ನಿಮ್ಮ ಫೋನ್‌ನ ಹಿಂಬದಿಯ ಕವರ್‌ನಲ್ಲಿ ನೀವು ಚೀಟಿ, ಹಣ ಅಥವಾ ಯಾವುದೇ ಕಾಗದದ ವಸ್ತುವನ್ನು ಇಟ್ಟುಕೊಂಡಿದ್ದರೆ ಜಾಗರೂಕರಾಗಿರಿ. ಇಲ್ಲದಿದ್ದರೆ ನಿಮಗೆ ದೊಡ್ಡ ನಷ್ಟವಾಗಬಹುದು. ನಿಮ್ಮ ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳುಗಳಿಂದ ಮೊಬೈಲ್ (Mobile) ಫೋನ್‌ಗಳು ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಇದಕ್ಕೆ ಕಾರಣ ಎನ್ನಬಹುದು. ವರದಿಗಳ ಪ್ರಕಾರ, ಬಳಕೆದಾರರ ದುಬಾರಿ ಮತ್ತು ಅಗ್ಗದ ಫೋನ್‌ಗಳು ಸ್ಫೋಟಗಳ್ಳಲು ಮೊಬೈಲ್ನ ಬ್ಯಾಕ್ ಕವರ್‌ನಲ್ಲಿ ಎಟಿಎಂ ಕಾರ್ಡ್, ಮೆಟ್ರೋ ಕಾರ್ಡ್, ಹಣವನ್ನು ಇಡುವುದು ಒಂದು ಕಾರಣ ಎಂಬುದು ತಿಳಿದುಬಂದಿದೆ.
ಸ್ಮಾರ್ಟ್ಫೋನ್ ಹೆಚ್ಚು ಬಿಸಿಯಾಗುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಬರುವ ದೊಡ್ಡ ಕಾರಣವೆಂದರೆ ಫೋನ್‌ಗೆ ದಪ್ಪ ಕವರ್ ಅಳವಡಿಸಿರುವುದು. ಇದರ ಜೊತೆಗೆ ಕವರ್ನೊಳಗೆ ಹಲವು ಬಗೆಯ ವಸ್ತುಗಳನ್ನು ಇಡುವುದು. ಫೋನಿಗೆ ದಪ್ಪನೆಯ ಬ್ಯಾಕ್ ಕವರ್ ಹಾಕಿದಾಗ ಮತ್ತು ಆ ಕವರ್‌ನಲ್ಲಿ ವಸ್ತುಗಳನ್ನು ಇಟ್ಟಾಗ ಗಾಳಿಯು ಹಾದುಹೋಗಲು ಯಾವುದೇ ಸ್ಥಳಗಳಿರುವುದಿಲ್ಲ. ಇದರಿಂದಾಗಿ ಫೋನ್ ಹೆಚ್ಚು ಬಿಸಿಯಾಗುತ್ತದೆ ಮತ್ತು ಬ್ಲಾಸ್ಟ್ ಆಗುತ್ತದೆ.
ಇನ್ಮುಂದೆ ನೋಕಿಯಾ ಫೋನ್ ಬರಲ್ಲ: ಭಾರತದಲ್ಲಿ HMD ಕಂಪನಿಯ ಚೊಚ್ಚಲ ಫೋನ್ ಬಿಡುಗಡೆಗೆ ತಯಾರಿ
ಹಲವರಿಗೆ ಮೆಟ್ರೋ ಕಾರ್ಡ್, ನೋಟಿನ ಚೀಟಿ ಅಥವಾ ಕೆಲ ವಸ್ತುಗಳನ್ನು ಫೋನ್‌ನ ಹಿಂಬದಿಯ ಕವರ್‌ನಲ್ಲಿ ಇಡುವ ಅಭ್ಯಾಸವಿದೆ, ಕೆಲವರು ಅದನ್ನು ಅದೃಷ್ಟವೆಂದು ನಂಬುತ್ತಾರೆ. ಕೆಲವರು ವಿಭಿನ್ನ ಕಾರಣಗಳನ್ನು ಹೊಂದಿರುತ್ತಾರೆ. ಹಲವು ಬಾರಿ ಫೋನಿನ ಕವರ್‌ನಲ್ಲಿ ಪೇಪರ್ ಅಥವಾ ಹಣ ಇಟ್ಟುಕೊಂಡರೆ ವೈರ್ ಲೆಸ್ ಚಾರ್ಜಿಂಗ್ನಲ್ಲಿ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಈ ಅಭ್ಯಾಸ ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಫೋನ್ ಅನ್ನು ಚಾರ್ಜ್ ಮಾಡುವಾಗ, ಅದು ಸಂಪೂರ್ಣವಾಗಿ ಚಾರ್ಜ್ ಆಗುವವರೆಗೆ ಪಕ್ಕಕ್ಕೆ ಇಡಬೇಕು. ಚಾರ್ಜ್ ಮಾಡುವಾಗ ಫೋನ್ ಬಳಸಿದರೆ, ಫೋನ್ ಬಿಸಿ ಆಗಿ ಸ್ಫೋಟವಾಗುವ ಸಾಧ್ಯತೆಯನ್ನು ಹೆಚ್ಚಿರುತ್ತದೆ.
ವಿದೇಶದಲ್ಲಿ ಗೂಗಲ್ ಪೇ, ಫೋನ್ ಪೇ ಬಳಕೆ ಹೇಗೆ?: ಸೆಟ್ಟಿಂಗ್ಸ್ನಲ್ಲಿ ಏನು ಬದಲಾವಣೆ ಮಾಡಬೇಕು?
ನಿಮ್ಮ ಫೋನ್ ಬಿಸಿಯಾಗಲು ಪ್ರಾರಂಭಿಸಿದಾಗ, ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಸಮಯದ ನಂತರ ಫೋನ್ ಅನ್ನು ಆನ್ ಮಾಡಿ ಬಳಸಿ. ನಂತರವೂ ಫೋನ್ ಬಿಸಿಯಾಗುತ್ತಿದ್ದರೆ, ಯಾವ ಅಪ್ಲಿಕೇಶನ್ ಎಷ್ಟು ಬ್ಯಾಟರಿಯನ್ನು ಬಳಸುತ್ತಿದೆ ಎಂಬುದನ್ನು ಫೋನ್‌ನ ಸೆಟ್ಟಿಂಗ್‌ಗಳಲ್ಲಿ ಪರಿಶೀಲಿಸಿ ಕ್ಲೀಯರ್ ಮಾಡಿ. ಅನಗತ್ಯ ಅಪ್ಲಿಕೇಶನ್ ಇದ್ದರೆ ತಕ್ಷಣ ಅದನ್ನು ಫೋನ್‌ನಿಂದ ಅನ್ಇನ್ಸ್ಟಾಲ್ ಮಾಡಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ