Flipkart Diwali sale 2023: 14,900 ರೂ.: ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ನಲ್ಲಿ ಐಫೋನ್ 14 ಗೆ ಬಂಪರ್ ಡಿಸ್ಕೌಂಟ್
iPhone 14 Offer, Flipkart: ನೀವು ಐಫೋನ್ 14 ಮೇಲೆ ಕಣ್ಣಿಟ್ಟಿದ್ದರೆ ಇದೇ ಸರಿಯಾದ ಸಮಯ ಎನ್ನಬಹುದು. ಯಾಕೆಂದರೆ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ನಲ್ಲಿ ಐಫೋನ್ 14 ಕಡಿಮೆ ಬೆಲೆಗೆ ಲಭ್ಯವಿದೆ. ಜೊತೆಗೆ ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು.
ಹಬ್ಬದ ಸೀಸನ್ ಶುರುವಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್ ಆರಂಭವಾಗಿದ್ದು, ಅನೇಕ ಪ್ರಾಡಕ್ಟ್ಗಳಿಗೆ ಆಕರ್ಷಕ ರಿಯಾಯಿತಿ ಘೋಷಣೆ ಮಾಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈಗಾಗಲೇ ಬಿಗ್ ದೀಪಾವಳಿ ಸೇಲ್ (Flipkart Diwali sale 2023) ಲೈವ್ ಆಗಿದೆ. ಇದರಲ್ಲಿ ಸ್ಮಾರ್ಟ್ಫೋನ್ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಮುಖ್ಯವಾಗಿ ನೀವು ಐಫೋನ್ 14 ಮೇಲೆ ಕಣ್ಣಿಟ್ಟಿದ್ದರೆ ಇದೇ ಸರಿಯಾದ ಸಮಯ ಎನ್ನಬಹುದು. ಪ್ಲಾಟ್‌ಫಾರ್ಮ್‌ನಲ್ಲಿ ಐಫೋನ್ 14 ಕಡಿಮೆ ಬೆಲೆಗೆ ಲಭ್ಯವಿದೆ. ಜೊತೆಗೆ ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು. ಐಫೋನ್ 14 ಕುರಿತ ಮಾಹಿತಿ ಇಲ್ಲಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಆಫರ್:
ಐಫೋನ್ 14, 128GB ರೂಪಾಂತರವು ಫ್ಲಿಪ್‌ಕಾರ್ಟ್‌ನಲ್ಲಿ 14,901 ರೂ. ಗಳ ಫ್ಲಾಟ್ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 54,999 ರೂ. ಗೆ ಮಾರಾಟವಾಗುತ್ತಿದೆ. ಇದರ ಮೂಲ ಬೆಲೆ 69,900 ರೂ. ಆಗಿದೆ. ಇದಲ್ಲದೆ, ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ. SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 1,000 ರೂ. ವರೆಗೆ 10 ಪ್ರತಿಶತ ತ್ವರಿತ ರಿಯಾಯಿತಿ ಇದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಕೂಡ ಇದೆ. ಇದರ ಜೊತೆಗೆ, ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇನ್ನೂ ಕಡಿಮೆ ಬೆಲೆಯಲ್ಲಿ ಐಫೋನ್ 14 ಅನ್ನು ಪಡೆಯಬಹುದು. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿದೆ, ಹೆಚ್ಚಿನ ಡಿಸ್ಕೌಂಟ್ ನೀಡಲಾಗುತ್ತದೆ.
ಸ್ಪೀಡ್ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಕಂಡುಹಿಡಿದ ಸವಾರರು: ಸಿಕ್ಕಿ ಬಿದ್ದರೆ…
ಐಫೋನ್ 14 ಫೀಚರ್ಸ್:
ಐಫೋನ್ 14 ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಐಫೋನ್ 14 ಜೊತೆಗೆ ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಅನಾವರಣಗೊಂಡಿತ್ತು. ಐಫೋನ್ 14 ಮತ್ತು 2021 ರ ಐಫೋನ್ 13 ಸಾಮಾನ್ಯ ಒಂದೇ ಮಾದರಿಯಲ್ಲಿದ್ದರೂ, ಉತ್ತಮ ಪ್ರೊಸೆಸರ್ ಮತ್ತು ಡೈನಾಮಿಕ್ ಐಲ್ಯಾಂಡ್ ನಾಚ್ ವಿನ್ಯಾಸದಂತಹ ಕೆಲವು ಗಮನಾರ್ಹ ಬದಲಾವಣೆಗಳನ್ನು ಹೊಂದಿವೆ. ಅದೇ ಡೈನಾಮಿಕ್ ಐಲ್ಯಾಂಡ್ ನಾಚ್ ಈಗ ಎಲ್ಲಾ ಐಫೋನ್ 15 ಮಾದರಿಗಳಲ್ಲಿ ಲಭ್ಯವಿದೆ.
ಐಫೋನ್ 13 ಗೆ ಹೋಲಿಸಿದರೆ ಐಫೋನ್ 14 ಕ್ಯಾಮೆರಾದಲ್ಲಿ ಕೆಲವು ಸುಧಾರಣೆಗಳನ್ನು ಮಾಡಲಾಗಿದೆ. ಉದಾಹರಣೆಗೆ, ಕಡಿಮೆ-ಬೆಳಕಿನ ಛಾಯಾಗ್ರಹಣಕ್ಕಾಗಿ ಕ್ಯಾಮೆರಾದಲ್ಲಿ ಫೋಟೋನಿಕ್ ಎಂಜಿನ್ ಅನ್ನು ಅಳವಡಿಸಿರುವ ಕಾರಣದಿಂದಾಗಿ ಅದ್ಭುತ ಫೋಟೋ ಬರುತ್ತದೆ. ಮುಂಭಾಗದ ಕ್ಯಾಮೆರಾ, ಐಫೋನ್ 13 ಮತ್ತು ಐಫೋನ್ 14 ಎರಡೂ 12 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಹೊಂದಿದೆ. ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಐಫೋನ್ 13 2.2 ದ್ಯುತಿರಂಧ್ರ ಹೊಂದಿದ್ದರೆ ಐಫೋನ್ 14 1.9 ದ್ಯುತಿರಂಧ್ರವನ್ನು ಹೊಂದಿದೆ. ಇದು ಹೊಸ ಫೋನ್‌ಗೆ ಹೆಚ್ಚು ಬೆಳಕನ್ನು ನೀಡಲು ಸಹಾಯ ಮಾಡುತ್ತದೆ. ಐಫೋನ್ 14 ತನ್ನ ಮುಂಭಾಗದ ಕ್ಯಾಮೆರಾದಲ್ಲಿ ಮೊದಲ ಬಾರಿಗೆ ಅಟೋ-ಫೋಕಸ್ ವೈಶಿಷ್ಟ್ಯವನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Thu, 2 November 23