Tech Tips: ನಿಮ್ಮ ಫೋನ್ ಡಿಸ್‌ಪ್ಲೇ ಮೇಲೆ ಗ್ರೀನ್ ಲೈನ್ ಕಾಣಿಸಿಕೊಂಡರೆ ಹೋಗಲಾಡಿವುದು ಹೇಗೆ?
ಸಾಫ್ಟ್‌ವೇರ್ ಸಂಬಂಧಿತ ದೋಷಗಳಿಂದ ಕೆಲವೊಮ್ಮೆ ಗ್ರೀನ್ ಲೈನ್‌ಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಫೋನ್‌ಗಾಗಿ ಹೊರತಂದಿರುವ ಇತ್ತೀಚಿನ ಅಪ್‌ಡೇಟ್‌ನಲ್ಲಿ ದೋಷವಿರಬಹುದು ಅಥವಾ ಅಸ್ತಿತ್ವದಲ್ಲಿರುವ ಸಾಫ್ಟ್‌ವೇರ್‌ನಲ್ಲಿ ತೊಂದರೆ ಇರಬಹುದು. ಇದಲ್ಲದೆ, ಕೆಲವು ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿದ ನಂತರ ಫೋನ್‌ನ ಡಿಸ್‌ಪ್ಲೇ ಮೇಲೆ ಈ ರೀತಿಯ ಪರಿಣಾಮ ಬೀರಬಹುದು.
ಕಳೆದ ಕೆಲವು ವರ್ಷಗಳಿಂದ ಲಕ್ಷಾಂತರ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇ ಮೇಲೆ ಹಸಿರು ರೇಖೆಗಳು (ಗ್ರೀನ್ ಲೈನ್) ಗೋಚರಿಸುವ ವಿಚಿತ್ರ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಒನ್ಪ್ಲಸ್, ನಥಿಂಗ್ ಫೋನ್ನಿಂದ ಸ್ಯಾಮ್ಸಂಗ್ ವರೆಗಿನ ಬ್ರ್ಯಾಂಡ್ ಸಾಧನಗಳು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಬಳಕೆದಾರರು ಈ ಗ್ರೀನ್ ಲೈನ್ಗಳನ್ನು ಸರಿಪಡಿಸಲು ಅನೇಕ ವಿಧಾನಗಳಿಂದ ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನವರಿಗೆ ಸಾಫ್ಟ್‌ವೇರ್ ಅಪ್ಡೇಟ್ ಕೊಟ್ಟ ನಂತರ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅಥವಾ ಯಾವುದಾದರು ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ಈ ಲೈನ್ ಬರುತ್ತದೆ.
ಇದಕ್ಕೆ ಕಾರಣ ಸಾಫ್ಟ್‌ವೇರ್ ಆಗಿರಬಹುದು:
ಸಾಫ್ಟ್‌ವೇರ್ ಸಂಬಂಧಿತ ದೋಷಗಳಿಂದ ಕೆಲವೊಮ್ಮೆ ಗ್ರೀನ್ ಲೈನ್‌ಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು. ನಿಮ್ಮ ಫೋನ್‌ಗಾಗಿ ಹೊರತಂದಿರುವ ಇತ್ತೀಚಿನ ಅಪ್‌ಡೇಟ್‌ನಲ್ಲಿ ದೋಷವಿರಬಹುದು ಅಥವಾ ಅಸ್ತಿತ್ವದಲ್ಲಿರುವ ಸಾಫ್ಟ್‌ವೇರ್‌ನಲ್ಲಿ ತೊಂದರೆ ಇರಬಹುದು. ಇದಲ್ಲದೆ, ಕೆಲವು ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡಿದ ನಂತರ ಫೋನ್‌ನ ಡಿಸ್‌ಪ್ಲೇ ಮೇಲೆ ಈ ರೀತಿಯ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ಗ್ರೀನ್ ಲೈನ್ಗಳನ್ನು ಸರಿಪಡಿಸುವುದು ತುಂಬಾ ಕಷ್ಟವೇನಿಲ್ಲ.
ಹಾರ್ಡ್‌ವೇರ್ ಪ್ರಾಬ್ಲಂ ಕೂಡ ಇರಬಹುದು:
ಅನೇಕ ಬಾರಿ, ಫೋನ್ ಬಿದ್ದ ನಂತರ ಅಥವಾ ಭೌತಿಕವಾಗಿ ಹಾನಿಯಾ ಸಂದರ್ಭದಲ್ಲಿ, ಗ್ರೀನ್ ಲೈನ್ಗಳು ಡಿಸ್‌ಪ್ಲೇ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದಲ್ಲದೆ, ಡಿಸ್‌ಪ್ಲೇ ಮತ್ತು ಮದರ್ಬೋರ್ಡ್ ನಡುವಿನ ಕನೆಕ್ಟರ್ ಸಡಿಲಗೊಂಡರೆ ಅಥವಾ ಹಾನಿಗೊಳಗಾದರೆ ಮತ್ತು ಕೆಲವೊಮ್ಮೆ ಉತ್ಪಾದನಾ ದೋಷದಿಂದ ಕೂಡ ಅಂತಹ ಸಮಸ್ಯೆ ಉಂಟಾಗುತ್ತದೆ. ಈ ಸಂದರ್ಭ ನೀವು ನಿಮ್ಮ ಫೋನ್ ಅನ್ನು ಸರ್ವಿಸ್ ಸೆಂಟರ್ಗೆ ತೆಗೆದುಕೊಂಡು ಹೋಗದೆ ಈ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ.
ಇಷ್ಟೇ ಅಲ್ಲ, ದೀರ್ಘಾವಧಿಯ ಬಳಕೆಯ ನಂತರ ಫೋನ್ ಅತಿಯಾಗಿ ಬಿಸಿಯಾದಾಗ ಅಥವಾ ಹೆಚ್ಚಿನ ಒತ್ತಡದ ಸಂದರ್ಭದಲ್ಲಿ ಡಿಸ್‌ಪ್ಲೇ ಮೇಲೆ ಗ್ರೀನ್ ಲೈನ್ಗಳ ಸಮಸ್ಯೆಗಳು ಕಂಡುಬರುತ್ತವೆ.
ಈ ರೀತಿಯ ಹಸಿರು ರೇಖೆಗಳನ್ನು ಸರಿಪಡಿಸಬಹುದು:
ನಿಮ್ಮ ಫೋನ್‌ನಲ್ಲಿನ ಡಿಸ್‌ಪ್ಲೇ ಮೇಲಿನ ಹಸಿರು ರೇಖೆಗಳ ಸಮಸ್ಯೆಯು ಕೆಲವು ಸಾಫ್ಟ್‌ವೇರ್ ಗ್ಲಿಚ್‌ಗೆ ಸಂಬಂಧಿಸಿದ್ದರೆ, ಅದನ್ನು ಸರಿಪಡಿಸಲು ಪ್ರಯತ್ನಗಳನ್ನು ಮಾಡಬಹುದು. ಮೊದಲಿಗೆ ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡಿ ನೋಡಿ. ಇದರ ಹೊರತಾಗಿ, ನಿಮ್ಮ ಫೋನ್‌ನಲ್ಲಿ ಇತ್ತೀಚೆಗೆ ಇನ್ಸ್ಟಾಲ್ ಮಾಡಿದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿಯೂ ಸಹ ಒಮ್ಮೆ ಪ್ರಯತ್ನಿಸಬಹುದು. ನೀವು ಫೋನ್ ಅನ್ನು ಸೇಫ್ ಮೋಡ್‌ನಲ್ಲಿ ನವೀಕರಿಸಬಹುದು ಮತ್ತು ಗ್ರೀನ್ ಲೈನ್ ಕಣ್ಮರೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬಹುದು.
ನಿಮ್ಮ ಫೋನ್ ಅನ್ನು ಫ್ಯಾಕ್ಟರಿ ಮರುಹೊಂದಿಸಲು ಪ್ರಯತ್ನಿಸುವುದು ಅಥವಾ ಅದನ್ನು ಇತ್ತೀಚಿನ ಸಾಫ್ಟ್‌ವೇರ್ ಆವೃತ್ತಿಗೆ ನವೀಕರಿಸುವುದು ಮತ್ತೊಂದು ಆಯ್ಕೆಯಾಗಿದೆ. ಅನೇಕ ಬ್ರ್ಯಾಂಡ್‌ಗಳು ತಮ್ಮ ಫೋನ್‌ಗಳನ್ನು ಅಪ್ಡೇಟ್ ಮಾಡುವ ಮೂಲಕ ಈ ದೋಷವನ್ನು ಸರಿಪಡಿಸಿವೆ. ಇನ್ನೂ ಕಾರ್ಯನಿರ್ವಹಿಸದಿದ್ದರೆ ಮತ್ತು ಈ ಸಮಸ್ಯೆಯು ಹಾರ್ಡ್‌ವೇರ್‌ಗೆ ಸಂಬಂಧಿಸಿದ್ದರೆ, ನೀವು ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿನೀಡಬೇಕಾಗುತ್ತದೆ.
ಇದನ್ನೂ ಓದಿ: ಇಂಟರ್ನೆಟ್ ಹೈ-ಸ್ಪೀಡ್ ಆಗಬೇಕಾದ್ರೆ ಮೊಬೈಲ್ನಲ್ಲಿರುವ ಸಿಮ್ ಅನ್ನು ಜಸ್ಟ್ ಹೀಗೆ ಮಾಡಿ
ಒನ್ಪ್ಲಸ್ನಿಂದ ಮಹತ್ವದ ನಿರ್ಧಾರ:
ಒನ್ಪ್ಲಸ್ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯಲ್ಲಿನ ಹಸಿರು ರೇಖೆಯ ಸಮಸ್ಯೆಯಿಂದ ಗ್ರಾಹಕರನ್ನು ನಿವಾರಿಸಲು, ಕಂಪನಿಯು OnePlus Green Line Worry-free Solution ಎಂಬ ಹೊಸ ಪರಿಹಾರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಒನ್ಪ್ಲಸ್ ತನ್ನ ಗ್ರಾಹಕರಿಗೆ ಜೀವಮಾನದ ವಾರಂಟಿಯನ್ನು ನೀಡುತ್ತಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರಲ್ಲಿ ಹೆಚ್ಚುತ್ತಿರುವ ಡಿಸ್‌ಪ್ಲೇ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ.
ಬಳಕೆದಾರರು ಎದುರಿಸುತ್ತಿರುವ ಈ ಸಮಸ್ಯೆಯ ಕುರಿತು ಕಂಪನಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಫೋನ್‌ಗಳು ಈ ಸಮಸ್ಯೆಯನ್ನು ಎದುರಿಸುತ್ತಿರುವ ಬಳಕೆದಾರರು ತಕ್ಷಣ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದೆ. ಅವರ ಫೋನ್‌ನ ಡಿಸ್‌ಪ್ಲೇ ಅನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ. ಬಳಕೆದಾರರು ತಮ್ಮ ಸಾಧನವನ್ನು ಅಪ್‌ಗ್ರೇಡ್ ಮಾಡಬಹುದು ಅಥವಾ ಅದರ ಡಿಸ್ಪ್ಲೇಯನ್ನು ಬದಲಾಯಿಸಬಹುದು. ಬಳಕೆದಾರರ ಫೋನ್ ವಾರಂಟಿಯಲ್ಲಿಲ್ಲದಿದ್ದರೂ, ಡಿಸ್‌ಪ್ಲೇ ಉಚಿತವಾಗಿ ಬದಲಾಯಿಸಲಾಗುತ್ತದೆ ಎಂದು ಒನ್ಪ್ಲಸ್ ಹೇಳಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ