- Kannada News Photo gallery Apple iPhone these 7 important government apps iPhone users cant use Technology News in Kannada
App Store: ಐಫೋನ್ ಬಳಕೆದಾರರಿಗೆ ಸಿಗಲ್ಲ ಈ 7 ಪ್ರಮುಖ ಸರ್ಕಾರಿ ಆ್ಯಪ್ಗಳು: ಯಾಕೆ ಗೊತ್ತೇ?
Apple iPhone: ಕೆಲ ಅಗತ್ಯ ಆ್ಯಪ್ಗಳು ಐಫೋನ್ ಬಳಕೆದಾರರಿಗೆ ಲಭ್ಯವಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್ಪೋನ್ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ನಂತೆ ಐಫೋನ್ ಬಳಕೆದಾರರಿಗೆ ಇರುವ ಆ್ಯಪ್ ಸ್ಟೋರ್ನಲ್ಲಿ ಈ ಮುಖ್ಯವಾದ 7 ಆ್ಯಪ್ಗಳನ್ನು ಆ್ಯಪಲ್ ಕಂಪನಿ ಇನ್ನೂ ನೀಡಿಲ್ಲ. ಇಲ್ಲಿದೆ ನೋಡಿ ಆ ಆ್ಯಪ್ಗಳು.
Updated on:Nov 21, 2022 | 3:25 PM

ಇಂದು ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ನಾಗರೀಕರಿಗಾಗಿ ಹಲವು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ನಾಗರಿಕರು ತಮ್ಮ ಬೆರಳಳ ತುದಿಯಿಂದಲೇ ಸ್ಮಾರ್ಟ್ಫೋನ್ ಮೂಲಕ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿಕೊಂಡು ಸರ್ಕಾರಿ ಇಲಾಖೆಗಳ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರು, ರೈತರು, ಶಿಕ್ಷಕರು ಹೀಗೆ ವಿವಿಧ ವರ್ಗಗಳ ಜನರಿಗೂ ಅನುಕೂಲವಾಗಲು ಪ್ರತ್ಯೇಕ ಅಪ್ಲಿಕೇಶನ್ ಅನ್ನು ಸರ್ಕಾರ ರೂಪಿಸಿದೆ.

ಆದರೆ, ಕೆಲ ಅಗತ್ಯ ಆ್ಯಪ್ಗಳು ಐಫೋನ್ ಬಳಕೆದಾರರಿಗೆ ಲಭ್ಯವಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್ಪೋನ್ನಲ್ಲಿರುವ ಗೂಗಲ್ ಪ್ಲೇ ಸ್ಟೋರ್ನಂತೆ ಐಫೋನ್ ಬಳಕೆದಾರರಿಗೆ ಇರುವ ಆ್ಯಪ್ ಸ್ಟೋರ್ನಲ್ಲಿ ಈ ಮುಖ್ಯವಾದ 7 ಆ್ಯಪ್ಗಳನ್ನು ಆ್ಯಪಲ್ ಕಂಪನಿ ಇನ್ನೂ ನೀಡಿಲ್ಲ. ಇಲ್ಲಿದೆ ನೋಡಿ ಆ ಆ್ಯಪ್ಗಳು.

MyGrievance: ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿದ MyGrievance ಎಂಬ ಅಪ್ಲಿಕೇಶನ್ ಐಫೋನ್ ಬಳಕೆದಾರರಿಗೆ ಲಭ್ಯವಿಲ್ಲ. ಈ ಅಪ್ಲಿಕೇಶನ್ ಬಳಕೆದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಅನುಮತಿಸುತ್ತದೆ. ಬಳಕೆದಾರರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಇಲ್ಲಿ ಹಂಚಿಕೊಳ್ಳಬಹುದು, ಜೊತೆಗೆ ಟ್ರ್ಯಾಕ್ ಮಾಡಲು ಅಪ್ಲಿಕೇಶನ್ ಅನುಮತಿಸುತ್ತದೆ.

myCGHS: ಈ ಆ್ಯಪ್ ಕೇಂದ್ರ ಸರ್ಕಾರದ ನೌಕರರಿಗೆ ಲಭ್ಯವಿದ್ದು, ವೈದ್ಯರು ಮತ್ತು ವೆಲ್ನೆಸ್ ಕೇಂದ್ರಗಳಿಗೆ ನೇಮಕಾತಿಗಳನ್ನು ಬುಕ್ ಮಾಡಲು, ಕ್ಯಾನ್ಸಲ್ ಮಾಡಲು ಈ ಅಪ್ಲಿಕೇಶನ್ ಬಳಕೆಯಲ್ಲಿದೆ. ಇದರಿಂದ ನಾಗರೀಕರು ತಮ್ಮ ಚಿಕಿತ್ಸೆಗಾಗಿ ಪ್ಯಾನೆಲ್‌ನಲ್ಲಿ ಲಭ್ಯವಿರುವ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳನ್ನು ಹುಡುಕಬಹುದು.

Jeevan Pramaan: ಈ ಅಪ್ಲಿಕೇಶನ್ ಪಿಂಚಣಿದಾರರಿಗೆ ಬಯೋಮೆಟ್ರಿಕ್ ಸಕ್ರಿಯಗೊಳಿಸಿದ ಆಧಾರ್ ಆಧಾರಿತ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ನೀಡುತ್ತದೆ. ಜೀವನ್ ಪ್ರಮಾಣ್ ಐಡಿ ಸಹಾಯದಿಂದ ಬಳಕೆದಾರರು ಆ್ಯಪ್ ಬಳಸಿ ಪ್ರಮಾಣೀಕರಣದ PDF ನಕಲನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಮುಖ್ಯವಾಗ ಆ್ಯಪ್ ಐಫೋನ್ ಬಳಕೆದಾರರಿಗೆ ಸಿಗಲ್ಲ.

Registration and Stamp duty: ಈ ಅಪ್ಲಿಕೇಶನ್ ಅನ್ನು ಮೇಘಾಲಯದ ನಾಗರಿಕರಿಗೆ ಸಹಾಯ ಆಗಲು ನೀಡಲಾಗಿದೆ. ಇದರ ಮೂಲಕ ಜಿಲ್ಲೆಯ ಉಪ-ರಿಜಿಸ್ಟ್ರಾರ್ ವ್ಯಾಪ್ತಿಯೊಳಗೆ ಭೂಮಿ ನೋಂದಣಿಗೆ ಅಗತ್ಯವಿರುವ ಅಂದಾಜು ಸ್ಟ್ಯಾಂಪ್ ಡ್ಯೂಟಿ ಮೊತ್ತ ಮತ್ತು ನೋಂದಣಿ ಶುಲ್ಕವನ್ನು ತಿಳಿಯಲು ಸಹಾಯ ಮಾಡುತ್ತದೆ.

PMO India: ಇದು ಭಾರತೀಯ ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಇತ್ತೀಚಿನ ಮಾಹಿತಿ, ಸುದ್ದಿ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಸಂಬಂಧಿಸಿದ ವಿವರಗಳು ಇರುತ್ತದೆ. ಈ ಆ್ಯಪ್ 13 ಭಾಷೆಗಳಲ್ಲಿ ಲಭ್ಯವಿದೆ. ಇದರಲ್ಲಿ ಪ್ರಧಾನಮಂತ್ರಿಯವರ 'ಮನ್ ಕಿ ಬಾತ್' ಆಡಿಯೋ ರೆಕಾರ್ಡಿಂಗ್ ಮತ್ತು ವಿಡಿಯೋವನ್ನು ಪ್ರಸಾರ ಮಾಡುತ್ತದೆ.

Yogyata: ಈ ಅಪ್ಲಿಕೇಶನ್ ಆನ್‌ಲೈನ್ ಕಲಿಕೆಯ ವೇದಿಕೆಯಾಗಿದೆ. ಬಳಕೆದಾರರು ಹೊಸ ಕೌಶಲ್ಯಗಳನ್ನು ಕಲಿಯುವಂತೆ ಮತ್ತು ಅವರ ಭವಿಷ್ಯದಲ್ಲಿ ಅವರನ್ನು ಉದ್ಯೋಗಿಗಳಾಗಿ ಮಾಡಲು ಈ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ.

Kisan Suvidha: ರೈತರು ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡಲು ಸಹಾಯ ಮಾಡಲು ಕಿಸಾನ್ ಸುವಿಧಾ ಅಪ್ಲಿಕೇಶನ್ ಅನ್ನು ತಯಾರಿಸಲಾಗಿದೆ. ಇದರಿಂದ ಅನೇಕ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಅಪ್ಲಿಕೇಶನ್ ಬಳಸಿಕೊಂಡು ರೈತರು ಯಾವುದೇ ಮಾರ್ಕೆಟ್ ವಿಭಾಗದ ಸರಕುಗಳನ್ನು ಟ್ರ್ಯಾಕ್ ಮಾಡಬಹುದು.
Published On - 3:22 pm, Mon, 21 November 22
























