AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಪ್ಪೋದ ನೂತನ ಮಡಚುವ ಫೋನ್ ಫೈಂಡ್ N3 ಫ್ಲಿಪ್ ಇಂದಿನಿಂದ ಖರೀದಿಗೆ ಲಭ್ಯ

ಒಪ್ಪೋ ಫೈಂಡ್ N3 ಫ್ಲಿಪ್​ ಬೆಲೆ ರೂ. 94,999 ರೂ. ಆಗಿದೆ. ಇದು 12GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಈ ಸ್ಮಾರ್ಟ್​ಫೋನ್ ಇಂದಿನಿಂದ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಸ್ಟೋರ್‌ಗಳ ಮೂಲಕ ಸಂಜೆ 6 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ. ಮೊದಲ ಸೇಲ್ ಪ್ರಯುಕ್ತ ಒಪ್ಪೋ 12,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಮತ್ತು 24 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಅನ್ನು ಆಯ್ದ ಬ್ಯಾಂಕ್‌ಗಳ ಮೂಲಕ ಘೋಷಿಸಿದೆ.

ಒಪ್ಪೋದ ನೂತನ ಮಡಚುವ ಫೋನ್ ಫೈಂಡ್ N3 ಫ್ಲಿಪ್ ಇಂದಿನಿಂದ ಖರೀದಿಗೆ ಲಭ್ಯ
oppo find n3 flip
Vinay Bhat
| Edited By: |

Updated on:Oct 08, 2026 | 2:05 PM

Share

ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಹೊಸ ಕ್ಲಾಮ್‌ಶೆಲ್-ಶೈಲಿಯ ಫೋಲ್ಡಬಲ್ ಫೋನ್ ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಅನ್ನು ಬಿಡುಗಡೆ ಮಾಡಿತ್ತು. ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್ ಮತ್ತು 44W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿರುವ ಈ ಹ್ಯಾಂಡ್‌ಸೆಟ್ ಇಂದಿನಿಂದ ಭಾರತದಲ್ಲಿ ಮಾರಾಟ ಕಾಣಲಿದೆ. ಈ ಫೋನಿನ ಕುರಿತ ಸಂಪೂರ್ಣ ಮಾಹಿತಿ ನೋಡೋಣ.

ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ:

ಒಪ್ಪೋ ಫೈಂಡ್ N3 ಫ್ಲಿಪ್​ ಬೆಲೆ ರೂ. 94,999 ರೂ. ಆಗಿದೆ. ಇದು 12GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಈ ಸ್ಮಾರ್ಟ್​ಫೋನ್ ಇಂದಿನಿಂದ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಸ್ಟೋರ್‌ಗಳ ಮೂಲಕ ಸಂಜೆ 6 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ. ಮೊದಲ ಸೇಲ್ ಪ್ರಯುಕ್ತ ಒಪ್ಪೋ 12,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಮತ್ತು 24 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಅನ್ನು ಆಯ್ದ ಬ್ಯಾಂಕ್‌ಗಳ ಮೂಲಕ ಘೋಷಿಸಿದೆ. ಒಂದು-ಬಾರಿ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಮತ್ತು ರೂ. 8,000 ವರೆಗಿನ ಎಕ್ಸ್‌ಚೇಂಜ್ ಬೋನಸ್ ಆಯ್ಕೆ ಕೂಡ ಇದೆ.

ಒಪ್ಪೋ ಫೈಂಡ್ N3 ಫ್ಲಿಪ್​ ಫೀಚರ್ಸ್:

  • ಒಪ್ಪೋ ಫೈಂಡ್ N3 ಫ್ಲಿಪ್​ 6.8-ಇಂಚಿನ ಪೂರ್ಣ-HD (1,080×2,520 ಪಿಕ್ಸೆಲ್‌ಗಳು) LTPO AMOLED ಇನ್ನರ್ ಡಿಸ್ ಪ್ಲೇ ಹೊಂದಿದ್ದು, 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ದರದಿಂದ ಕೂಡಿದೆ.
  • 3.26-ಇಂಚಿನ (382×720 ಪಿಕ್ಸೆಲ್‌ಗಳು) ಕವರ್ ಡಿಸ್‌ಪ್ಲೇಯು AMOLED ಪ್ಯಾನೆಲ್ ಜೊತೆಗೆ 900 ನಿಟ್‌ಗಳ ಗರಿಷ್ಠ ಬ್ರೈಟ್​ನೆಸ್ ಹೊಂದಿದೆ. ಈ ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲ್ಪಟ್ಟಿದೆ.
  • ವಿಶೇಷವಾಗಿ ಈ ಫೋನ್ ಅನ್ನು ಸೈಲೆಂಟ್ ಮಾಡಲು, ರಿಂಗ್ ಮಾಡಲು ಅಥವಾ ವೈಬ್ರೇಟ್ ಮಾಡಲು ಅಲರ್ಟ್ ಸ್ಲೈಡರ್ ಕೂಡ ಇದೆ.
  • ಮಡಿಸಬಹುದಾದ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್ ಬೆಂಬಲಿಸುತ್ತದೆ. ಇದನ್ನು ARM ಇಮ್ಮಾರ್ಟಲಿಸ್-G715 MC11 GPU ನೊಂದಿಗೆ ಜೋಡಿಸಲಾಗಿದೆ.
  • ಇದು 50MP ಸೋನಿ IMX890 ಪ್ರಾಥಮಿಕ ಸಂವೇದಕ, 48MP ಸೋನಿ IMX581 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 32MP ಸೋನಿ IMX709 ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಾಗಿ, 32MP ಸೋನಿ IMX709 RGBW ಫ್ರಂಟ್ ಕ್ಯಾಮೆರಾ ಇದೆ.
  • ಒಪ್ಪೋ ಫೈಂಡ್ N3 ಫ್ಲಿಪ್​ 44W SUPERVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
  • ಆಂಡ್ರಾಯ್ಡ್ 13 ಅನ್ನು ಆಧರಿಸಿದ ColorOS 13.2 ಮೂಲಕ ರನ್ ಮಾಡುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳು, 5G ಮತ್ತು ವೈ-ಫೈ 7 ಸೇರಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Sun, 22 October 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More