AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ವಂಚನೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ವೈಯಕ್ತಿಕ ಮಾಹಿತಿ ಕಾಪಾಡಲು ಈ ಮಾರ್ಗಗಳು ಸಾಕು

ಡೇಟಾ ಮೈನಿಂಗ್ (Data mining) ಅಂದರೆ ನಿಮ್ಮ ವೈಯಕ್ತಿಕ ಮಾಹಿತಿ ಇಂದಿನ ಸೈಬರ್​​ ಪ್ರಪಂಚದಲ್ಲಿ ಮೂರಾಬಟ್ಟೆಯಾಗಿ ಹಂಚಿಹೋಗಿದೆ. ಇದು ನಿಮ್ಮ ಖಾಸಗಿತನಕ್ಕೆ ಬಹಳಷ್ಟು ಪೆಟ್ಟುಕೊಡಬಲ್ಲದು. ಅದು ನಿಮ್ಮ ಗೌಪ್ಯತೆಯನ್ನು ಹಾಳುಮಾಡುತ್ತದೆ. ಸ್ವಲ್ಪವೇ ಮೈಮರೆತರೂ ನಿಮ್ಮ ಜುಟ್ಟು ಸೈಬರ್​ ಲೋಕದಲ್ಲಿ ಖದೀಮರ ಕೈಗೆ ನೀಡದಂತೆಯೇ ಸರಿ. ಮುಂದೆ ಅದು ದುರುಪಯೋಗವಾಗುವುದು ಖಚಿತ.

ಸೈಬರ್ ವಂಚನೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳುವುದು ಹೇಗೆ? ವೈಯಕ್ತಿಕ ಮಾಹಿತಿ ಕಾಪಾಡಲು ಈ ಮಾರ್ಗಗಳು ಸಾಕು
ಮೂರಾಬಟ್ಟೆಯಾಗಿರುವ ವೈಯಕ್ತಿಕ ಮಾಹಿತಿ, ಖಾಸಗಿತನ ಕಾಪಾಡಿಕೊಳ್ಳುವುದು ಹೇಗೆ?Image Credit source: kinsta.com/blog
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: May 16, 2024 | 9:56 AM

Share

ಡೇಟಾ ಮೈನಿಂಗ್ (Data mining) ಅಂದರೆ ನಿಮ್ಮ ವೈಯಕ್ತಿಕ ಮಾಹಿತಿ ಇಂದಿನ ಸೈಬರ್​​ ಪ್ರಪಂಚದಲ್ಲಿ ಮೂರಾಬಟ್ಟೆಯಾಗಿ ಹಂಚಿಹೋಗಿದೆ. ಇದು ನಿಮ್ಮ ಖಾಸಗಿತನಕ್ಕೆ ಬಹಳಷ್ಟು ಪೆಟ್ಟುಕೊಡಬಲ್ಲದು. ಅದು ನಿಮ್ಮ ಗೌಪ್ಯತೆಯನ್ನು ಹಾಳುಮಾಡುತ್ತದೆ. ಸ್ವಲ್ಪವೇ ಮೈಮರೆತರೂ ನಿಮ್ಮ ಜುಟ್ಟು ಸೈಬರ್​ ಲೋಕದಲ್ಲಿ ಖದೀಮರ ಕೈಗೆ ನೀಡದಂತೆಯೇ ಸರಿ. ಮುಂದೆ ಅದು ದುರುಪಯೋಗವಾಗುವುದು ಖಚಿತ. ಆದರೆ ಕಟುವಾಸ್ತವವೆಂದರೆ ಇದನ್ನು ತಪ್ಪಿಸುವುದು ಅಸಾಧ್ಯವಾಗಿದೆ. ಆದರೆ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡರೆ ಅದನ್ನು ಕಡಿಮೆ ಮಾಡಬಹುದು. ಇಂದಿನ ಸೈಬರ್​ ಲೋಕದಲ್ಲಿ ವೈಯಕ್ತಿಕ ಮಾಹಿತಿ, ಖಾಸಗಿತನ, ಗೌಪ್ಯತೆ ಎಂಬುದಕ್ಕೆ ಬೆಲೆಯಿಲ್ಲವಾಗಿದೆ. ಆ ಅಮೂಲ್ಯ ಸಂಗತಿಗಳು ನಿಮ್ಮ ಕೈತಪ್ಪಿವೆ. ಡಿಜಿಟಲ್​ ಪ್ರಪಂಚದಿಂದ ಅವೆಲ್ಲಾ ಕಣ್ಮರೆಯಾಗಿದೆ. ಜಾಹೀರಾತುದಾರರು ಸೇರಿದಂತೆ ಸೈಬರ್ ವಂಚಕರು ಖಂಡಿತವಾಗಿಯೂ ನಿಮ್ಮ ಬಗ್ಗೆ ಎಲ್ಲವನ್ನೂ ನಿಮಗಿಂತಲೂ ಚೆನ್ನಾಗಿ ವ್ಯಾಖ್ಯಾನಿಸುತ್ತಾರೆ/ತಿಳಿದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ವೇದ್ಯವಾಗಿದೆ. ನಿಮ್ಮ ಮೊಬೈಲ್​ ಫೋನ್‌ ಎಂಬುದು ಮೈಕ್ರೊಫೋನ್ ಆಗಿಬಿಟ್ಟಿದೆ. ನೀವಾಗಿಯೇ ನಿಮ್ಮ ಬಗ್ಗೆ ಅಷ್ಟೂ ಮಾಹಿತಿಯನ್ನೂ ನಿಮಗೆ ಅರಿವಿಲ್ಲದಂತೆ ಹಂಚುತ್ತಿದ್ದೀರಿ. ಸೈಬರ್ ಆಟಗಾರರು ನಿಮ್ಮ ಪ್ರತಿಯೊಂದು ಗೊಣಗಾಟವನ್ನು ಸಕ್ರಿಯವಾಗಿ ದಾಖಲಿಸುತ್ತಿದ್ದಾರೆ, ಆಲಿಸುತ್ತಿದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳಿ. ನೀವು ನೀಡುವ ಮಾಹಿತಿಯನ್ನು ನಿಖರವಾಗಿ ಅರ್ಥೈಸಿಕೊಂಡು ಜಾಹೀರಾತುಗಳನ್ನು ಒದಗಿಸುತ್ತಾರೆ. ಗ್ರಾಹಕ ದೇವರಿಗೆ ಸಮಾನ ಎಂದಿದ್ದ ಮಹಾತ್ಮ ಗಾಂಧಿಯ ನಾಡಿನಲ್ಲಿ ಅಸಲಿಗೆ ಸೈಬರ್​ ಗ್ರಾಹಕನಿಗೆ ಯಾಕಾಗಿ ಇಂತಹ ದುಃಸ್ಥಿತಿ? ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ? ಗಮನಿಸಿ, ಡೇಟಾ ಮೈನಿಂಗ್ ಎಂದು ಕರೆಯಲ್ಪಡುವ ಕಾರ್ಯದಲ್ಲಿ ಡಿಜಿಟಲ್​ ಬಳಕೆ ವೇಳೆ ಕ್ಷಣ ಕ್ಷಣದ ನಿಮ್ಮ ಪ್ರತಿಯೊಂದು ಚಟುವಟಿಕೆಯಿಂದಲೂ ಆಮೂಲಾಗ್ರವಾಗಿ, ಅಪಾರ ಪ್ರಮಾಣದ, ಅನಾಮಧೇಯ ಡೇಟಾವನ್ನು ಡಿಜಿಟಲ್​ ರೂಪದಲ್ಲಿ ಕ್ಷಣಾರ್ಧದಲ್ಲಿ ಸಂಗ್ರಹಿಸುವ...

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು