ಏನಿದು ಸಿಮ್ ಸ್ವಾಪ್ ಸ್ಕ್ಯಾಮ್?: ಒಂದು ಸಣ್ಣ ತಪ್ಪು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು

SIM Card Swap Fraud: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಆದರೆ, ಇದುವೇ ಇಂದು ಮನುಷ್ಯನ ಜೀವನಕ್ಕೆ ಸಂಕಷ್ಟ ತಂದೊಡ್ಡಿದೆ. ಸಿಮ್ ಕಾರ್ಡ್ ಮೂಲಕ ದೊಡ್ಡ ಕ್ರೈಮ್ ನಡೆಯುತ್ತಿದೆ. ವಂಚಕರು ಸಿಮ್ ವಿನಿಮಯದ ವಿಧಾನವನ್ನು ಕಂಡುಹಿಡಿದಿದ್ದಾರೆ.

ಏನಿದು ಸಿಮ್ ಸ್ವಾಪ್ ಸ್ಕ್ಯಾಮ್?: ಒಂದು ಸಣ್ಣ ತಪ್ಪು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು
Sim Swapping
Follow us
Vinay Bhat
|

Updated on: Oct 30, 2023 | 1:09 PM

ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಗಳು (Cyber Crime) ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಯಾವ ತಂತ್ರಜ್ಞಾನವು ಮನುಷ್ಯನ ಜೀವನವನ್ನು ಸುಲಭಗೊಳಿಸಿದೆಯೋ, ಅದೇ ತಂತ್ರಜ್ಞಾನ ಇಂದು ಕಂಟಕವಾಗಿ ಪರಿಣಮಿಸುತ್ತಿದೆ. ಸೈಬರ್ ಅಪರಾಧಿಗಳು ವಿವಿಧ ಮಾರ್ಗಗಳನ್ನು ಕಂಡುಹಿಡಿದು ಅಮಾಯಕರ ಹಣವನ್ನು ದೋಚುತ್ತಿದ್ದಾರೆ. ಸದ್ಯ ಸೈಬರ್ ಕಳ್ಳರು ಇದಕ್ಕಾಗಿ ಹೊಸ ಮಾರ್ಗವನ್ನು ಸೃಷ್ಟಿಸಿದ್ದಾರೆ. ಅದುವೇ ಸಿಮ್ ಸ್ವಾಪ್. ಸಿಮ್ ಸ್ವಾಪ್ ಹೆಸರಿನಲ್ಲಿ ಅಮಾಯಕರ ಖಾತೆಗಳಲ್ಲಿರುವ ಹಣವನ್ನು ದೋಚುತ್ತಿದ್ದಾರೆ. ಹಾಗಾದರೆ ಏನಿದು ಸಿಮ್ ಸ್ವಾಪ್?, ಇದರಿಂದ ಎಚ್ಚರವಾಗಿರುವುದು ಹೇಗೆ?.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಆದರೆ, ಇದುವೇ ಇಂದು ಮನುಷ್ಯನ ಜೀವನಕ್ಕೆ ಸಂಕಷ್ಟ ತಂದೊಡ್ಡಿದೆ. ಸಿಮ್ ಕಾರ್ಡ್ ಮೂಲಕ ದೊಡ್ಡ ಕ್ರೈಮ್ ನಡೆಯುತ್ತಿದೆ. ವಂಚಕರು ಸಿಮ್ ವಿನಿಮಯದ ವಿಧಾನವನ್ನು ಕಂಡುಹಿಡಿದಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಂಚನೆಯು ಕ್ಷಣಾರ್ಧದಲ್ಲಿ ನಡೆಯುತ್ತದೆ. ಸಿಮ್ ಕಾರ್ಡ್ ಬದಲಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿರುವ ಪ್ರಕರಣಗಳು ಭಾರತದಲ್ಲಿ ಸಾಕಷ್ಟು ನಡೆಯುತ್ತಿದೆ.

 ಸ್ವಿಮ್ ಸ್ವಾಪ್ ಎಂದರೇನು?

ಸೈಬರ್ ಅಪರಾಧಿಗಳು ಬಳಕೆದಾರರ ಮೊಬೈಲ್ ಸಂಖ್ಯೆಯ ಮಾಹಿತಿಯನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಸಂಗ್ರಹಿಸುತ್ತಿದ್ದಾರೆ. ನೀವು ಯಾವ ವಿವರಗಳೊಂದಿಗೆ ಸಿಮ್ ಕಾರ್ಡ್ ತೆಗೆದುಕೊಂಡಿದ್ದೀರಿ?, ಸಿಮ್ ಕಾರ್ಡ್ ಯಾರ ಹೆಸರಿನಲ್ಲಿದೆ? ಮುಂತಾದ ವಿವರಗಳನ್ನು ಸಂಗ್ರಹಿಸುತ್ತಾರೆ. ನಂತರ ಅವರು ನಿಮ್ಮ ಹೆಸರಿನಲ್ಲಿ ಮಾತನಾಡಿ, ಸೂಕ್ತ ವಿವರಗಳನ್ನು ನೀಡಿ ಟೆಲಿಕಾಂ ಕಂಪನಿಗೆ ವಿಶ್ವಾಸ ಮೂಡಿಸುತ್ತಾರೆ. ಈ ಮೂಲಕ ಅವರು ಹೊಸ ಸಿಮ್ ಅನ್ನು ಪಡೆಯುತ್ತಾರೆ. ಇದಕ್ಕಾಗಿ ಬಳಕೆದಾರರ ನಕಲಿ ಐಡಿ ಸೃಷ್ಟಿಸಲಾಗುತ್ತಿದೆ.

ಇದನ್ನೂ ಓದಿ
Image
2,599 ರೂ.: ವಾಟ್ಸ್​ಆ್ಯಪ್, ಯೂಟ್ಯೂಬ್ ಇರುವ ಜಿಯೋ ಪ್ರೈಮಾ 4G ಫೋನ್ ರಿಲೀಸ್
Image
ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆದರೆ ಏನು ಮಾಡಬೇಕು?: ಇಲ್ಲಿದೆ ಟ್ರಿಕ್
Image
ಫ್ಲಿಪ್​ಕಾರ್ಟ್ ದಸರಾ ಸೇಲ್: ಈ ​ಫೋನ್​ಗಳು ಇದಕ್ಕಿಂತ ಕಡಿಮೆ ಬೆಲೆಗೆ ಸಿಗಲ್ಲ
Image
ಬಹುನಿರೀಕ್ಷಿತ ಲಾವಾ ಬ್ಲೇಜಾ 2 5G ಬಿಡುಗಡೆ ದಿನಾಂಕ ಘೋಷಣೆ: ಏನಿದೆ ಫೀಚರ್ಸ್

15,000 ರೂ. ಒಳಗೆ ಸಿಗುವ ಬೆಸ್ಟ್ 5G ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಹೀಗೆ ಮಾಡುವುದರಿಂದ ಮೊಬೈಲ್ ಬಳಕೆದಾರರ ಸಂಖ್ಯೆ ಅವರಿಗೆ ತಿಳಿಯದಂತೆ ನಿಷ್ಕ್ರಿಯಗೊಳ್ಳುತ್ತದೆ. ಈ ವೇಳೆ ನಕಲಿ ಸಿಮ್‌ ಕಾರ್ಡ್‌ ಪಡೆದಿರುವ ಸೈಬರ್‌ ಅಪರಾಧಿಗಳು ಒಟಿಪಿ ಮೂಲಕ ನಿಮ್ಮ ಖಾತೆಯಿಂದ ಹಣ ಕದಿಯುತ್ತಾರೆ. ಇಂತಹ ಅಪರಾಧಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿವೆ. ಮೊನ್ನೆಯಷ್ಟೆ ದೆಹಲಿಯ ಮಹಿಳಾ ವಕೀಲರು ಸಿಮ್ ಸ್ವಾಪ್​ನಿಂದ ಹಣ ಕಳೆದುಕೊಂಡಿದ್ದರು. ಮಹಿಳೆಗೆ ಮೂರು ಬಾರಿ ಕರೆ ಬಂದಿದ್ದು, ಕೆಲ ಸಮಯದ ಬಳಿಕ ಆಕೆಯ ಬ್ಯಾಂಕ್ ಖಾತೆಯಿಂದ ಲಕ್ಷಗಟ್ಟಲೆ ಹಣ ಮಾಯವಾಗಿದೆ. ಮಹಿಳೆ ಕರೆ ಸ್ವೀಕರಿಸಲಿಲ್ಲ ಅಥವಾ ಕಾಲ್ ಕಟ್ ಮಾಡಲಿಲ್ಲ, ಆದರೂ ಅವರು ಹಣ ಕಳೆದುಕೊಂಡಿದ್ದಾರೆ.

ಸಿಮ್ ಸ್ವಾಪ್​ನಿಂದ ಹೇಗೆ ಪಾರಾಗುವುದು?:

  • ನಿಮ್ಮ ಮೊಬೈಲ್‌ಗೆ ಕರೆ ಅಥವಾ ಮೆಸೇಜ್ ಯಾವುದು ಬರುತ್ತಿಲ್ಲ ಎಂದಾದರೆ ಇತರರಿಗೆ ಕರೆ ಮಾಡುವ ಮೂಲಕ ಒಮ್ಮೆ ನಿಮ್ಮ ಸಿಮ್ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
  • ಎಲ್ಲಾದರು ಸಿಮ್ ವಿನಿಮಯಕ್ಕಾಗಿ ಅರ್ಜಿ ಸಲ್ಲಿಸಿದರೆ, ಟೆಲಿಕಾಂ ಕಂಪನಿಗಳಿಂದ ನಿಮ್ಮ ಫೋನ್‌ಗೆ ಸಂದೇಶ ಬರುತ್ತದೆ. ಹಾಗಾಗಿ ಫೋನ್ ನಲ್ಲಿ ಬರುವ ಟೆಕ್ಸ್ಟ್ ಮೆಸೇಜ್ ಗಳನ್ನು ಪರೀಕ್ಷಿಸಿ, ನಿರ್ಲಕ್ಷಿಸದಿರಿ.
  • ನಿಮ್ಮ ಬ್ಯಾಂಕ್ ಖಾತೆಯನ್ನು ಆಗಾಗ ಗಮನಿಸುತ್ತಿರಿ.
  • ನಿಮ್ಮ ಫೋನ್ ಅನ್ನು ಹೆಚ್ಚು ಹೊತ್ತು ಸ್ವಿಚ್ ಆಫ್ ಮಾಡುವುದು ಮತ್ತು ಫ್ಲೈಟ್ ಮೋಡ್‌ನಲ್ಲಿ ಇಡಬೇಡಿ ಎಂದು ತಜ್ಞರು ಹೇಳುತ್ತಾರೆ. ಇದರಿಂದ ನಿಮ್ಮ ಸಿಮ್ ಸ್ವಾಪ್ ಆದರೆ ತಿಳಿಯಲು ಸಾಧ್ಯವಾಗುವುದಿಲ್ಲ.
  • ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಇದರ ಮೂಲಕ ಅವರು ನಿಮ್ಮ ವಿವರಗಳನ್ನು ಕದಿಯಬಹುದು.
  • ಈರೀತಿಯ ಯಾವುದೇ ವಂಚನೆಯ ಸಂದರ್ಭದಲ್ಲಿ, ತಕ್ಷಣವೇ ಸೈಬರ್ ಅಪರಾಧ ಪೋರ್ಟಲ್ (https://cybercrime.gov.in/) ನಲ್ಲಿ ದೂರು ದಾಖಲಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು