50MP ಕ್ಯಾಮೆರಾ: ಭಾರತದಲ್ಲಿ ಒಪ್ಪೋ A79 5G ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಕೇವಲ…
Oppo A79 5G Launched in India: ಹೊಸ ಒಪ್ಪೋ A79 5G ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್, ಡ್ಯುಯಲ್ ಕ್ಯಾಮೆರಾ ಸೆಟಪ್, ಬಲಿಷ್ಠ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಇದರ ಬೆಲೆ ಕೂಡ ಕಡಿಮೆ ಇದೆ.
ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿರುವ ಚೀನಾ ಮೂಲದ ಪ್ರಸಿದ್ಧ ಒಪ್ಪೋ ಕಂಪನಿ ಇದೀಗ ತನ್ನ A ಸರಣಿಯಲ್ಲಿ ನೂತನ ಒಪ್ಪೋ A79 5G (Oppo A79 5G) ಫೋನನ್ನು ಅನಾವರಣ ಮಾಡಿದೆ. ಈ ಹೊಸ 5G ಫೋನ್ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್, ಡ್ಯುಯಲ್ ಕ್ಯಾಮೆರಾ ಸೆಟಪ್, ಬಲಿಷ್ಠ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಇದರ ಬೆಲೆ ಕೂಡ ಕಡಿಮೆ ಇದೆ. ಈ ಫೋನ್ ಒನ್ಪ್ಲಸ್ ನಾರ್ಡ್ CE 3 ಲೈಟ್ 5G, ವಿವೋ T2 5G ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಗೆ ನೇರ ಸ್ಪರ್ಧಿಯಾಗಿದೆ.
ಭಾರತದಲ್ಲಿ ಒಪ್ಪೋ A79 5G ಬೆಲೆ, ಲಭ್ಯತೆ:
ಹೊಸ ಒಪ್ಪೋ A79 5G ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಇದರ ಏಕೈಕ 8GB RAM + 128GB ಸ್ಟೋರೇಜ್ ರೂಪಾಂತರಕ್ಕೆ 19,999 ರೂ. ನಿಗದಿ ಮಾಡಲಾಗಿದೆ. ಇದನ್ನು ಗ್ಲೋಯಿಂಗ್ ಗ್ರೀನ್ ಮತ್ತು ಮಿಸ್ಟರಿ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಫೋನ್ ಒಪ್ಪೋದ ಇ-ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಪ್ರಮುಖ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಪ್ರಿ ಬುಕಿಂಗ್‌ಗೆ ಲಭ್ಯವಿದೆ. ಈ ಹ್ಯಾಂಡ್‌ಸೆಟ್‌ನ ಮಾರಾಟ ಇಂದಿನಿಂದಲೇ ಪ್ರಾರಂಭವಾಗುತ್ತದೆ.
ಟೆಕ್ ಮಾರುಕಟ್ಟೆಯಲ್ಲಿ ಸಂಚಲನ: ಬರುತ್ತಿದೆ ವಾಚ್ನಂತೆ ಧರಿಸಬಹುದಾದ ಸ್ಮಾರ್ಟ್ಫೋನ್
ಒಪ್ಪೋ A79 5G ಮಾರಾಟದ ಕೊಡುಗೆಗಳನ್ನು ಗಮನಿಸಿದರೆ, SBI, ICICI ಬ್ಯಾಂಕ್, ಕೋಟಕ್ ಬ್ಯಾಂಕ್, IDFC ಫಸ್ಟ್, AU ಫೈನಾನ್ಸ್ ಬ್ಯಾಂಕ್, ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ 4,000 ರೂ. ರಿಯಾಯಿತಿ ಇದೆ.
ಒಪ್ಪೋ A79 5G ಫೀಚರ್ಸ್:
ಡ್ಯುಯಲ್ ಸಿಮ್ (ನ್ಯಾನೋ) ಒಪ್ಪೋ A79 5G ColorOS 13.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.72-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) LCD ಡಿಸ್ ಪ್ಲೇಯನ್ನು ಹೊಂದಿದ್ದು, 90Hz ವರೆಗೆ ರಿಫ್ರೆಶ್ ರೇಟ್, 391ppi ಪಿಕ್ಸೆಲ್ ಸಾಂದ್ರತೆ, 650nits ಗರಿಷ್ಠ ಬ್ರೈಟ್ನೆಸ್ನಿಂದ ಕೂಡಿದೆ. 7nm ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಯಿಂದ ಚಾಲಿತವಾಗಿದೆ. ಜೊತೆಗೆ 8GB LPDDR4X RAM ಮತ್ತು 128GB UFS2.2 ಸಂಗ್ರಹಣೆಯನ್ನು ಹೊಂದಿದೆ. ಮೆಮೊರಿಯನ್ನು 16GB ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬಂದರೆ, ಒಪ್ಪೋ A79 5G ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು f/1.8 ಅಪರ್ಚರ್ ಮತ್ತು 77 ಡಿಗ್ರಿ ಫೀಲ್ಡ್ ಆಫ್ ವ್ಯೂ ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, f/2.0 ಅಪರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಒಪ್ಪೋ A79 5G ಸ್ಮಾರ್ಟ್ಫೋನ್ 33W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ವೇಗದ ಚಾರ್ಜಿಂಗ್ ವೈಶಿಷ್ಟ್ಯವು 30 ನಿಮಿಷಗಳಲ್ಲಿ ಶೂನ್ಯದಿಂದ 51 ಪ್ರತಿಶತದಷ್ಟು ಬ್ಯಾಟರಿಯನ್ನು ತುಂಬುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, ಬ್ಲೂಟೂತ್ 5.3, 3.5mm ಆಡಿಯೋ ಜ್ಯಾಕ್, USB ಟೈಪ್-C ಪೋರ್ಟ್ ಒಳಗೊಂಡಿವೆ. ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Sat, 28 October 23