ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಮೊಬೈಲ್ ಕಂಪನಿಗಳು ದಿನದಿಂದ ದಿನಕ್ಕೆ ಗ್ರಾಹಕರಿಗೆ ಸೊಗಸಾದ ಫೋನ್‌ಗಳನ್ನು ತಯಾರಿಸಿ ಬಿಡುಗಡೆ ಮಾಡುತ್ತಿವೆ. ಮುಖ್ಯವಾಗಿ ಇಂದು ಸ್ಟೈಲಿಶ್ ಸ್ಮಾರ್ಟ್ಫೋನ್ಗೆ ಭರ್ಜರಿ ಡಿಮ್ಯಾಂಡ್ ಇದೆ. ಇವು ನೋಡಲು ಸೊಗಸಾದ ಮತ್ತು ಉತ್ತಮ ವೈಶಿಷ್ಟ್ಯಗಳಿದ್ದರೆ ಎಗ್ಗಿಲ್ಲದಂತೆ ಸೇಲ್ ಆಗುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಬಾಗಿದ ಡಿಸ್‌ಪ್ಲೇ ಫೋನ್ ಮತ್ತು ಫ್ಲಾಟ್ ಸ್ಕ್ರೀನ್ ಮೊಬೈಲ್ ಫೋನ್ ಲಭ್ಯವಿದೆ.
ಈಗ ಫ್ಲಾಟ್ ಸ್ಕ್ರೀನ್ ಫೋನ್ ಖರೀದಿಸಬೇಕೇ ಅಥವಾ ಬಾಗಿದ ಡಿಸ್ಪ್ಲೇಯ ಫೋನ್ ಖರೀದಿಸಬೇಕೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವೆರಡರಲ್ಲಿ ಯಾವುದು ಸ್ಟೈಲಿಶ್ ಆಗಿ ಕಾಣಿಸುತ್ತದೆ, ಯಾವ ಫೋನ್ ಅನ್ನು ಖರೀದಿಸುವುದು ಲಾಭದಾಯಕ ಎಂಬ ಗೊಂದಲ ನಿಮ್ಮಲ್ಲಿದ್ದರೆ, ಇದಕ್ಕೆ ಉತ್ತರ ಇಲ್ಲಿದೆ.
ನೀವು ಹೊಸ ಫೋನ್ ಖರೀದಿಸುವ ಮೊದಲು ಈ ಎರಡೂ ಫೋನ್‌ಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳಬೇಕು. ಫ್ಲಾಟ್ ಮತ್ತು ಬಾಗಿದ ಎರಡೂ ಡಿಸ್ ಪ್ಲೇಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ, ನಿಮ್ಮ ಅಗತ್ಯತೆಗಳು ಮತ್ತು ಬಜೆಟ್ಗೆ ಅನುಗುಣವಾಗಿ ನಿಮಗೆ ಸರಿ ಹೊಂದುವ ಡಿಸ್ ಪ್ಲೇಯ ಫೋನ್ ಅನ್ನು ಆಯ್ಕೆ ಮಾಡಬಹುದು.
ಮೊದಲ ಪ್ರಯೋಜನ: ಫ್ಲಾಟ್ ಡಿಸ್ ಪ್ಲೇನಲ್ಲಿ ಟೆಂಪರ್ಡ್ ಗ್ಲಾಸ್ ಅನ್ನು ಸ್ಥಾಪಿಸುವುದು ಸುಲಭ ಮತ್ತು ಇದು ಸುರಕ್ಷಿತವಾಗಿದೆ. ಏಕೆಂದರೆ ಈ ಡಿಸ್ ಪ್ಲೇ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ.
ಎರಡನೇ ಪ್ರಯೋಜನ: ಸಾಮಾನ್ಯವಾಗಿ, ಫ್ಲಾಟ್ ಡಿಸ್ ಪ್ಲೇ ಹೊಂದಿರುವ ಫೋನ್ ಗಳು ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳಿಗಿಂತ ಕಡಿಮೆ ವೆಚ್ಚದಲ್ಲಿರುತ್ತವೆ.
ಮೊದಲ ಅನಾನುಕೂಲತೆ: ಬಾಗಿದ ಡಿಸ್ ಪ್ಲೇಗೆ ಹೋಲಿಸಿದರೆ ಫ್ಲಾಟ್ ಡಿಸ್ ಪ್ಲೇ ಹೊಂದಿರುವ ಫೋನುಗಳು ಕಡಿಮೆ ಆಕರ್ಷಕವಾಗಿ ಕಾಣಿಸಬಹುದು.
ಎರಡನೇ ಅನನುಕೂಲವೆಂದರೆ: ಬಾಗಿದ ಡಿಸ್ ಪ್ಲೇಗೆ ಹೋಲಿಸಿದರೆ ಫ್ಲಾಟ್ ಡಿಸ್ ಪ್ಲೇ ಯಲ್ಲಿ ವಿಡಿಯೋಗಳನ್ನು ನೋಡುವಾಗ ವಾವ್ ಎಂಬಂತಹ ಅನುಭವ ನೀಡುವುದಿಲ್ಲ.
ಮೊದಲ ಪ್ರಯೋಜನ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳು ನೋಟದಲ್ಲಿ ಸಾಕಷ್ಟು ಆಕರ್ಷಕವಾಗಿವೆ.
ಎರಡನೇ ಪ್ರಯೋಜನ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ನಲ್ಲಿ ವಿಡಿಯೋಗಳನ್ನು ನೋಡುವ ಅನುಭವ ಅದ್ಭುತವಾಗಿದೆ.
ಮೊದಲ ಅನನುಕೂಲವೆಂದರೆ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳು ಸಾಮಾನ್ಯವಾಗಿ ಫ್ಲಾಟ್ ಡಿಸ್ ಪ್ಲೇಗಳೊಂದಿಗಿನ ಫೋನುಗಳಿಗಿಂತ ಹೆಚ್ಚು ದುಬಾರಿಯಾಗಿದೆ.
ಎರಡನೇ ಅನನುಕೂಲವೆಂದರೆ: ಬಾಗಿದ ಡಿಸ್ ಪ್ಲೇ ಹೊಂದಿರುವ ಫೋನ್ ಗಳಲ್ಲಿ ಟೆಂಪರ್ಡ್ ಗ್ಲಾಸ್ ಅನ್ನು ಸ್ಥಾಪಿಸುವುದು ಕಷ್ಟ ಮತ್ತು ಅದು ಬೇಗನೆ ಹಾಳಾಗುತ್ತದೆ. ಇದನ್ನು ಹಾಕುವುದ ಕೂಡ ಕಷ್ಟ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ