HMD Arrow: ಇನ್ಮುಂದೆ ನೋಕಿಯಾ ಫೋನ್ ಬರಲ್ಲ: ಭಾರತದಲ್ಲಿ HMD ಕಂಪನಿಯ ಚೊಚ್ಚಲ ಫೋನ್ ಬಿಡುಗಡೆಗೆ ತಯಾರಿ
HMD ಇತ್ತೀಚೆಗೆ #HMDNameOurSmartphone ಸ್ಪರ್ಧೆಯನ್ನು ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ, ಜನರು HMD ಯ ಹೊಸ ಸ್ಮಾರ್ಟ್‌ಫೋನ್‌ನ ಹೆಸರನ್ನು ಸೂಚಿಸಬೇಕಾಗಿತ್ತು. ಮುಂಬರುವ ಹ್ಯಾಂಡ್‌ಸೆಟ್‌ಗಾಗಿ ಭಾರತೀಯ ಬಳಕೆದಾರರು ಕಂಪನಿಗೆ ಹಲವು ಹೆಸರುಗಳನ್ನು ತಿಳಿಸಿದ್ದಾರೆ.
ಎಲ್ಲೆಲ್ಲೂ ನೋಕಿಯಾ ಫೋನ್‌ಗಳ ಬಗ್ಗೆಯೇ ಮಾತನಾಡುತ್ತಿದ್ದ ಕಾಲವೊಂದಿತ್ತು. ಆದರೆ ಸ್ಮಾರ್ಟ್‌ಫೋನ್‌ಗಳು ಬರಲು ಆರಂಭಿಸಿದಾಗಿನಿಂದ, ನೋಕಿಯಾ ಕ್ರೇಜ್ ಕ್ರಮೇಣ ಕೊನೆಗೊಂಡಿತು. ಒಂದು ಕಾಲದಲ್ಲಿ ವಿಶ್ವದ ಫೋನ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಅಳಿವಿನಂಚಿನಲ್ಲಿದೆ. ಇನ್ನು ಮುಂದೆ ನೋಕಿಯಾ ಹೆಸರಿನಲ್ಲಿ ಯಾವುದೇ ಹೊಸ ಸ್ಮಾರ್ಟ್‌ಫೋನ್‌ಗಳು ಬರುವುದಿಲ್ಲ. ಬದಲಾಗಿ ಎಚ್‌ಎಂಡಿ ಬ್ರಾಂಡ್‌ನೊಂದಿಗೆ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಭಾರತದ ಮೊದಲ HMD ಬ್ರಾಂಡ್ ಫೋನ್ ಅನ್ನು ಸಹ ಘೋಷಿಸಲಾಗಿದೆ, ಅದರ ಹೆಸರು HMD ಆ್ಯರೋ (HMD Arrow).
HMD ಇತ್ತೀಚೆಗೆ #HMDNameOurSmartphone ಸ್ಪರ್ಧೆಯನ್ನು ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ, ಜನರು HMD ಯ ಹೊಸ ಸ್ಮಾರ್ಟ್‌ಫೋನ್‌ನ ಹೆಸರನ್ನು ಸೂಚಿಸಬೇಕಾಗಿತ್ತು. ಮುಂಬರುವ ಹ್ಯಾಂಡ್‌ಸೆಟ್‌ಗಾಗಿ ಭಾರತೀಯ ಬಳಕೆದಾರರು ಕಂಪನಿಗೆ ಹಲವು ಹೆಸರುಗಳನ್ನು ತಿಳಿಸಿದ್ದಾರೆ. ಅಂತಿಮವಾಗಿ, ಕಂಪನಿಯು ತನ್ನ ಮೊದಲ ಫೋನ್‌ಗೆ ಆ್ಯರೋ ಎಂಬ ಹೆಸರನ್ನು ಆಯ್ಕೆ ಮಾಡಿದೆ.
ವಿದೇಶದಲ್ಲಿ ಗೂಗಲ್ ಪೇ, ಫೋನ್ ಪೇ ಬಳಕೆ ಹೇಗೆ?: ಸೆಟ್ಟಿಂಗ್ಸ್ನಲ್ಲಿ ಏನು ಬದಲಾವಣೆ ಮಾಡಬೇಕು?
HMD ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸ್ಮಾರ್ಟ್‌ಫೋನ್‌ನ ಹೆಸರನ್ನು ಬಹಿರಂಗಪಡಿಸಿದೆ. ಕಂಪನಿಯು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ವಿಶೇಷ ಕಾರ್ಯತಂತ್ರವನ್ನು ಕೂಡ ರೂಪಿಸುತ್ತಿದೆ. ಅಂದರೆ ವಿವಿಧ ದೇಶಗಳಿಗೆ ವಿಭಿನ್ನ ಹೆಸರುಗಳಲ್ಲಿ ಫೋನ್ ಅನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, HMD ಆ್ಯರೋ ಹೆಸರಿನಲ್ಲಿ ಬಿಡುಗಡೆ ಮಾಡಲಿರುವ ಫೋನ್, HMD ಪಲ್ಸ್ ಹೆಸರಿನಲ್ಲಿ ಯುರೋಪ್‌ನಲ್ಲಿ ಮಾರಾಟವಾಗಿದೆ. ಪಲ್ಸ್ ಫೋನಿನಲ್ಲಿರುವ ಅದೇ ಫೀಚರ್ಸ್ ಭಾರತಕ್ಕೂ ಬರಲಿದೆ. HMD ಆ್ಯರೋ ಹೆಸರು ಭಾರತೀಯ ಮಾರುಕಟ್ಟೆಗೆ ಮಾತ್ರ. ಈಗ ಆ್ಯರೋ ಹೆಸರಿನ ಸ್ಮಾರ್ಟ್ ಫೋನ್ ಕಂಪನಿಗೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮಾರುಕಟ್ಟೆಗೆ ಬಂತು ಹೊಸ ಮೋಟೋ G Stylus 5G 2024 ಸ್ಮಾರ್ಟ್‌ಫೋನ್: ಬೆಲೆ ಎಷ್ಟು?
HMD ಆ್ಯರೋ ಸ್ಮಾರ್ಟ್‌ಫೋನ್ 6.65 ಇಂಚಿನ 90Hz IPS ಡಿಸ್ಪ್ಲೇಯೊಂದಿಗೆ ಬಿಡುಗಡೆ ಆಗಬಹುದು. ಇದು Unisoc T606 ಪ್ರೊಸೆಸರ್ ಮತ್ತು ಸಿಂಗಲ್ OIS ಕ್ಯಾಮೆರಾ ಸೆಟಪ್‌ನ ಶಕ್ತಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 5000mAh ಬ್ಯಾಟರಿ ಮತ್ತು 10W ಚಾರ್ಜಿಂಗ್‌ನೊಂದಿಗೆ 13MP ಸೆಲ್ಫೀ ಕ್ಯಾಮೆರಾದೊಂದಿಗೆ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿರಬಹುದು. ಈ ಫೋನಿನ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ