

ಮೊಬೈಲ್ ಕಳವಾದರೆ ಏನು ಮಾಡಬೇಕು?:

ಕಳೆದು ಹೋದ ಮೊಬೈಲ್ ಹುಡುಕಲು ಇಂದು ಅನೇಕ ಮಾರ್ಗಗಳಿವೆ. ಈಗಿನ ಹೊಸ ಮೊಬೈಲ್ ಫೋನ್​ಗಳಲ್ಲಿ ‘find my phone’ ಎಂಬ ಆಯ್ಕೆ ಇರುತ್ತದೆ. ಐಫೋನ್​ಗಳಲ್ಲಾದರೆ Find my iPhone ಎಂಬ ಆಯ್ಕೆ ಬಳಸಬಹುದು. ಆಡ್ರಾಂಯ್ಡ್ ಫೋನ್​ಗಳಾದರೆ Find My Device ಎಂಬ ಆಯ್ಕೆ ಉಪಯೋಗಿಸಬಹುದು. ಏನೇ ಆದರೂ, ಕಳೆದುಹೋದ ಫೋನ್ ನೆಟ್​ವರ್ಕ್ ಸಂಪರ್ಕ ಹೊಂದಿದ್ದರೆ ಹಾಗೂ ಲೊಕೇಶನ್ ಆನ್ ಇದ್ದರೆ ಮಾತ್ರ ನಾವು ಫೋನ್ ಟ್ರಾಕ್ ಮಾಡಬಹುದಾಗಿದೆ. ಇಲ್ಲವಾದಲ್ಲಿ ಲಾಸ್ಟ್ ಲೊಕೇಶನ್ ಅನ್ನು ಮಾತ್ರ ತಿಳಿಯಬಹುದು. ಅಥವಾ ಕಾನೂನಾತ್ಮಕವಾಗಿ ದೂರು ನೀಡಿ, ಮೊಬೈಲ್ ಹುಡುಕಲು ಹೊರಡುತ್ತೀರಾದರೆ ನಿಮ್ಮ IMEI ನಂಬರ್ ನೀವು ತಿಳಿದಿರುವುದು ಮುಖ್ಯ.

Published On - 1:55 pm, Sun, 20 November 22