Tech Tips: ನಿಮ್ಮ ಫೋನ್‌ ಬ್ಯಾಟರಿ ಬೇಗನೆ ಖಾಲಿ ಆಗಲು ಇಲ್ಲಿದೆ ನೋಡಿ 5 ಕಾರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2024 | 11:48 AM

ಬ್ಯಾಟರಿ ತ್ವರಿತವಾಗಿ ಖಾಲಿಯಾಗಲು ಡಿಸ್‌ಪ್ಲೇ ಮುಖ್ಯ ಕಾರಣವಾಗಿದೆ. ಇದಕ್ಕಾಗಿ, ನಿಮ್ಮ ಕಣ್ಣುಗಳಿಗೆ ಸರಿಹೊಂದುವ ರೀತಿಯಲ್ಲಿ ಡಿಸ್​ಪ್ಲೇ ಬ್ರೈಟ್​ನೆಸ್ ಅನ್ನು ಹೊಂದಿಸಿ. ಫೋನ್‌ನ ಬ್ರೈಟ್‌ನೆಸ್ ಅನ್ನು ಅನಗತ್ಯವಾಗಿ ಹೆಚ್ಚು ಇಡಬಾರದು. ಅಟೋ-ಲಾಕ್ ಅಥವಾ ಸ್ಕ್ರೀನ್ ಟೈಮ್‌ಔಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು.

Tech Tips: ನಿಮ್ಮ ಫೋನ್‌ ಬ್ಯಾಟರಿ ಬೇಗನೆ ಖಾಲಿ ಆಗಲು ಇಲ್ಲಿದೆ ನೋಡಿ 5 ಕಾರಣ
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಸ್ಮಾರ್ಟ್​​ಫೋನ್‌ನ ಬ್ಯಾಟರಿ ಬೇಗನೆ ಖಾಲಿ ಆಗುತ್ತಿದ್ದರೆ, ಫೋನ್‌ನ ಬ್ಯಾಟರಿ ಹಾನಿಯಾಗಿದೆ ಎಂದು ಅರ್ಥವಲ್ಲ. ವಾಸ್ತವವಾಗಿ, ಫೋನ್‌ನ ಬ್ಯಾಟರಿಯ ತ್ವರಿತ ಡಿಸ್ಚಾರ್ಜ್‌ಗೆ ಅನೇಕ ಇತರ ತಾಂತ್ರಿಕ ಕಾರಣಗಳು ಇರಬಹುದು. ಇದನ್ನು ಜನರು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್‌ಗೆ ಹೊಸ ಬ್ಯಾಟರಿಯನ್ನು ಖರೀದಿಸಬೇಕು ಅಥವಾ ಹೊಸ ಫೋನ್ ಖರೀದಿಸಲು ಮುಂದಾಗುತ್ತಾರೆ. ಆದಾಗ್ಯೂ, ನೀವು ಈ 5 ವೈಶಿಷ್ಟ್ಯಗಳನ್ನು ಆಫ್ ಮಾಡಿದರೆ, ನಿಮ್ಮ ಫೋನ್‌ನ ಬ್ಯಾಟರಿ ಬಾಳಿಕೆ ಹೆಚ್ಚಾಗುತ್ತದೆ.

ಡಿಸ್​ಪ್ಲೇ ಬ್ರೈಟ್​ನೆಸ್:

ಬ್ಯಾಟರಿ ತ್ವರಿತವಾಗಿ ಖಾಲಿಯಾಗಲು ಡಿಸ್‌ಪ್ಲೇ ಮುಖ್ಯ ಕಾರಣವಾಗಿದೆ. ಇದಕ್ಕಾಗಿ, ನಿಮ್ಮ ಕಣ್ಣುಗಳಿಗೆ ಸರಿಹೊಂದುವ ರೀತಿಯಲ್ಲಿ ಡಿಸ್​ಪ್ಲೇ ಬ್ರೈಟ್​ನೆಸ್ ಅನ್ನು ಹೊಂದಿಸಿ. ಫೋನ್‌ನ ಬ್ರೈಟ್‌ನೆಸ್ ಅನ್ನು ಅನಗತ್ಯವಾಗಿ ಹೆಚ್ಚು ಇಡಬಾರದು. ಅಟೋ-ಲಾಕ್ ಅಥವಾ ಸ್ಕ್ರೀನ್ ಟೈಮ್‌ಔಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು.

ಬ್ಯಾಕ್​ಗ್ರೌಂಡ್ ಆ್ಯಪ್ ಕ್ಲೋಸ್ ಮಾಡಿ:

ಬ್ಯಾಕ್​ಗ್ರೌಂಡ್ ಅಪ್ಲಿಕೇಶನ್‌ಗಳು ಹೆಚ್ಚಾಗಿ ಫೋನ್‌ಗಳಲ್ಲಿ ರನ್ ಆಗುತ್ತಲೇ ಇರುತ್ತವೆ. ಇದು ನಿಮ್ಮ ಫೋನ್‌ನ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಅಂತಹ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ. ಅಲ್ಲದೇ ನಿರಂತರವಾಗಿ ಅಪ್ ಡೇಟ್ ಆಗುವ ಆ್ಯಪ್ ಗಳನ್ನು ಬ್ಲಾಕ್ ಮಾಡಬೇಕು. ಇದಕ್ಕಾಗಿ “ಸೆಟ್ಟಿಂಗ್‌ಗಳು” ಗೆ ಹೋಗಿ, ತದನಂತರ “ಜೆನೆರಲ್” ಆಯ್ಕೆಮಾಡಿ ಮತ್ತು ನಂತರ ” ಬ್ಯಾಕ್​ಗ್ರೌಂಡ್ ಅಪ್ಲಿಕೇಶನ್ ರಿಫ್ರೆಶ್” ಅನ್ನು ಟ್ಯಾಪ್ ಮಾಡಿ.

ಲೊಕೇಷನ್ ಆಫ್ ಮಾಡಿ:

ಲೊಕೇಷನ್ ನಿಮ್ಮ ಐಫೋನ್‌ನ ಬ್ಯಾಟರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಅಪ್ಲಿಕೇಶನ್‌ಗೆ ಲೊಕೇಷನ್ ಶೇರ್ ಆಯ್ಕೆ ಕೊಡಬೇಡಿ. ಇದನ್ನು ನಿಲ್ಲಿಸಲು, “ಸೆಟ್ಟಿಂಗ್ಸ್​ಗೆ” ಗೆ ಹೋಗಿ, “ಪ್ರೈವಸಿ” ಟ್ಯಾಪ್ ಮಾಡಿ, ನಂತರ “ಲೊಕೇಷನ್ ಸರ್ವಿಸ್” ಟ್ಯಾಪ್ ಮಾಡಿ. “ಆಲ್​ವೇಸ್” ಬದಲಿಗೆ “ಯೂಸಿಂಗ್ ದಿಸ್ ಆ್ಯಪ್” ಆಯ್ಕೆಯನ್ನು ಆಯ್ಕೆಮಾಡಿ.

ಸೆಲ್ಯುಲಾರ್ ಬದಲಿಗೆ ವೈ-ಫೈ ಆಯ್ಕೆಮಾಡಿ:

ಬಳಕೆದಾರರು ಸೆಲ್ಯುಲಾರ್ ಡೇಟಾದ ಬದಲಿಗೆ ವೈ-ಫೈ ಆಯ್ಕೆಯನ್ನು ಆರಿಸಬೇಕು. ಸೆಲ್ಯುಲಾರ್ ನೆಟ್​ವರ್ಕ್​ಗಳು ​​ಹೆಚ್ಚಿನ ಶಕ್ತಿಯನ್ನು ಬಳಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಟರಿ ಬೇಗನೆ ಖಾಲಿಯಾಗುವ ಅಪಾಯವಿದೆ. ಇದಕ್ಕಾಗಿ ಬಳಕೆದಾರರು ವೈ-ಫೈ ಲಭ್ಯವಿದ್ದಲ್ಲೆಲ್ಲ ಅದನ್ನು ಬಳಸಬೇಕು. ಇದು ಫೋನ್‌ನ ಬ್ಯಾಟರಿ ಅವಧಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ನಿಮ್ಮ ಫೋನ್ ಡಿಸ್​ಪ್ಲೇ ಮೇಲೆ ಗ್ರೀನ್ ಲೈನ್ ಕಾಣಿಸಿಕೊಂಡರೆ ಹೋಗಲಾಡಿವುದು ಹೇಗೆ?

ಕಡಿಮೆ-ಪವರ್ ಮೋಡ್:

ಫೋನ್‌ನ ಬ್ಯಾಟರಿ ಖಾಲಿಯಾಗಿದ್ದರೆ, ನಿಮ್ಮ ಐಫೋನ್‌ನಲ್ಲಿ ನೀವು ಲೋ ಪವರ್ ಮೋಡ್ ಅನ್ನು ಸಕ್ರಿಯಗೊಳಿಸಬೇಕು. ಇದು ಬ್ಯಾಟರಿಯನ್ನು ಅವಧಿಯನ್ನು ಹೆಚ್ಚಿಸುತ್ತದೆ. ಇದನ್ನು ಮಾಡಲು, ಮೊದಲು “ಸೆಟ್ಟಿಂಗ್‌ಗಳು” ಗೆ ಹೋಗಿ. ಮುಂದೆ “ಬ್ಯಾಟರಿ” ಆಯ್ಕೆಮಾಡಿ ಮತ್ತು ನಂತರ “ಲೋ ಪವರ್ ಮೋಡ್” ಟ್ಯಾಪ್ ಮಾಡಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ