Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ಪ್ರಿಯರಿಗೆ ಬಂಪರ್ ಫೋನ್: 9,999 ರೂ. ಗೆ ಲಾವಾ ಬ್ಲೇಜ್ 2 5G ಫೋನ್ ಅನಾವರಣ

Lava Blaze 2 5G Launched in India: ಲಾವಾ ಬ್ಲೇಜ್ 2 5ಜಿ ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM + 64GB ಸ್ಟೋರೇಜ್ ಬೆಲೆ 9,999 ರೂ. ಆಗಿದೆ. ದು ಸದ್ಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5ಜಿ ಫೋನುಗಳ ಸಾಲಿಗೆ ಸೇರ್ಪಡೆ ಆಗಿದೆ.

ಬಜೆಟ್ ಪ್ರಿಯರಿಗೆ ಬಂಪರ್ ಫೋನ್: 9,999 ರೂ. ಗೆ ಲಾವಾ ಬ್ಲೇಜ್ 2 5G ಫೋನ್ ಅನಾವರಣ
Lava Blaze 2 5G
Follow us
Vinay Bhat
|

Updated on: Nov 02, 2023 | 1:20 PM

ಭಾರತದಲ್ಲಿನ ಬಜೆಟ್ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಬಂಪರ್ ಸುದ್ದಿಯೊಂದಿದೆ. ದೇಶೀಯ ಸ್ಮಾರ್ಟ್‌ಫೋನ್ ಬ್ರಾಂಡ್ ಲಾವಾ ಗುರುವಾರ ತನ್ನ ಹೊಚ್ಚಹೊಸ ಕೈಗೆಟುಕುವ ಬೆಲೆಯ ಲಾವಾ ಬ್ಲೇಜ್ 2 5G (Lava Blaze 2 5G) ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡಿದೆ. ಲಾವಾದ ಈ ಹೊಸ ಬಜೆಟ್ ಸ್ಮಾರ್ಟ್​ಫೋನ್ ಮೀಡಿಯಾಟೆಲ್ ಡೈಮೆನ್ಸಿಟಿ 6020 ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಬರುತ್ತಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವೇ ಕೆಲವು 5ಜಿ ಫೋನುಗಳ ಸಾಲಿಗೆ ಸೇರ್ಪಡೆ ಆಗಿದೆ. ಈ ಫೋನ್​ನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಲಾವಾ ಬ್ಲೇಜ್ 2 5G ಬೆಲೆ, ಲಭ್ಯತೆ:

ಲಾವಾ ಬ್ಲೇಜ್ 2 5ಜಿ ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದರ 4GB RAM + 64GB ಸ್ಟೋರೇಜ್ ಬೆಲೆ 9,999 ರೂ. ಆಗಿದೆ. ಅಂತೆಯೆ 6GB RAM + 128GB ಸ್ಟೋರೇಜ್ ವೇರಿಯಂಟ್​ಗೆ 10,999 ರೂ. ನಿಗದಿ ಮಾಡಲಾಗಿದೆ. ನವೆಂಬರ್ 9 ರಿಂದ ಈ ಫೋನ್ ಲಾವಾ ವೆಬ್‌ಸೈಟ್, ಬ್ರ್ಯಾಂಡ್ ರಿಟೇಲ್ ಸ್ಟೋರ್‌ಗಳು ಮತ್ತು ಅಮೆಜಾನ್ ಮೂಲಕ ಮಾರಾಟ ಕಾಣಲಿದೆ.

ಏನಿದು ಸಿಮ್ ಸ್ವಾಪ್ ಸ್ಕ್ಯಾಮ್?: ಒಂದು ಸಣ್ಣ ತಪ್ಪು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು

ಇದನ್ನೂ ಓದಿ
Image
ಟೆಕ್ ಲೋಕದಲ್ಲಿ ಮೂಲೆಗುಂಪಾಗಿದೆ ಕನ್ನಡ?
Image
ಟೆಕ್ನೋದಿಂದ ಅತ್ಯುತ್ತಮ ಬಜೆಟ್ ಸ್ಮಾರ್ಟ್​ಫೋನ್ ಟೆಕ್ನೋ ಪಾಪ್ 8 ಬಿಡುಗಡೆ
Image
ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಫೋನ್ ಮಾರಾಟ ಆರಂಭ: ಬೆಲೆ ಎಷ್ಟು?
Image
ಸ್ಪೀಡ್ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಹೊಸ ಟ್ರಿಕ್: ಸಿಕ್ಕಿ ಬಿದ್ದರೆ...

ಈ ಫೋನಿನ ಮೂಲ ರೂಪಾಂತರದಲ್ಲಿ 4GB RAM ಸಾಮರ್ಥ್ಯವನ್ನು ಒಟ್ಟು 8GB RAM ಗಾಗಿ ವಿಸ್ತರಿಸಬಹುದು. ಅಂತೆಯೇ, 6GB RAM ರೂಪಾಂತರವು ಒಟ್ಟು 12GB RAM ಗೆ ವಿಸ್ತರಿಸಲು ಅನುಮತಿಸುತ್ತದೆ. ಈ ಹ್ಯಾಂಡ್‌ಸೆಟ್ ಅನ್ನು ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಲ್ಯಾವೆಂಡರ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಲಾವಾ ಬ್ಲೇಜ್ 2 5G ಫೀಚರ್ಸ್:

ಲಾವಾ ಬ್ಲೇಜ್ 2 5G ಸ್ಮಾರ್ಟ್​ಫೋನ್ 6.56 HD+ IPS ಪಂಚ್ ಹೋಲ್ ಡಿಸ್ ಪ್ಲೇ ಜೊತೆಗೆ 2.5D ಕರ್ವ್ಡ್ ಸ್ಕ್ರೀನ್ ಮತ್ತು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಿಂದ 3,90,000+ AnTuTu ಸ್ಕೋರ್ ಅನ್ನು ಹೊಂದಿದೆ. UFS 2.2 ಮೆಮೊರಿಯೊಂದಿಗೆ ಬರುತ್ತದೆ ಮತ್ತು 1 TB ವರೆಗೆ ವಿಸ್ತರಿಸಬಹುದಾಗಿದೆ.

ಈ ಲಾವಾ ಸ್ಮಾರ್ಟ್‌ಫೋನ್ 50MP ಹಿಂಬದಿಯ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವೈಶಿಷ್ಟ್ಯಗಳು ಫಿಲ್ಮ್, ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಯುಹೆಚ್‌ಡಿ, ಜಿಫ್, ಬ್ಯೂಟಿ, ಎಚ್‌ಡಿಆರ್, ನೈಟ್, ಪೋರ್ಟ್ರೇಟ್, ಎಐ, ಪ್ರೊ, ಪನೋರಮಾ, ಫಿಲ್ಟರ್‌ಗಳು ಮತ್ತು ಇಂಟೆಲಿಜೆಂಟ್ ಸ್ಕ್ಯಾನಿಂಗ್‌ನಂತಹ ವಿವಿಧ ಮೋಡ್‌ಗಳನ್ನು ಒಳಗೊಂಡಿದೆ.

ಬ್ಲೇಜ್ 2 5G ಸ್ಟಾಕ್ 13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಅಟೋಮೆಟಿಕ್ ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ಸಹ ಹೊಂದಿದೆ. ಸೈಡ್ ಫಿಂಗರ್‌ಪ್ರಿಂಟ್ ಸಂವೇದಕ ನೀಡಲಾಗಿದೆ. ಸಾಧನವು ಆಂಡ್ರಾಯ್ಡ್ 14 ಅಪ್‌ಗ್ರೇಡ್ ಮತ್ತು ಎರಡು ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ. 5000mAh ಬ್ಯಾಟರಿಯಿಂದ ಚಾಲಿತವಾಗಿದೆ, ಇದು USB ಟೈಪ್-ಸಿ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ