ಇಂದಿನ ಟೆಕ್ ಯುಗದಲ್ಲಿ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಸ್ಮಾರ್ಟ್‌ಫೋನ್ (Smartphone) ಬೇಕೇ ಬೇಕು. ಇದು ಇಲ್ಲದೆ ಯೋಚಿಸಲೂ ಸಾಧ್ಯವಿಲ್ಲ. ಕೆಲಸಕ್ಕಾಗಿ ಅಥವಾ ಮನರಂಜನೆಗಾಗಿ, ನಾವು ಇಡೀ ದಿನ ಸ್ಮಾರ್ಟ್‌ಫೋನ್ ಬಳಸುತ್ತೇವೆ. ಆದರೆ, ಈ ಸ್ಮಾರ್ಟ್‌ಫೋನ್‌ನಲ್ಲಿ ಅನೇಕರಿಗೆ ತಿಳಿದಿಲ್ಲದ ಹಲವು ವಿಷಯಗಳಿವೆ. ಮೊಬೈಲ್ ಫೋನ್‌ನಲ್ಲಿ ಜನರಿಗೆ ತಿಳಿದಿಲ್ಲದ ಹಲವಾರು ಭಾಗಗಳಿವೆ. ಅವುಗಳಲ್ಲಿ ಒಂದು ಫೋನ್‌ನ ಬ್ಯಾಕ್ ಕ್ಯಾಮೆರಾ ಸೆಟಪ್‌ನ ಸಮೀಪವಿರುವ ಸಣ್ಣ ರಂಧ್ರ ಕೂಡ ಒಂದು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್ಫೋನ್ಗಳ ಕ್ಯಾಮೆರಾ ಬಳಿ ಈ ಹೋಲ್ ಅನ್ನು ನೀವು ಕಾಣಬಹುದು. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನ ಹಿಂದಿನ ಕ್ಯಾಮೆರಾದ ಪಕ್ಕದಲ್ಲೇ ಈ ರಂಧ್ರವಿರುತ್ತದೆ. ಈ ರಂಧ್ರವು ವಿಭಿನ್ನ ಮಾದರಿಗಳಲ್ಲಿ ಚಿಕ್ಕದಾಗಿ ಅಥವಾ ದೊಡ್ಡದಾಗಿರುತ್ತದೆ. ಅಷ್ಟಕ್ಕೂ ಕಂಪನಿಯು ಈ ರಂಧ್ರವನ್ನು ಏಕೆ ನೀಡಿದೆ? ಮತ್ತು ಇದು ಏನು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?. ಇದನ್ನು ಕೇವಲ ಡಿಸೈನ್ಗಾಗಿ ಬಳಸಲಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಇದು ನಿಜ ಅಲ್ಲ. ಈ ಹೋಲ್ ನೀಡಿರುವುದಕ್ಕೆ ಕಾರಣವಿದೆ.
ಟೆಕ್ನೋದಿಂದ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್ ಟೆಕ್ನೋ ಪಾಪ್ 8 ಬಿಡುಗಡೆ: ಬೆಲೆ ಎಷ್ಟು?
ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿರುವ ಈ ಸಣ್ಣ ರಂಧ್ರವನ್ನು ನಾಯ್ಸ್ ಕ್ಯಾನ್ಸಲೇಷನ್ಗೆ ನೀಡಲಾಗಿದೆ. ಅಂದರೆ ಇದು ಹೊರಗಿನ ಶಬ್ದವನ್ನು ಕಡಿಮೆ ಮಾಡುತ್ತದೆ. ಇದೊಂದು ಮೈಕ್ರೊಫೋನ್ ಆಗಿದೆ. ಸುಲಭವಾಗಿ ಹೇಳಬೇಕೆಂದರೆ, ನೀವು ಸ್ಮಾರ್ಟ್‌ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುವಾಗ, ಈ ಮೈಕ್ರೊಫೋನ್ ನಿಮ್ಮ ಸುತ್ತಲಿನ ಶಬ್ದವನ್ನು ಕಡಿಮೆ ಮಾಡಿ ನೀವು ಮಾತನಾಡುವುದನ್ನು ಮಾತ್ರ ಸೆರೆಹಿಡಿಯುತ್ತದೆ. ಇದರರ್ಥ ನೀವು ಫೋನ್‌ನಲ್ಲಿ ಇನ್ನೊಬ್ಬರೊಂದಿಗೆ ಮಾತನಾಡುವಾಗ, ನಿಮ್ಮ ಧ್ವನಿ ಸ್ಪಷ್ಟವಾಗಿ ಇನ್ನೊಬ್ಬ ವ್ಯಕ್ತಿಗೆ ಕೇಳಿಸುತ್ತದೆ.
ನೀವು ಚಾರ್ಜರ್ ಪಾಯಿಂಟ್ ಇರುವ ಸ್ಮಾರ್ಟ್‌ಫೋನ್‌ನ ಕೆಳಭಾಗದಲ್ಲಿ ಮೈಕ್ರೊಫೋನ್ ಕಾಣಬಹುದು. ಅದರ ಮೂಲಕ ಈ ಸಣ್ಣ ರಂಧ್ರ ನಿಮ್ಮ ಸ್ಪಷ್ಟ ಧ್ವನಿಯು ಫೋನ್‌ನ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗೆ ತಲುಪಿಸುತ್ತದೆ. ಹಿಂಬದಿಯಲ್ಲಿರುವ ಈ ಹೋಲ್ ಹೊರಗಿನ ಶಬ್ದವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂದು ಬಿಡುಗಡೆ ಆಗುವ ಹೆಚ್ಚಿನ ಪ್ರಮುಖ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನೋಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ