ಪ್ರಸಿದ್ಧ ವಾಟ್ಸ್ಆ್ಯಪ್ (WhatsApp) ಇಂದು ಕೋಟ್ಯಾಂತರ ಜನರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ಆಗಿದೆ. ದಿನದ ಆರಂಭ ಹಾಗೂ ದಿನದ ಕೊನೆ ಇದರಿಂದಲೇ ಆಗುತ್ತದೆ ಎಂದರೆ ತಪ್ಪಾಗಲಾರದು. ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ದಿಹೊಂದಿ ಬಳಕೆದಾರರಿಂದ ಮನ್ನಣೆಗೆ ಪಾತ್ರವಾಗಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಆಗಿದೆ. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವ ಆಯ್ಕೆಗಳನ್ನು ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನೀಡುತ್ತಿದೆ. ವಾಟ್ಸ್ಆ್ಯಪ್ ಜನರಿಗೆ ಇಷ್ಟೊಂದು ಹತ್ತಿರವಾಗಲು ಮುಖ್ಯ ಕಾರಣ ಇದರಲ್ಲಿರುವ ಫೀಚರ್ಸ್ (Features). ಈಗಂತು ಒಂದರ ಹಿಂದೆ ಒಂದರಂತೆ ಆಕರ್ಷಕ ಅಪ್ಡೇಟ್ಗಳನ್ನು ಕಂಪನಿ ನೀಡುತ್ತಿದೆ. ಅಂತೆಯೆ ವಾಟ್ಸ್ಆ್ಯಪ್ನಲ್ಲಿ ನಿಮಗೆ ತಿಳಿದಿರದ ಅನೇಕ ಆಯ್ಕೆಗಳಿವೆ. ಕೆಲವೊಂದು ಟ್ರಿಕ್ಸ್ಗಳನ್ನು (Tricks) ಬಳಸಿಕೊಂಡು ವಾಟ್ಸ್ಆ್ಯಪ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಬಹುದು.
ನಿಮಗೆಲ್ಲ ತಿಳಿದಿರುವ ಹಾಗೆ ವಾಟ್ಸ್ಆ್ಯಪ್ನಲ್ಲಿ ಬಂದ ಮೆಸೇಜ್ ಅನ್ನು ನೀವು ತೆರೆದು ನೋಡಿದರೆ ಅದರಲ್ಲಿ ಬ್ಲೂ ಟಿಕ್ ಕಾಣಿಸುತ್ತದೆ. ನಮಗೆ ಆ ಮೆಸೇಜ್ ನೋಡಬೇಕು ಆದರೆ ಬ್ಲೂ ಟಿಕ್ ಬರಬಾರದು ಎಂದು ಕೆಲವರು ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ ಮೊರೆ ಹೋಗುತ್ತಾರೆ. ಇದಕ್ಕಾಗಿ ನೀವು ಯಾವುದೇ ಮೂರನೇ ಅಪ್ಲಿಕೇಷನ್ ಅನ್ನು ಇನ್ಸ್ಟಾಲ್ ಮಾಡಬೇಕೆಂದಿಲ್ಲ. ಬದಲಾಗಿ ನೀವು ನಿಮ್ಮ ಸ್ನೇಹಿತರ ವಾಟ್ಸ್ಆ್ಯಪ್ ಮೆಸೇಜ್ ನೋಡಿದರೂ ಬ್ಲೂ ಟಿಕ್ ಬಾರದಂತೆ ಮಾಡಲು ಅಥವಾ ಅವರಿಗೆ ತಿಳಿಯದಂತೆ ಆ ಮೆಸೇಜ್ ನೋಡಲು ಕೆಲವೊಂದು ಟ್ರಿಕ್ಗಳಿಗೆ. ಇದಕ್ಕಾಗಿ ಕೆಳಗಿನ ಟಿಪ್ಸ್ ಫಾಲೋ ಮಾಡಿ.
ನಿಮ್ಮ ಫೋನ್ನಲ್ಲಿನ ನೋಟಿಫಿಕೇಷನ್ ಆಯ್ಕೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಮೂಲಕವೂ ವಾಟ್ಸ್ಆ್ಯಪ್ ಮೆಸೇಜ್ ಅನ್ನು ವೀಕ್ಷಿಸಬಹುದು.
ಕಳೆದ ವಾರವಷ್ಟೆ ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಅನುಕೂಲವಾಗುವ ಪ್ರೈವೆಸಿ ಫೀಚರ್ಸ್ ಅನ್ನು ಪರಿಚಯಿಸಿತ್ತು. ಈ ಫೀಚರ್ಸ್ ಮೂಲಕ ವಾಟ್ಸ್ಆ್ಯಪ್ ಚಾಟ್‌ಗಳಲ್ಲಿ ನೀವು ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಹೈಡ್ ಮಾಡಬಹುದು. ಈ ಆಯ್ಕೆಯನ್ನು ಆ್ಯಕ್ಟಿವ್ ಮಾಡಲು ಮೊದಲಿಗೆ ವಾಟ್ಸ್ಆ್ಯಪ್ ಅಪ್ಲಿಕೇಶನ್ ತೆರೆಯಿರಿ. ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿರಿ. ನಂತರ ಸೆಟ್ಟಿಂಗ್ಸ್ >ಅಕೌಂಟ್> ಪ್ರೈವೆಸಿ ಆಯ್ಕೆಯನ್ನು ಟ್ಯಾಪ್ ಮಾಡಿರಿ. ಇದರಲ್ಲಿ ನಿಮಗೆ ಲಾಸ್ಟ್ ಸೀನ್ ಆಂಡ್ ಆನ್‌ಲೈನ್ ಫೀಚರ್ಸ್ ಕಾಣಲಿದೆ. ಇದರ ಮೇಲೆ ಟ್ಯಾಪ್ ಮಾಡಿ ನಂತರ Nobody ಮತ್ತು Same as last seen” ಆಯ್ಕೆಯನ್ನು ಆರಿಸಿ. ಇದರಲ್ಲಿ ನೀವು ಯಾರೂ ಇಲ್ಲ ಅನ್ನು ಟ್ಯಾಪ್ ಮಾಡಿದಾಗ, ನೀವು ಪ್ರತಿಯೊಬ್ಬರಿಂದ ಆನ್‌ಲೈನ್ ಸ್ಟೇಟಸ್ ಅನ್ನು ಹೈಡ್ ಮಾಡಲು ಸಾಧ್ಯವಾಗಲಿದೆ.
Published On - 11:44 am, Mon, 10 October 22