ಸ್ಪೀಡ್ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಕಂಡುಹಿಡಿದ ಸವಾರರು: ಸಿಕ್ಕಿ ಬಿದ್ದರೆ…

Trick to avoid traffic challan: ಸ್ಪೀಡ್ ಕ್ಯಾಮೆರಾಗಳು ಇರುವುದು ಜನರು ರಸ್ತೆಯಲ್ಲಿ ನಿಗದಿತ ವೇಗದ ಮಿತಿಯಲ್ಲಿ ವಾಹನ ಚಲಾಯಿಸಲಿ, ಇದರಿಂದ ರಸ್ತೆ ಅಪಘಾತಗಳು ಕಡಿಮೆಯಾಗಲಿ ಎಂದು. ಆದರೆ ಜನರು ಇದನ್ನು ಅರಿಯದೆ, ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದಾರೆ, ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಜನರು ಸ್ಪೀಡ್ ಕ್ಯಾಮೆರಾಗಳಿಂದ ಪಾರಾಗಲು ಮತ್ತು ಚಲನ್ ತಪ್ಪಿಸಲು ಹೊಸ ತಂತ್ರವನ್ನು ಕಂಡುಹಿಡಿದಿದ್ದಾರೆ.

ಸ್ಪೀಡ್ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಹೊಸ ಟ್ರಿಕ್ ಕಂಡುಹಿಡಿದ ಸವಾರರು: ಸಿಕ್ಕಿ ಬಿದ್ದರೆ...
ಸಾಂದರ್ಭಿಕ ಚಿತ್ರ
Follow us
|

Updated on: Oct 30, 2023 | 2:34 PM

ಅತಿ ವೇಗದಿಂದ ವಾಹನ ಚಲಾವನೆ ಮಾಡಿ ಪ್ರತಿ ವರ್ಷ ರಸ್ತೆ ಅಪಘಾತಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಅನಾಹುತಗಳನ್ನು ತಡೆಯಲು ಸಂಚಾರ ಪೊಲೀಸರು ಅತಿ ವೇಗದ ಚಾಲನೆಯ ಮೇಲೆ ನಿಗಾವಹಿಸಲು ಅನೇಕ ನಿಯಮ ಕೈಗೊಂಡಿದ್ದಾರೆ. ಇದರಲ್ಲಿ ಸ್ಪೀಡ್ ಕ್ಯಾಮೆರಾ (Speed Camera) ಕೂಡ ಒಂದು. ಅತಿ ವೇಗವನ್ನು ತಡೆಯಲು ಪೊಲೀಸರು ರಸ್ತೆಗಳಲ್ಲಿ ಓವರ್ ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಆದರೆ, ಕೆಲವರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿ ಕೊಳ್ಳಲು ಕಳ್ಳ ದಾರಿಯನ್ನು ಕಂಡುಹಿಡಿಯುತ್ತಾರೆ. ಇದೀಗ ಸವಾರರು ಸ್ಪೀಡ್ ಕ್ಯಾಮೆರಾದಿಂದ ತಪ್ಪಿಸಲು ಹೊಸ ಟ್ರಿಕ್ ಪ್ರಯೋಗಿಸುತ್ತಿದ್ದಾರೆ.

ಸ್ಪೀಡ್ ಕ್ಯಾಮೆರಾಗಳು ಇರುವುದು ಜನರು ರಸ್ತೆಯಲ್ಲಿ ನಿಗದಿತ ವೇಗದ ಮಿತಿಯಲ್ಲಿ ವಾಹನ ಚಲಾಯಿಸಲಿ, ಇದರಿಂದ ರಸ್ತೆ ಅಪಘಾತಗಳು ಕಡಿಮೆಯಾಗಲಿ ಎಂದು. ಆದರೆ ಜನರು ಇದನ್ನು ಅರಿಯದೆ, ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದಾರೆ, ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಜನರು ಸ್ಪೀಡ್ ಕ್ಯಾಮೆರಾಗಳಿಂದ ಪಾರಾಗಲು ಮತ್ತು ಚಲನ್ ತಪ್ಪಿಸಲು ಹೊಸ ತಂತ್ರವನ್ನು ಕಂಡುಹಿಡಿದಿದ್ದಾರೆ. ಇದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಬಹುನಿರೀಕ್ಷಿತ ಲಾವಾ ಬ್ಲೇಜಾ 2 5G ಬಿಡುಗಡೆ ದಿನಾಂಕ ಘೋಷಣೆ: ಏನಿದೆ ಫೀಚರ್ಸ್

ಇದನ್ನೂ ಓದಿ
Image
ಏನಿದು ಸಿಮ್ ಸ್ವಾಪ್?: ಒಂದು ಸಣ್ಣ ತಪ್ಪಿನಿಂದ ಬ್ಯಾಂಕ್ ಖಾತೆ ಖಾಲಿಯಾಗಬಹುದು
Image
2,599 ರೂ.: ವಾಟ್ಸ್​ಆ್ಯಪ್, ಯೂಟ್ಯೂಬ್ ಇರುವ ಜಿಯೋ ಪ್ರೈಮಾ 4G ಫೋನ್ ರಿಲೀಸ್
Image
ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆದರೆ ಏನು ಮಾಡಬೇಕು?: ಇಲ್ಲಿದೆ ಟ್ರಿಕ್
Image
ಫ್ಲಿಪ್​ಕಾರ್ಟ್ ದಸರಾ ಸೇಲ್: ಈ ​ಫೋನ್​ಗಳು ಇದಕ್ಕಿಂತ ಕಡಿಮೆ ಬೆಲೆಗೆ ಸಿಗಲ್ಲ

ಚಲನ್ ತಪ್ಪಿಸಲು ಈ ತಂತ್ರ

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಕಾರಿನ ನಂಬರ್ ಪ್ಲೇಟ್‌ಗಳಲ್ಲಿ ಪ್ರತಿಫಲಿತ ಟೇಪ್‌ ಅಂಟಿಸಿರುತ್ತಾರೆ. ಹೀಗಿದ್ದಾಗ ಈ ಟೇಪ್ ಅನ್ನು ಸ್ಕ್ಯಾನ್ ಮಾಡಲು ಸ್ಪೀಡ್ ಕ್ಯಾಮೆರಾಗೆ ಸಾಧ್ಯವಾಗುತ್ತಿಲ್ಲ. ಸ್ಪೀಡ್ ಕ್ಯಾಮೆರಾ ಫೋಟೋವನ್ನು ಕ್ಲಿಕ್ ಮಾಡಿದಾಗ ನಂಬರ್ ಪ್ಲೇಟ್ ಸರಿಯಾಗಿ ಸ್ಕ್ಯಾನ್ ಆಗುವುದಿಲ್ಲ. ರಿಫ್ಲೆಕ್ಟಿವ್ ಟೇಪ್ ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರು ಸಿಗುತ್ತದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ 200-300 ರೂ. ಗಳಿಗೆ ಖರೀದಿಸಬಹುದು. ಇದೀಗ ಈ ದಂಧೆಯ ಬಗ್ಗೆ ಸಂಚಾರ ಪೊಲೀಸರು ಅಲರ್ಟ್ ಆಗಿದ್ದಾರೆ. ಈ ರೀತಿ ಮಾಡುತ್ತಿದ್ದವರನ್ನು ಹಿಡಿದು ವಿಚಾರಣೆ ನಡೆಸಲಾಗುತ್ತಿದೆ.

ನಿಯಮದಲ್ಲಿ ಏನಿದೆ?:

ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1990 ರ 50 ಮತ್ತು 51 ರಲ್ಲಿ ನಂಬರ್ ಪ್ಲೇಟ್‌ಗಳಿಗೆ ಹಲವು ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ವಾಹನದ ನಂಬರ್ ಪ್ಲೇಟ್ ಅನ್ನು ಟ್ಯಾಂಪರ್ ಮಾಡುವಂತಿಲ್ಲ. ಆರ್‌ಟಿಒದಿಂದ ನಿಮಗೆ ನೀಡಿರುವ ನಂಬರ್ ಪ್ಲೇಟ್ ಅನ್ನೇ ಬಳಸಬೇಕು. ಯಾರಾದರೂ ಈ ನಿಯಮಗಳನ್ನು ಪಾಲಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದಲ್ಲದೆ, 5,000 ರೂ. ವರೆಗೆ ದಂಡವನ್ನು ವಿಧಿಸಬಹುದು.

ಇನ್ನು ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ ಅಳವಡಿಕೆಗೆ 2023ರ ನವೆಂಬರ್ 17 ಕೊನೆಯ ದಿನವಾಗಿದೆ. ಏಪ್ರಿಲ್​ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ಆದಷ್ಟು ಬೇಗ ಹೆಚ್​ಎಸ್​ಆರ್​​ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದವರಿಗೆ ಸಾರಿಗೆ ಇಲಾಖೆ ದಂಡ ವಿಧಿಸಲಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ