Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 2,599 ರೂ.: ವಾಟ್ಸ್​ಆ್ಯಪ್, ಯೂಟ್ಯೂಬ್ ಇರುವ ಜಿಯೋ ಪ್ರೈಮಾ 4G ಫೋನ್ ಬಿಡುಗಡೆ

Jio Prima 4G phone Launched in India: ಭಾರತದಲ್ಲಿ ಜಿಯೋ ಪ್ರೈಮಾ 4G ಬೆಲೆ ಕೇವಲ 2,599 ರೂ.. ವಿಶೇಷವಾಗಿ ಈ ಫೋನ್ 1200 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ವಾಟ್ಸ್​ಆ್ಯಪ್, ಯೂಟ್ಯೂಬ್ ಸೇರಿದಂತೆ ಫೇಸ್​ಬುಕ್, ಗೂಗಲ್ ಮ್ಯಾಪ್ಸ್ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಸಹ ಒಳಗೊಂಡಿದೆ.

ಕೇವಲ 2,599 ರೂ.: ವಾಟ್ಸ್​ಆ್ಯಪ್, ಯೂಟ್ಯೂಬ್ ಇರುವ ಜಿಯೋ ಪ್ರೈಮಾ 4G ಫೋನ್ ಬಿಡುಗಡೆ
Jio Prime 4G phone
Follow us
Vinay Bhat
|

Updated on:Oct 30, 2023 | 12:38 PM

ಪ್ರಸಿದ್ಧ ರಿಲಯನ್ಸ್ ಜಿಯೋ ಕಂಪನಿ ತನ್ನ ಹೊಸ ಫೋನ್ ಜಿಯೋ ಪ್ರೈಮಾ 4G (Jio Prima 4G) ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023 (IMC) ನಲ್ಲಿ ಈ ಹ್ಯಾಂಡ್‌ಸೆಟ್ ಅನ್ನು ಅನಾವರಣ ಮಾಡಿದೆ. ದೀಪಾವಳಿಯ ಸಂದರ್ಣ ಈ ಮೊಬೈಲ್ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಈ ಫೋನ್ ಅನ್ನು ಈಗ ಜಿಯೋ ಮಾರ್ಟ್ ವೆಬ್‌ಸೈಟ್‌ನಲ್ಲಿ ಫೀಚರ್​ಗಳೊಂದಿಗೆ ಪಟ್ಟಿ ಮಾಡಲಾಗಿದೆ. ಜಿಯೋ ಪ್ರೈಮಾ 4G ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ವಾಟ್ಸ್​ಆ್ಯಪ್ ಮತ್ತು ಯೂಟ್ಯೂಬ್​ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಸಪೋರ್ಟ್ ಮಾಡುತ್ತದೆ.

ಜಿಯೋ ಪ್ರೈಮಾ 4G ಫೋನ್ ಬೆಲೆ ಮತ್ತು ಲಭ್ಯತೆ:

ಭಾರತದಲ್ಲಿ ಜಿಯೋ ಪ್ರೈಮಾ 4G ಬೆಲೆ ಕೇವಲ 2,599 ರೂ.. ಇದು ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಜಿಯೋ ಮಾರ್ಟ್​ನಲ್ಲಿ ಮಾರಾಟ ಕಾಣಲಿದೆ. ಮಾರಾಟದ ಸಮಯದಲ್ಲಿ ಕಂಪನಿ ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ನೀಡುತ್ತಿದೆ.

50MP ಕ್ಯಾಮೆರಾ: ಭಾರತದಲ್ಲಿ ಒಪ್ಪೋ A79 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ…

ಇದನ್ನೂ ಓದಿ
Image
ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆದರೆ ಏನು ಮಾಡಬೇಕು?: ಇಲ್ಲಿದೆ ಟ್ರಿಕ್
Image
ಫ್ಲಿಪ್​ಕಾರ್ಟ್ ದಸರಾ ಸೇಲ್: ಈ ​ಫೋನ್​ಗಳು ಇದಕ್ಕಿಂತ ಕಡಿಮೆ ಬೆಲೆಗೆ ಸಿಗಲ್ಲ
Image
ಬಹುನಿರೀಕ್ಷಿತ ಲಾವಾ ಬ್ಲೇಜಾ 2 5G ಬಿಡುಗಡೆ ದಿನಾಂಕ ಘೋಷಣೆ: ಏನಿದೆ ಫೀಚರ್ಸ್
Image
15,000 ರೂ. ಒಳಗೆ ಸಿಗುವ ಬೆಸ್ಟ್ 5G ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಜಿಯೋ ಪ್ರೈಮಾ 4G ಫೋನ್ ಫೀಚರ್ಸ್:

ಹೊಸದಾಗಿ ಬಿಡುಗಡೆಯಾದ ಜಿಯೋ ಫೋನ್ ಪ್ರೈಮಾ 4G 320×240 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 2.4-ಇಂಚಿನ TFT ಡಿಸ್ಪ್ಲೇಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಈ ಫೋನ್​ನಲ್ಲಿ 0.3-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸೇರಿದಂತೆ ಫ್ಲ್ಯಾಷ್‌ಲೈಟ್ ಮತ್ತು ಕ್ಯಾಮೆರಾ ಇದೆ. ಈ ಜಿಯೋ ಫೋನ್ 512MB RAM ನಿಂದ ಚಾಲಿತವಾಗಿದೆ. ಸಂಗ್ರಹ ಸಾಮರ್ಥ್ಯವನ್ನು ಮೈಕ್ರೋ SD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬಹುದು. KaiOS ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತದೆ. ARM ಕಾರ್ಟೆಕ್ಸ್ A53 ಪ್ರೊಸೆಸರ್‌ ನೀಡಲಾಗಿದೆ.

ಜಿಯೋ ಫೋನ್ ಪ್ರೈಮಾ 4G ಬ್ಲೂಟೂತ್ 5.0 ಅನ್ನು ಹೊಂದಿದೆ ಮತ್ತು 1800mAh ಬ್ಯಾಟರಿಯನ್ನು ನೀಡಲಾಗಿದೆ. ಇತರೆ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, 4G FM ರೇಡಿಯೊ ವೈಶಿಷ್ಟ್ಯದೊಂದಿಗೆ ಬರುತ್ತದೆ. ಯೂಟ್ಯೂಬ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಮತ್ತು ಜಿಯೋ ನ್ಯೂಸ್‌ನಂತಹ ಅಪ್ಲಿಕೇಶನ್‌ ಇದರಲ್ಲಿ ನೀಡಲಾಗಿದೆ.

ವಿಶೇಷವಾಗಿ ಈ ಫೋನ್ 1200 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ. ವಾಟ್ಸ್​ಆ್ಯಪ್, ಯೂಟ್ಯೂಬ್ ಸೇರಿದಂತೆ ಫೇಸ್​ಬುಕ್, ಗೂಗಲ್ ಮ್ಯಾಪ್ಸ್ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಸಹ ಒಳಗೊಂಡಿದೆ. 3.5mm ಹೆಡ್‌ಫೋನ್ ಜ್ಯಾಕ್ ಕೂಡ ಫೋನ್‌ನಲ್ಲಿ ಲಭ್ಯವಿದೆ. ಜೊತೆಗೆ ಎಫ್ ಎಂ ರೇಡಿಯೋ ಕೂಡ ಇದರಲ್ಲಿ ಕೇಳಿಸುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:33 pm, Mon, 30 October 23